ವಿಧಾನ ಪರಿಷತ್ ಚುನಾವಣೆ: ಎನ್.ಎಸ್. ಬೋಸರಾಜು ರಿಂದ ನಾಮಪತ್ರ ಸಲ್ಲಿಕೆ
ವಿಧಾನ ಪರಿಷತ್ ಚುನಾವಣೆ: ಎನ್.ಎಸ್. ಬೋಸರಾಜು ರಿಂದ ನಾಮಪತ್ರ ಸಲ್ಲಿಕೆ
ರಾಯಚೂರು, ಜೂ.20- ವಿಧಾನ ಪರಿಷತ್ ಗೆ ಜೂ.30ರಂದು ನಡೆಯುವ ಚುನಾವಣೆಗೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಬೋಸರಾಜು ಅವರಿಂದು ಬೆಂಗಳೂರಿನಲ್ಲಿ ಚುನಾವಣೆ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ಬಿಜೆಪಿ ಪಕ್ಷದ ಪರಿಷತ್ ಸದಸ್ಯರು ಅವಧಿಪೂರ್ವ ರಾಜೀನಾಮೆ ನೀಡಿದ ನಂತರ ತೆರವಾದ ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತಿದ್ದು ಕಾಂಗ್ರೆಸ್ ನಿಂದು ಮೂವರಿಗೆ ಅವಕಾಶ ಕಲ್ಪಿಸಲಾಗಿದೆ . ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದರು.
ಪಕ್ಷದ ವಿವಿಧ ಹುದ್ದೆಗಳನ್ನು ಅಲಂಕರಿಸಿ ಸುಧೀರ್ಘವಾಗಿ 53 ವರ್ಷಗಳ ಕಾಲ ಪಕ್ಷಕ್ಕಾಗಿ ಸೇವೆ ಸಲ್ಲಿಸಿದನ್ನು ಪರಿಗಣಿಸಿ ಎನ್ಎಸ್ ಬೋಸುರಾಜು ಅವರಿಗೆ ಕಾಂಗ್ರೆಸ್
ಹೈಕಮಾಂಡ್ ಸಚಿವರನ್ನಾಗಿ ಮಾಡಿದೆ.
ಹೈಕಮಾಂಡ್ ಸಚಿವರನ್ನಾಗಿ ಮಾಡಿದೆ.
ವಿಧಾನ ಪರಿಷತ್ ಚುನಾವಣೆಗೆ ಸಚಿವ ಎನ್ಎಸ್ ಬೋಸರಾಜು ಸೇರಿ ಜಗದೀಶ್ ಶೆಟ್ಟರ್, ತಿಪ್ಪಣ್ಣ ಕಮಕನೂರು ಅವರಿಗೆ ಪಕ್ಷ ಅವಕಾಶ ನೀಡಿದೆ.
Comments
Post a Comment