ರಾಯಚೂರು ವಿವಿ ಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಆರೋಗ್ಯಕರ ಜೀವನಶೈಲಿಗೆ ಯೋಗ ಅಗತ್ಯ- ಪ್ರೊ.ವಿಶ್ವನಾಥ.ಎಂ
ರಾಯಚೂರು ವಿವಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಆರೋಗ್ಯಕರ ಜೀವನಶೈಲಿಗೆ ಯೋಗ ಅಗತ್ಯ- ಪ್ರೊ.ವಿಶ್ವನಾಥ.ಎಂ
ರಾಯಚೂರು, ಜೂ.೨೧: ಯೋಗವು ಪ್ರಾಚೀನ ಅಭ್ಯಾಸವಾಗಿದ್ದು ಇದರ ಹಲವಾರು ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲು ಮತ್ತು ಒತ್ತಡದ ಬದುಕಿನ ದಿನಮಾನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುವುದು ಅತ್ಯಂತ ಸೂಕ್ತವಾಗಿದ್ದು, ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಲು ಯೋಗ ಉತ್ತಮವಾದ ಅಭ್ಯಾಸವೆಂದು ರಾಯಚೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ವಿಶ್ವನಾಥ ಎಂ. ಅವರು ಹೇಳಿದರು.
ರಾಯಚೂರು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಬುಧವಾರ ೯ನೇ ಅಂತರರಾಷ್ಟಿçÃಯ ಯೋಗ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯೋಗ ದೈಹಿಕ ಆರೋಗ್ಯಕ್ಕೆ ಸಂಬAಧ ಪಟ್ಟ ಅಧಿಕ ರಕ್ತದೊತ್ತಡ, ದೇಹದ ತೂಕ ನಿಯಂತ್ರಣ, ದೈಹಿಕ ಸಾಮರ್ಥ್ಯ ಹೆಚ್ಚಳ, ಏಕಾಗ್ರತೆ, ಸ್ನಾಯುಸೆಳೆತ ಸಮಸ್ಯೆ ಹಾಗೂ ಹಲವು ಮಾನಸಿಕ ಸಮಸ್ಯೆ ನಿವಾರಣೆಗೆ ದಾರಿಯಾಗಿ ಇದರಿಂದ ಸಾಕಷ್ಟು ಲಾಭಗಳಿದ್ದು ಪ್ರತಿಯೊಬ್ಬರು ಯೋಗಾಭ್ಯಾಸವನ್ನು ರೂಡಿಸಿಕೊಳ್ಳಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಯೋಗ ಶಿಕ್ಷಕ ಮಲ್ಲಿಕಾರ್ಜುನ ಸ್ವಾಮಿ ಅವರು ಮಾತನಾಡುತ್ತಾ ಯೋಗ ಭಾರತೀಯರು ವಿಶ್ವಕ್ಕೆ ಕೊಟ್ಟ ಅದ್ಭುತ ಕೊಡುಗೆಯಾಗಿದೆ. ದ್ವೇಷ ಮುಕ್ತ, ದುಷ್ಚಟ ಮುಕ್ತ ಸಮಾಜಕ್ಕೆ ಯೋಗಭ್ಯಾಸ ಅಗತ್ಯವಾಗಿದ್ದು, ಯೋಗವು ಪ್ರಾಚೀನ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಅಭ್ಯಾಸವಾಗಿದೆ ಎಂದು ಹೇಳುತ್ತಾ ಹಲವಾರು ವ್ಯಾಯಾಮಗಳು, ಭಂಗಿಗಳು, ಆಸನಗಳು, ಉಸಿರಾಟ ತಂತ್ರಗಳು, ಧ್ಯಾನವನ್ನು ಉಪನ್ಯಾಸಕರಿಗೆ ವಿದ್ಯಾರ್ಥಿಗಳಿಗೆ ಸಿಬ್ಬಂದಿ ವರ್ಗದವರಿಗೆ ಕಲಿಸಿಕೊಟ್ಟರು.
ಇಂಗ್ಲೀಷ್ ವಿಭಾಗ ಉಪನ್ಯಾಸಕ ಅನಿಲ್ ಅಪ್ರಾಳ್ ಸ್ವಾಗತಿಸಿದರು, ದೈಹಿಕ ಶಿಕ್ಷಣ ವಿಭಾಗ ಸಂಯೋಜಕ ಮಲ್ಲಿಕಾರ್ಜುನ.ಎನ್ ನಿರೂಪಿಸಿದರು, ಸಮಾಜಕಾರ್ಯ ವಿಭಾಗ ಉಪನ್ಯಾಸಕ ಬಜಾರಪ್ಪ ವಂದಿಸಿದರು.
ರಾಯಚೂರು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಯರಿಸ್ವಾಮಿ.ಎಂ., ಉಪಕುಲಸಚಿವ ಡಾ.ಜಿ.ಎಸ್.ಬಿರಾದಾರ, ಸಮಾಜ ವಿಜ್ಞಾನದ ಡೀನ್ ಪ್ರೊ.ನುಸ್ರತ್ ಫಾತಿಮಾ, ವಿಜ್ಞಾನ ನಿಕಾಯದ ಡೀನ್ ಪ್ರೊ.ಪಾರ್ವತಿ.ಸಿ.ಎಸ್, ಕಲಾನಿಕಾಯದ ಡೀನ್ ಪ್ರೊ.ಪಿ.ಭಾಸ್ಕರ್, ವಿವಿಧ ವಿಭಾಗಗಳ ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
Comments
Post a Comment