ಯಾರಾಗುವರು ಲೋಕಸಭಾ ಚುನಾವಣೆ ಅಭ್ಯರ್ಥಿಗಳು: ಮೂರು ಪಕ್ಷಗಳೂ ಹೊಸ ಮುಖಗಳಿಗೆ ಆದ್ಯತೆ ನೀಡಲಿವೆಯೇ ?


 ಯಾರಾಗುವರು ಲೋಕಸಭಾ ಚುನಾವಣೆ ಅಭ್ಯರ್ಥಿಗಳು:

ಮೂರು ಪಕ್ಷಗಳೂ ಹೊಸ ಮುಖಗಳಿಗೆ ಆದ್ಯತೆ ನೀಡಲಿವೆಯೇ?

ರಾಯಚೂರು,ಜೂ.೧೫- ವಿಧಾನ ಸಭೆ ಚುನಾವಣೆ ಪಲಿತಾಂಶ ಹೊರಬಿದ್ದು ಒಂದು ತಿಂಗಳು ಗತಿಸಿದ್ದು ಕಾಂಗ್ರೆಸ್ ಪಕ್ಷವು ಅಧಿಕಾರ ಗದ್ದುಗೆ ಏರಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಹೊಸ ಸರ್ಕಾರ ಸಹ ಅಸ್ತಿತ್ವಕ್ಕೆ ಬಂದಿದೆ ಚುನಾವಣೆ ಪೂರ್ವದಲ್ಲಿ ಹೇಳಿದಂತೆ ಐದು ಗ್ಯಾರಂಟಿಗಳನ್ನು ಜಾರಿ ಮಾಡಲು ಮುಂದಾಗಿದ್ದು ' ಶಕ್ತಿ' ಎಂಬ ಮಹಿಳೆಯರಿಗೆ ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣ ಯೋಜನೆಗೆ ಹಸಿರು ನಿಶಾನೆ ತೋರಿದ್ದಾರೆ ಇನ್ನು ನಾಲ್ಕು ಗ್ಯಾರಂಟಿ ನೀಡುವ ಧಾವಂತದಲ್ಲಿ ಸರ್ಕಾರ ಕಾರ್ಯ ಪ್ರವೃತ್ತವಾದಂತಿದೆ.

ಸದ್ಯ ವಿಧಾನ ಸಭೆ ಚುನಾವಣೆಯಲ್ಲಿ ಗ್ಯಾರಂಟಿಗಳಿಂದ ಕಾಂಗ್ರೆಸ್ ಅಧಿಕಾರಕ್ಕೆ ಏರಿದೆ ಎಂಬುದು ಜನಿಜನಿತವಾಗಿದ್ದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಲೋಕಸಭೆ ಸ್ಥಾನಗಳನ್ನು ಅಧಿಕ ಸಂಖ್ಯೆಯಲ್ಲಿ ಪಡೆಯಬೇಕೆಂಬ ಅಸೆ ಸಹಜವಾಗಿ ಕಾಂಗ್ರೆಸ್ ನಾಯಕರಲ್ಲಿ ಚಿಗಿರೊಡೆದಿದೆ ರಾಜ್ಯದಲ್ಲಿ ಒಟ್ಟು ೨೮ ಲೋಕಸಭಾ ಸ್ಥಾನಗಳಿದ್ದು ಅದರಲ್ಲಿ ಸದ್ಯ ಬಿಜೆಪಿ ೨೬, ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಒಂದು ಸ್ಥಾನ ಗಳಿಸಿದೆ.

ರಾಯಚೂರು ಜಿಲ್ಲೆಯ ಐದು ಮತ್ತು ಯಾದಗೀರಿ ಜಿಲ್ಲೆಯ ಮೂರು ವಿಧಾನ ಸಭಾ ಕ್ಷೇತ್ರಗಳನ್ನೊಳಗೊಂಡು ರಾಯಚೂರು ಲೋಕಸಭಾ ಕ್ಷೇತ್ರ ಒಳಪಡುತ್ತಿದ್ದು ಹಾಲಿ ಸಂಸದರಾಗಿ ರಾಜಾ ಅಮರೇಶ್ವರ ನಾಯಕ ಇದ್ದಾರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಮಣೆ ಹಾಕಲಾಗುತ್ತದೆಯೋ ಅಥವಾ ಹೊಸ ಮುಖಗಳಿಗೆ ಪಕ್ಷ ಆದ್ಯತೆ ನೀಡಬಹುದೆಂಬ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಈಗಾಗಲೆ ಸಾಮಾಜಿಕ ಜಾಲತಾಣದಲ್ಲಿ ಯುವಕರಿಗೆ ಮತ್ತು ಹೆಚ್ಚಿನ ಕ್ರಿಯಾಶೀಲರಾದವರಿಗೆ ಬಿಜೆಪಿ ಟಿಕೆಟ್ ನೀಡಬೇಕೆಂದು ಒತ್ತಾಯಿಸಲಾಗುತ್ತಿದೆ.


ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿ ಹುಡಕಾಟ ಅನಿವಾರ್ಯ ಏಕೆಂದರೆ ಅಲ್ಲಿ ಈ ಹಿಂದೆ ಸಂಸದರಾಗಿದ್ದ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಬಿ.ವಿ.ನಾಯಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷದಿಂದ ಮಾನ್ವಿ ಕ್ಷೇತ್ರದಿಂದ ಸ್ಪರ್ದಿಸಿ ಪರಾಭವಗೊಂಡಿದ್ದಾರೆ . ಕಾಂಗ್ರೆಸ್ ಪಕ್ಷದಲ್ಲಿ ಸದ್ಯ ಯಾವುದೆ ಅಭ್ಯರ್ಥಿಗಳ ಹೆಸರು ಮುಂಚೂಣಿಯಲ್ಲಿಲವಾದರೂ ಸದ್ಯ ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷವು ಈ ಬಾರಿಯ ಲೋಕಸಭಾ ಚುನಾವಣೆಯನ್ನು ಹಗುರವಾಗಿ ಪರಿಗಣೀಸುವುದಿಲ್ಲ ಕೆಪಿಸಿಸಿ ಅಧ್ಯಕ್ಷರು ಹೇಳಿದಂತೆ  ನಾವು ಈ ಬಾರಿ ಅತಿ ಹೆಚ್ಚು ಸ್ಥಾನ ರಾಜ್ಯದಲ್ಲಿ ಪಡೆಯುತ್ತೇವೆಂಬ ಹುಮ್ಮಸಿನಲ್ಲಿದ್ದು ಅದನ್ನು ಅವರು ಬಹಿರಂಗವಾಗಿ ತಮ್ಮ ಮನದಾಳದ ಮಾತನ್ನು ಹೊರಹಾಕಿದ್ದಾರೆ .

ಕಾಂಗ್ರೆಸ್ ಪಕ್ಷದಲ್ಲಿ ಹೊಸ ಅಭ್ಯರ್ಥಿಗಳನ್ನು ಸಿದ್ದಮಾಡಲೇ ಬೇಕಾಗಿದೆ ಸದ್ಯ ಜಿಲ್ಲಾ ಕಾಂಗ್ರೆಸ್ ನ ಅಧ್ಯಕ್ಷ ಸ್ಥಾನ ಖಾಲಿಯಿದ್ದು ಜಿ.ಪಂ ,ತಾ.ಪಂ ಚುನಾವಣೆಯನ್ನು ಸಮರ್ಥವಾಗಿ ನಿಭಾಯಿಸಲು ಮತ್ತು ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಬೆನ್ನೆಲುಬುವಾಗಬಹುದಾದ ವರ್ಚಸ್ಸುಳ್ಳ ವ್ಯಕ್ತಿಯನ್ನೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಪಕ್ಷ ಮಾಡಬೇಕಿದೆ ಜಿಲ್ಲೆಯಲ್ಲಿ ಕಾಂಗ್ರೆಸ್ ನಲ್ಲಿ ಬಣಿಗಳಿದ್ದು ಅದನ್ನು ನಿಯಂತ್ರಿಸಲು ಮತ್ತು ಉಭಯ ಬಣಗಳಿಗೆ ಸಹ್ಯವಾಗುವ ವ್ಯಕ್ತಿಗೆ ಅಧ್ಯಕ್ಷ ಗಾದಿ ನೀಡಬೇಕಿದೆ.

ಜೆಡಿಎಸ್ ಪಕ್ಷವು ಸಹ ಲೋಕಸಭಾ ಚುನಾವಣೆಯಲ್ಲಿ ಸ್ಪರ್ದಿಸುತ್ತದೆ ವಿಧಾನ ಸಭೆ ಚುನಾವಣೆಯಲ್ಲಿ  ಜಿಲ್ಲೆಯಲ್ಲಿ ಒಂದು ಸ್ಥಾನವನ್ನು ಮಾತ್ರ ಗಳಿಸಿದ ಜೆಡಿಎಸ್ ಲೋಕಸಭಾ ಚುನಾವಣೆಯಲ್ಲಿ ತನ್ನ ಸಾಮರ್ಥ್ಯ ಒರೆಗೆ ಹಚ್ಚುತ್ತದೆ ಈಗಾಗಲೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದಂತೆ ನಮ್ಮ ಪಕ್ಷಕ್ಕೆ ಸ್ಥಾನಗಳು ಕಡಿಮೆ ಸಂಖ್ಯೆಯಲ್ಲಿ ಲಭಿಸಿರಬಹುದು ಆದರೆ ನಾವು ರಾಜಕೀಯವಾಗಿ ಸಕ್ರಿಯವಾಗಿ ಇರುತ್ತೇವೆ ಎಂದಿದ್ದಾರೆ ಅವರ ಹೇಳಿಕೆ ತಳಹದಿಯ ಮೇಲೆ ಹೇಳುವುದಾದರೆ ಜೆಡಿಎಸ್ ಪಕ್ಷವು ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಅಖಾಡಕ್ಕೆ ಇಳಿಯುತ್ತದೆ ಎಂಬುದು ಪುಷ್ಟಿಕರಿಸುತ್ತದೆ.

ಲೋಕಸಭಾ ಚುನಾವಣೆಗೆ ಇನ್ನು ಒಂದು ವರ್ಷ ಕಾಲವಾಕಾಶವಿದ್ದರೂ ಐದು ವರ್ಷದ ಅಧಿಕಾರವಧಿಯ ಲೋಕಸಭೆಯು ಕೊನೆ ವರ್ಷದಲ್ಲಿ ಚುನಾವಣೆ ವರ್ಷವಾಗಿದ್ದರಿಂದ ಎಲ್ಲಾ ಪಕ್ಷಗಳು ಹೆಚ್ಚಿನ ಮಹತ್ವ ರಾಜಕೀಯ ತಾಲೀಮಿಗೆ ಮೀಸಲಿಡುತ್ತದೆ ಎಂಬುದು ಈ ಹಿಂದಿನ ಎಲ್ಲ ಚುನಾವಣೆಯಲ್ಲಿ ದೇಶ ಕಂಡಿದೆ.

ಮೋದಿ ಅಲೆಯಲ್ಲಿ ತೇಲಿ ಬರಬಹುದೆಂಬ ಲೆಕ್ಕಾಚಾರದಲ್ಲಿ ಕಣಕ್ಕಿಳಿದರೆ ಅಚ್ಚರಿ ಫಲಿತಾಂಶ ಬರಬಹುದೆಂಬ ಮಾತನ್ನು ವಿಧಾನಸಭೆ ಚುನಾವಣೆ ತೋರಿಸಿದೆ ಅಭ್ಯರ್ಥಿಯ ಕಾರ್ಯ ಮತ್ತು ವರ್ಚಸ್ಸು ಹೆಚ್ಚು ಕೆಲಸ ಮಾಡುತ್ತದೆ ಲೋಕಸಭಾ ಚುನಾವಣೆಯಲ್ಲಿ ಮತದಾರರು ಕೇಂದ್ರದ ಆಡಳಿತ ನೋಡಿ ಮತ ಹಾಕುತ್ತಾರೆ ಎಂಬ ಪ್ರತೀತಿಯಿದ್ದರು ಕಾಲ ಕಾಲಕ್ಕೆ ತಕ್ಕಂತೆ ಎಲ್ಲ ಕ್ಷೇತ್ರಗಳಲ್ಲಿ ಬದಲಾವಣೆ ಕಂಡಂತೆ  ರಾಜಕೀಯ ಕ್ಷೇತ್ರವು ಬದಲಾವಣೆ ಕಾಣುತ್ತಿದೆ ಲೋಕಸಭಾ ಚುನಾವಣೆಗೆ ಹೆಚ್ಚಿನ ಸಮಯವಿದ್ದರೂ ಈಗಿನಿಂದಲೆ ರಾಜಕೀಯ ಪಕ್ಷಗಳು ತಮ್ಮ ಪಕ್ಷ ಸಂಘಟನೆ ಮತ್ತು ಪ್ರಭಲ ಅಭ್ಯರ್ಥೀಗಳನ್ನು ಹಾಕುವುದಂತು ನಿಶ್ಚಿತವಾಗಿದೆ ಸ್ವಲ್ಪ ಮತಗಳ ಅಂತರದಲ್ಲಿ ಸೋತಿರುವ ಶಾಸಕರು ಜಿಲ್ಲೆಯಲ್ಲಿ ವರ್ಚಸ್ಸು ಮತ್ತು ಎದುರಾಳಿಗೆ ಪ್ರಭಲ ಪೈಪೋಟಿ ನೀಡುವ ವ್ಯಕ್ತಿಗಳಿಗೆ ಚುನಾವಣೆಯಲ್ಲಿ ಮೂರು ಪಕ್ಷಗಳು ಮನ್ನಣೆ ನೀಡಿದರು ನೀಡಬಹುದು ವಿಧಾನ ಸಭೆ ಚುನಾವಣೆಯ ಮಾದರಿಯಲ್ಲೆ ಲೋಕಸಭಾ ಕ್ಷೇತ್ರಾದ್ಯಂತ ಜನರ ನಾಡಿ ಮಿಡಿತ ಅರಿಯಲು ಸಮೀಕ್ಷೆ ಸಹ ನಡೆಸಲು ಮುಂದಾಗಬಹುದು ಒಟ್ಟಾರೆ ಈ ಬಾರಿಯ ಲೋಕಸಭಾ ಚುನಾವಣೆ ತೀರ್ವ ಹಣಾಹಣಿಯಿಂದಿರುವುದಂತು ಸತ್ಯದ ಸಂಗತಿಯಾಗಿದೆ ಮತದಾರ ಯಾರನ್ನು ಪುರಸ್ಕರಿಸುತ್ತಾನೆ ನೋಡಬೇಕು.


Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್