ದಾಸೋತ್ಸವ ಸಮೀತಿಯಿಂದ ವಿಶೇಷ ಉಪನ್ಯಾಸ ಮಾಲಿಕೆ: ಸನ್ಯಾಸಿಗಳು ಅನೇಕ ಕಟ್ಟುಪಾಡುಗಳಿಂದ ಇರಬೇಕಾಗುತ್ತದೆ-ಬಾಳಗಾರು ಶ್ರೀ
ದಾಸೋತ್ಸವ ಸಮೀತಿಯಿಂದ ವಿಶೇಷ ಉಪನ್ಯಾಸ ಮಾಲಿಕೆ: ಸನ್ಯಾಸಿಗಳು ಅನೇಕ ಕಟ್ಟುಪಾಡುಗಳಿಂದ ಇರಬೇಕಾಗುತ್ತದೆ- ಬಾಳಗಾರು ಶ್ರೀ
ರಾಯಚೂರು,ಜೂ.೧೭-ಸನ್ಯಾಸಿಗಳ ಜೀವನ ಅನೇಕ ಕಟ್ಟುಪಾಡುಗಳನ್ನೊಳಗೊಂಡಿರುತ್ತದೆ ನಮ್ಮ ನಡೆ ನುಡಿ ಪರಿಶುದ್ಧವಾಗಿರಬೇಕೆಂದು ಬಾಳಗಾರು ಮಠದ ಕಿರಿಯ ಪೀಠಾಧಿಪತಿಗಳಾದ ಶ್ರೀ ಅಕ್ಷೋಭ್ಯ ರಾಮ ಪ್ರಿಯತೀರ್ಥ ಶ್ರೀಪಾದಂಗಳವರು ನುಡಿದರು.
ಅವರಿಂದು ನಗರದ ಜೋಡುವೀರಾಂಜಿನೇಯ ದೇವಸ್ಥಾನದಲ್ಲಿ ದಾಸೋತ್ಸವ ಸಮಿತಿ ಆಯೋಜಿಸಿದ ವಿಶೇಷ ಉಪನ್ಯಾಸ ಮಾಲಿಕೆಯ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು. ತಾವು ಇತ್ತೀಚೇಗೆ ಲೌಕಿಕ ಜೀವನದಿಂದ ವಿಮುಖರಾಗಿ ಸನ್ಯಾಸ ಜೀವನಕ್ಕೆ ಕಾಲಿರಿಸಿದ್ದು ಸನ್ಯಾಸ ಜೀವನ ಅತ್ಯಂತ ಕಾಠಿಣ್ಯವುಳ್ಳ ಜೀವನವೆಂದ ಅವರು ನಮ್ಮ ನಡೆ ನುಡಿಗೆ ನಾವು ಉತ್ತರದಾಯಿಗಳಾಗಿರಬೇಕೆಂದ ಅವರು ನಮ್ಮ ಪರಿಶುದ್ಧತೆ ಮತ್ತು ದೇವರ ಮೇಲಿನ ಭಕ್ತಿ ನಾವು ಭಕ್ತರಿಗೆ ನೀಡುವ ಮಂತ್ರಾಕ್ಷತೆ ಪ್ರಭಾವವನ್ನು ಹೆಚ್ಚಿಸುತ್ತದೆ ನಾವು ಲೆಕ್ಕಪತ್ರದಲ್ಲಿ ಲೆಕ್ಕಪರಿಶೋಧಕರ ರೀತಿಯಲ್ಲಿ ಅಂಕಿಸಂಖ್ಯೆಗಳನ್ನು ಹೊಂದಿಸಬಹುದು ಆದರೆ ದೇವರ ದೃಷ್ಟಿಯಲ್ಲಿ ನಮ್ಮ ತಪ್ಪು ಬಯಲಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ನಮ್ಮ ನಡಿಗೆ ವೇಗವಿದ್ದರೆ ಸಾಲದು ನಮ್ಮ ಸಾಧನೆ ವೇಗದಿಂದಿರಬೇಕೆಂದ ಅವರು ಸಮಾಜದಲ್ಲಿ ಬದುಕುವ ಪ್ರತಿಯೊಬ್ಬರು ತಾವೊಬ್ಬರೆ ಸಂತೋಷದಿಂದ ಇರದೆ ಅನ್ಯರಿಗೂ ಸಂತೋಷದಿಂದ ಇರುವಂತೆ ವರ್ತಿಸಬೇಕೆಂದ ಅವರು ಮೇಲ್ನೋಟಕ್ಕೆ ಒಳ್ಳೆ ಮಾತಗಳನ್ನಾಡಿದರೆ ಸಾಲದು ಒಳ್ಳೆ ಹೃದಯಯುಳ್ಳವರಾಗಿರಬೇಕೆಂದರು.
ದಾಸೋತ್ಸವ ಸಮಿತಿ ಕಾರ್ಯ ಕೊಂಡಾಡಿ ಅದರ ಕಾರ್ಯ ಚಟುವಟಿಕೆಗಳಿಗೆ ಪ್ರಾರಂಭಿಕವಾಗಿ ಹತ್ತು ಸಾವಿರ .ರೂ ದೇಣಿಗೆ ನೀಡಿ ಇನ್ನು ಹೆಚ್ಚಿನ ಕಾರ್ಯ ನಡೆಯಬೇಕೆಂದು ಆಶಿಸಿ ಆಯೋಜಕರನ್ನು ಮತ್ತು ಜೋಡು ವಿರಾಂಜಿನೇಯ ದೇವಸ್ಥಾನ ಸಮಿತಿ ಅಧ್ಯಕ್ಷರು ಮತ್ತು ಪದಾಧೀಕಾರಿಗಳನ್ನು ಕೊಂಡಾಡಿದರು.
ಉಪನ್ಯಾಸಕಾರರಾಗಿ ಆಗಮಿಸಿದ ಬದರಿನಾಥ ಆಚಾರ್ ಮಾತನಾಡಿ ದಾಸ ಸಾಹಿತ್ಯವನ್ನು ಎಲ್ಲರೂ ಆಸ್ವಾಧಿಸಬಹುದೆಂದ ಅವರು ನಾಡಿನ ಅನೇಕ ದಾಸರು ಸಮಾಜದ ಓರೆ ಕೋರೆಗಳನ್ನು ತಿದ್ದಿದ್ದಾರೆ ಎಂದ ಅವರು ದಾಸರ ತೊಟ್ಟಿಲು ರಾಯಚೂರು ಜಿಲ್ಲೆ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತಯರಾದ ಜಯಲಕ್ಷ್ಮೀ ಮಂಗಳಮೂರ್ತಿ ಮಾತನಾಡಿ ದಾಸ ಸಾಹಿತ್ಯದ ಕೊಡುಗೆ ವಿವರಿಸಿದರು. ಪವನಾಚಾರ್ ಕುರ್ಡಿ ಮಾತನಾಡಿ ಟೀಕಾರಾಯರು ತಮ್ಮ ಸಕಲ ಐಶ್ವರ್ಯ ಬದಿಗೊತ್ತಿ ಹೇಗೆ ಸನ್ಯಸಿಗಳಾದರೋ ಅದೆ ಮಾದರಿಯಲ್ಲಿ ಬಾಳೀಗಾರು ಶ್ರೀಗಳು ಸಹ ತಮ್ಮ ಲೌಕಿಕ ಪ್ರಪಂಚದ ಸುಖ ಭೋಗಗಳನ್ನು ಬದಿಗೊತ್ತಿ ಸನ್ಯಸಿಗಳಾಗಿದ್ದಾರೆ ಎಂದರು.
ಪ್ರಣೇಶ ಕುಲಕರ್ಣಿ ಶ್ರೀಗಳ ಪೂರ್ವಾಶ್ರಮದ ಪರಿಚಯ ಮಾಡಿ ಅವರ ಸಾಧನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಸ್ತಾವಿಕವಾಗಿ ದಾಸೋತ್ಸವ ಸಮಿತಿ ಅಧ್ಯಕ್ಷ ವೆಂಕಟರಾವ್ ಕುಲಕರ್ಣೀ ಮಾತನಾಡಿ ಕಳೆದ ಐದು ವರ್ಷದಿಂದ ವಾರ್ಷಿಕ ಕ್ರಿಯಾರೂಪದಂತೆ ಕಾರ್ಯಕ್ರಮ ಆಯೋಜಿಸುತ್ತ ಬಂದಿದ್ದು ಪ್ರತಿ ಜಿಲ್ಲೆಯಲ್ಲೂ ಇಂತಹ ಕಾರ್ಯಕ್ರಮ ಮಾಡುತ್ತೇವೆಂದರು.
ತಾರಾನಾಥ ಜೇಗರಕಲ್ ಸ್ವಾಗತಿಸಿದರು, ಭಾರತಿ ಕುಲಕರ್ಣೀ ಪ್ರಾರ್ಥಿಸಿದರು,ವೆಂಕಟೇಶ ನವಲಿ ನಿರೂಪಿಸಿದರು. ವೇದಿಕೆ ಮೇಲೆ ಜೋಡು ವಿರಾಂಜಿನೇಯ ದೇವಸ್ಥಾನ ಸಮಿತಿ ಅಧ್ಯಕ್ಷ ದಾನಪ್ಪ ಯಾದವ ಇದ್ದರು . ಕಾರ್ಯಕ್ರಮದಲ್ಲಿ ದಾಸೋತ್ಸವ ಸಮಿತಿ ಪದಾಧೀಕಾರಿಗಳು, ಅನೇಕ ದಾಸ ಸಾಹಿತ್ಯಾಸಕ್ತರು ಇದ್ದರು.
ಲೇಖನ ಉತ್ತಮವಾಗಿ ಮೂಡಿಬಂದಿದೆ
ReplyDelete