ಎಪಿಎಂಸಿ ಕಾಯ್ದೆ ಹಿಂಪಡೆಯಲು ಸಚಿವ ಸಂಪುಟ ಸಭೆ ಒಪ್ಪಿಗೆ ಸ್ವಾಗತಾರ್ಹ-ಮಾಲಿಪಾಟೀಲ
ಎಪಿಎಂಸಿ ಕಾಯ್ದೆ ಹಿಂಪಡೆಯಲು ಸಚಿವ ಸಂಪುಟ ಸಭೆ ಒಪ್ಪಿಗೆ ಸ್ವಾಗತಾರ್ಹ- ಮಾಲಿಪಾಟೀಲ
ರಾಯಚೂರು,ಜೂ.೧೭-ಈ ಹಿಂದೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಎಪಿಎಂಸಿ ಕಾಯ್ದೆಯನ್ನು ರಾಜ್ಯ ಸರ್ಕಾರ ಹಿಂಪಡೆಯಲು ಸಚಿವ ಸಂಪುಟ ಅಸ್ತು ಎಂದಿರುವುದು ಸ್ವಾಗತಾರ್ಹವೆಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಹೇಳಿದರು.
ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ರೈತರಿಗೆ ಮತ್ತು ಕೃಷಿಗೆ ಮಾರಕವಾಗಿದ್ದ ಎಪಿಎಂಸಿ ಕಾಯ್ದೆಯನ್ನು ರಾಜ್ಯ ಸರ್ಕಾರ ಹಿಂಪಡೆದಿದ್ದು ರೈತರ ಹೋರಾಟಕ್ಕ ಸಿಕ್ಕ ಜಯವಾಗಿದೆ ಎಂದ ಅವರು ಅದೇ ರೀತಿ ಇನ್ನೂ ಎರೆಡು ಕಾಯ್ದೆಯನ್ನು ವಾಪಸ್ಸು ಪಡೆಯಬೇಕೆಂದ ಅವರು ರೈತರಿಗೆ ಮಾರಕವಾದ ಕಾಯ್ದೆಗಳನ್ನು ಹಿಂದಕ್ಕೆ ಪಡೆಬೇಕೆಂದರು .
ಬಡವರಿಗೆ ನೀಡುವ ಅಕ್ಕಿಯಲ್ಲಿ ರಾಜಕೀಯ ಸಲ್ಲದು ಎಂದ ಅವರು ಕೇಂದ್ರ ಸರ್ಕಾರ ೫ ಕೇಜಿ ಅಕ್ಕಿಯನ್ನು ಕೂಡಲೆ ಬಿಡುಡೆಗೊಳಿಸಬೇಕೆಂದ ಅವರು ಅಕ್ಕಿ ಕೇಂದ್ರಸರ್ಕಾರ ನೀಡದ ಪಕ್ಷದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಭತ್ತ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ ಇಲ್ಲಿ ಸಹ ಖರೀದಿಸಬಹುದೆಂದರು.
ಈ ಸಂದರ್ಭದಲ್ಲಿ ಪ್ರಭಾಕರ್ ಪಾಟೀಲ,ಬೂದಯ್ಯಸ್ವಾಮಿ,ನರಸಿಂಹಲು, ಚಂದ್ರು ಭಂಡಾರಿ ಇತ್ತರರು ಇದ್ದರು
Comments
Post a Comment