ಯೋಗದಿಂದ ಒತ್ತಡ ಮುಕ್ತ ಜೀವನ ಸಾಧ್ಯ- ನಿಖಿಲ್.ಬಿ

 


ಯೋಗದಿಂದ ಒತ್ತಡ ಮುಕ್ತ ಜೀವನ ಸಾಧ್ಯ- ನಿಖಿಲ್.ಬಿ          ರಾಯಚೂರು,ಜೂ.21- ಜಿಲ್ಲಾ ಪೊಲೀಸ್ ವತಿಯಿಂದ `೯ ನೇ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ' ಯನ್ನು ಆಚರಿಸಲಾಯಿತು.     ಪೊಲೀಸ್ ಅಧೀಕ್ಷಕರಾದ  ನಿಖಿಲ್ ಬಿ.ರವರು  ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಿದರು.                                                     ಕಳೆದ ೩ ದಿನಗಳಿಂದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಯೋಗ ತರಬೇತಿ ಶಿಬಿರವನ್ನು ಏರ್ಪಡಿಸಲಾಗಿತ್ತು. ಯೋಗ ಶಿಕ್ಷಕರಾದ  ಮಲ್ಲಿಕಾರ್ಜುನ ಸ್ವಾಮಿ, ಪತ್ರಿಕಾ ಛಾಯಾಗ್ರಾಹಕರು, ದೇವೆಂದ್ರಪ್ಪ, ದೈಹಿಕ ಶಿಕ್ಷಕರು, ಇಡಪನೂರು,  ನಾಗಭೂಷಣ್, ಶಿಕ್ಷಕರು, ಮಲಿಯಾಬಾದ್ ರವರಿಂದ ಯೋಗ  ತರಬೇತಿ ನೀಡಲಾಯಿತು.ಶಿಬಿರದ ಕೊನೆಯಲ್ಲಿ ಡಿ.ಎ.ಆರ್. ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸದಪ್ಪ ಅಂಬಿ, ಎ.ಪಿ.ಸಿ. ರವರ ಪತ್ನಿ ಲಕ್ಷ್ಮೀಬಾಯಿ   ಸಂಗಮೇಶ್ ಕೋಲ್‌ಕಾರ ಇವರು ರಾಜ್ಯಮಟ್ಟದಲ್ಲಿ ಯೋಗ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪ್ರಶಸ್ತಿಗಳನ್ನು ಪಡೆದಿರು  ಯೋಗ ತರಬೇತುದಾರರಿಗೆ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ  ನಿಖಿಲ್ ಬಿ. ಐಪಿಎಸ್, ಪೊಲೀಸ್ ಅಧೀಕ್ಷಕರು, ಮಾತನಾಡಿ ಯೋಗದಿಂದ ವ್ಯಕ್ತಿಯ ದೈಹಿಕ ಮತು ್ತ ಮಾನಸಿಕ ಆರೋಗ್ಯ ಸದೃಢವಾಗುವುದೆಂದು ಹೇಳಿದ ಅವರು ಯೋಗವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಪ್ರತಿದಿನ ಯೋಗ ಅಭ್ಯಾಸ ಮಾಡುವ ಮೂಲಕ ಕರ್ತವ್ಯ ಸಹಜ ಒತ್ತಡಗಳಿಂದ ಮುಕ್ತಿ ಪಡೆದು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತೆ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕರೆ ಕೊಟ್ಟರು.ಕಾರ್ಯಕ್ರಮವನ್ನು ಬೆಳಿಗ್ಗೆ ೬ ಗಂಟೆಯಿಂದ ೭ ಗಂಟೆಯವರೆಗೆ ಜಿಲ್ಲಾ ಪೊಲೀಸ್ ಕವಾಯತುಮೈದಾನದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಆಧೀಕ್ಷಕರು, ಆಡಳಿತಾಧಿಕಾರಿಗಳು, ಪೊಲೀಸ್ ಉಪಾಧೀಕ್ಷಕರು ರಾಯಚೂರು ಉಪವಿಭಾಗ ಮತ್ತು ಡಿ.ಎ.ಆರ್. ಘಟಕ, ಹಾಗೂ ೩೦೦ ಕ್ಕಿಂತ ಹೆಚ್ಚು ಜನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು. 


 

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ