ಆದಷ್ಟು ಶೀಘ್ರದಲ್ಲಿ ಅಧುಸೂಚನೆ ಹೊರಡಿಸಬೇಕು: ಏಮ್ಸ್ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಸಿಎಂ ಶಿಫಾರಸ್ಸು ಸ್ವಾಗತಾರ್ಹ- ಕಳಸ

 


ಆದಷ್ಟು ಶೀಘ್ರದಲ್ಲಿ ಅಧುಸೂಚನೆ ಹೊರಡಿಸಬೇಕು:

ಏಮ್ಸ್ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಸಿಎಂ ಶಿಫಾರಸ್ಸು ಸ್ವಾಗತಾರ್ಹ-ಕಳಸ

ರಾಯಚೂರು,ಜೂ.೧೮-ಜಿಲ್ಲೆಯ ಏಕೈಕ ಹೆಸರನ್ನು ಏಮ್ಸ್ ಸ್ಥಾಪನೆಗೆ ಶಿಫಾರಸ್ಸು ಮಾಡಿ ಕೇಂದ್ರ ಸರ್ಕಾರಕ್ಕೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದು ಸ್ವಾಗತಾರ್ಹವಾಗಿದೆ ಎಂದು ಏಮ್ಸ್ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಬಸವರಾಜ ಕಳಸ ಹೇಳಿದರು.

ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಏಮ್ಸ್ ಹೋರಾಟವು ಕಳೆದ ೪೦೦ ದಿನಗಳಿಂದ ನಡೆಯುತ್ತಿದ್ದು ೪೦೧ನೇ ದಿನಕ್ಕೆ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾರವರಿಗೆ ಸಿಎಂ ರಾಯಚೂರಿನ ಏಕೈಕ ಹೆಸರನ್ನು ಶಿಫಾರಸ್ಸು ಮಾಡಿ ಪತ್ರ ಬರೆದಿದ್ದು ಹೋರಾಟಕ್ಕೆ ಭಾಗಶ ಜಯ ಸಿಕ್ಕಂತಾಗಿದೆ ಎಂದರೆ ತಪ್ಪಾಗಲಾರದು ಎಂದ ಅವರು ಶಿಫಾರಸ್ಸು ಪತ್ರಕ್ಕೆ ಮನ್ನಣೆ ದೊರೆಯಬೇಕೆಂದರೆ ಈ ಕೂಡಲೆ ಜಿಲ್ಲೆಯ ಸಂಸದ ರಾಜಾ ಅಮರೇ ನಾಯಕರವರು ಹೋರಾಟ ಸಮಿತಿಯ ನೀಯೋಗವನ್ನು ಕೇಂದ್ರ ಸರ್ಕಾರದ ಬಳಿ ಕೊಂಡೊಯ್ಯದು ಇನ್ನಷ್ಟು ಒತ್ತಡವನ್ನು ಹೇರಬೇಕೆಂದ ಅವರು ಆದಷ್ಟು ಶೀಘ್ರದಲ್ಲೆ ಅಧಿಸೂಚನೆ ಹೊರಡಿಸಬೇಕೆಂದು ಒತ್ತಾಯಿಸಿದರು.

ಇತ್ತೀಚೆಗೆ ಜಿಲ್ಲೆಯವರೆ ಆದ ಸಣ್ಣ ನೀರವರಿ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ರವರು ಸಿಎಂರವರಿಗೆ ರಾಯಚೂರು ಏಕೈಕ ಹೆಸರನ್ನು ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸದ್ದರು ಅಲ್ಲದೆ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ರಾಯಚೂರಲ್ಲಿ ಏಮ್ಸ್ ಸ್ಥಾಪನೆ ಬಗ್ಗೆ ಭರವಸೆ ನೀಡಲಾಗಿತ್ತು ಎಂದರು.

ಏಮ್ಸ್ ಘೋಷಣೆ ಮಾಡುವವರೆಗೂ ನಮ್ಮ ಹೋರಾಟ ನಿರಂತರವಾಘಿ ಮುಂದುವರೆಯುತ್ತದೆ ಎಂದ ಅವರು ಎಮ್ಸ್ ನಮ್ಮ ಹಕ್ಕು ಅದನ್ನು ಯಾರಿಂದಲು ಕಿತ್ತುಕೊಳ್ಳಲು ಸಾಧ್ಯವಿಲ್ಲವೆಂದರು. 

ಈ ಸಂದರ್ಭದಲ್ಲಿ ಅಶೋಕ ಕುಮಾರ್ ಜೈನ್, ಎನ್.ಮಹಾವೀರ,ಜಾನ್ ವೆಸ್ಲಿ, ಜಸವಂತರಾವ್ ಕಲ್ಯಾಣಕಾರಿ, ವಿನಯ್ ಚಿತ್ರಗಾರ್ ಇದ್ದರು. 

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್