ಕುಂಭಕೋಣ: ಶ್ರೀ ವಿಜಯೀಂದ್ರತೀರ್ಥರ ಆರಾಧನಾ ಅಂಗವಾಗಿ ತಿರುಪತಿ ಶೇಷವಸ್ತ್ರ ಸಮರ್ಪಣೆ.
ಕುಂಭಕೋಣ: ಶ್ರೀ ವಿಜಯೀಂದ್ರತೀರ್ಥರ ಆರಾಧನಾ ಅಂಗವಾಗಿ ತಿರುಪತಿ ಶೇಷವಸ್ತ್ರ ಸಮರ್ಪಣೆ. ರಾಯಚೂರು,ಜೂ.16- ತಮಿಳುನಾಡಿನ ಕುಂಭಕೋಣ ಶ್ರೀ ವಿಜಯೀಂದ್ರತೀರ್ಥರ ಆರಾಧನೆ ಅಂಗವಾಗಿ ತಿರುಪತಿ ತಿಮ್ಮಪ್ಪನ ಶೇಷವಸ್ತ್ರವನ್ನು ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥರು ಸಮರ್ಪಿಸಿದರು.
ನಂತರ ಶ್ರೀ ವಿಜಯೀಂದ್ರತೀರ್ಥರ ಮೂಲ ಬೃಂದಾವನಕ್ಕೆ ಪೀಠಾಧಿಪತಿಗಳು ಪಂಚಾಮೃತ ಅಭಿಷೇಕ ನೆರವೇರಿಸಿದರು.
ಶ್ರೀಕರ ಲಕ್ಷ್ಮೀ ನರಸಿಂಹ ದೇವರ ದೇವಸ್ಥಾನದ ರಜತ ದ್ವಾರವನ್ನು ಪೀಠಾಧಿಪತಿಗಳು ಉದ್ಘಾಟಿಸಿದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
Comments
Post a Comment