ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರಾಯಚೂರು ರಿಪೋರ್ಟರ‍್ಸ್ ಗಿಲ್ಡ್ ನಿಂದ ಜು.30 ರಂದು ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ- ಅರ್.ಗುರುನಾಥ
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರಾಯಚೂರು ರಿಪೋರ್ಟರ‍್ಸ್ ಗಿಲ್ಡ್ ನಿಂದ
ಜು.30 ರಂದು ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ-ಅರ್.ಗುರುನಾಥ
ರಾಯಚೂರು,ಜು.೨೭-ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಹಾಗೂ ರಾಯಚೂರು ರಿಪೋಟರ‍್ಸ್ ಗಿಲ್ಡ್ ವತಿಯಿಂದ ಜು.3೦ ರಂದು ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಗುರನಾಥ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಕೆಯುಡ್ಬು÷್ಲಜೆ ಹಾಗೂ ಅರ್‌ಅರ್‌ಜಿ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವು ಪತ್ರಿಕಾ ದಿನಾಚರಣೆ ಮತ್ತು ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರಿಗೆ ಹಾಗೂ ಪತ್ರಿಕಾ ಛಾಯಾಗ್ರಹಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ ಎಂದ ಅವರು ಜು.3೦ ರಂದು ಬೆಳಿಗ್ಗೆ 11 ಗಂಟೆಗೆ ನಗರದ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ಪತ್ರಿಕಾ ದಿನಾಚರಣೆ ಸಮಾರಂಭ ಆಯೋಜಿಸಲಾಗಿದ್ದು ಕಾರ್ಯಕ್ರಮ ಉದ್ಘಾಟನೆಯನ್ನು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ನೆರವೇರಿಸಲಿದ್ದು , ಪ್ರಶಸ್ತಿ ಪ್ರದಾನವನ್ನು ವೈದ್ಯಕೀಯ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣ ಪ್ರಕಾಶ ಪಾಟೀಲ ಮಾಡಲಿದ್ದು, ಅತಿಥಿ ಉಪನ್ಯಾಸವನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ನೀಡಲಿದ್ದಾರೆಂದರು.
ವಿಶೇಷ ಅಹ್ವಾನಿತರಾಗಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಆಗಮಿಸಲಿದ್ದು , ಮುಖ್ಯ ಅತಿಥಿಗಳಾಗಿ ಸಂಸದ ಅಮರೇಶ್ವರ ನಾಯಕ, ಶಾಸಕರಾದ ಡಾ.ಎಸ್.ಶಿವರಾಜ ಪಾಟೀಲ,ಬಸನಗೌಡ ದದ್ದಲ್, ಹಂಪಯ್ಯ ನಾಯಕ, ಹಂಪನಗೌಡ ಬಾದರ್ಲಿ,ಮಾನಪ್ಪ ಡಿ.ವಜ್ಜಲ,ಅರ್.ಬಸನಗೌಡ ತುರವಿಹಾಳ, ಕರೆಮ್ಮ.ಜಿ.ನಾಯಕ, ವಿಧಾನ ಪರಿಷತ್ ಸದಸ್ಯರಾದ ಶರಣಗೌಡ ಪಾಟೀಲ ಬಯ್ಯಾಪೂರು, ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ್ ನಾಯಕ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ, ಜಿ.ಪಂ ಸಿಇಓ ಶಶಿಧರ ಕುರೇರ, ವಾರ್ತಾ ಮತ್ತು ಸಾರ್ವಜಿನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಡಿ.ಎ.ಖಾದರ್ ಶಾ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷರಾದ ಭವಾನಿ ಸಿಂಗ ಠಾಕೂರು, ರಾಜ್ಯ ಸಮಿತಿ ಸದಸ್ಯರಾದ ಶಿವಮೂರ್ತಿ ಹಿರೇಮಠ ಆಗಮಿಸಲಿದ್ದಾರೆ ಎಂದರು.
ವಿಶೇಷ ಪ್ರಶಸ್ತಿ ಪುರಸ್ಕೃತರು: ದಿ.ಎನ್.ಕೆ.ಕುಲಕರ್ಣಿ ಸ್ಮರಣಾರ್ಥ ರಾಯಚೂರು ವಾಣಿ ಪ್ರಾಯೋಜಿತ ಜೀವಮಾನ ಸಾಧನೆ ವಿಶೇಷ ಪ್ರಶಸ್ತಿಯನ್ನು ಕಲ್ಯಾಣ ಸತ್ಯ ದಿನಪತ್ರಿಕೆ ಪ್ರಧಾನ ವರದಿಗಾರರಾದ ಕೆ.ಸತ್ಯನಾರಾಯಣ, ದಿ.ಶಿವಶಂಕರಗೌಡ ಯದ್ದಲದಿನ್ನಿ ಸ್ಮರಣಾರ್ಥ ವಿಶೇಷ ಪ್ರಶಸ್ತಿಯನ್ನು ಬೆಂಕಿ ಬೆಳಕು ಪತ್ರಿಕೆ ಪ್ರಧಾನ ವರದಿಗಾರರಾದ ದತ್ತು ಸರ್ಕಿಲ್‌ರವರಿಗೆ ನೀಡಲಾಗುತ್ತದೆ ಎಂದರು.
ಕೆಯುಡ್ಬ್ಲೂಜೆ ವಾರ್ಷಿಕ ಪ್ರಶಸ್ತಿ ಪುರಸ್ಕೃತ ರು: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡುವ ವಾರ್ಷಿಕ ಪ್ರಶಸ್ತಿ ಸುದ್ದಿಮೂಲ ಪ್ರಯೋಜಿತ ದಿ.ಪ್ರಕಾಶ ದಿನ್ನಿ ಸ್ಮಾರಕ ಪ್ರಶಸ್ತಿಯನ್ನು ಕಸ್ತೂರಿ ನ್ಯೂಸ್ ವರದಿಗಾರ ಬಸವರಾಜ ನಾಗಡದಿನ್ನಿ, ಸುದ್ದಿಮೂಲ ಪ್ರಯೋಜಿತ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಯನ್ನು ಈ ನಮ್ಮ ಕನ್ನಡ ನಾಡು ದಿನಪತ್ರಿಕೆ ವರದಿಗಾರ ಅಶೋಕ ತಡಕಲ್ ,ನರಸಿಂಹಾಚಾರ್ ಗುಡಿ ಸ್ಮರಣಾರ್ಥ ಪ್ರಶಸ್ತಿಯನ್ನು ಅರಕೇರಾ ಸುದ್ದಿಮೂಲ ವರದಿಗಾರ ಗುರುಸ್ವಾಮಿ, ದಿ.ಪ್ರಹ್ಲಾದಾಚಾರ್ ಜೋಷಿ ಸ್ಮರಣಾರ್ಥ ಪ್ರಶಸ್ತಿಯನ್ನು ಲಿಂಗಸ್ಗೂರು ಎಸ್‌ಎಲ್‌ವಿ ಚಾನಲ್ ವರದಿಗಾರ ರವಿ ಕುಮಾರ್ ಸೂರ್ಯವಂಶಿ, ದಿ.ಪ್ರಹ್ಲಾದಾಚಾರ್ ಜೋಷಿ ಸ್ಮರಣಾರ್ಥ ಪ್ರಶಸ್ತಿಯನ್ನು ಕನ್ನಡ ಪ್ರಭ ಮಸ್ಕಿ ವರದಿಗಾರ ಇಂದರಪಾಷಾ ಚಿಂಚರಿಕಿ,ದಿ.ಮಹಾದೇವಮ್ಮ ಬಸವರಾಜ ಸ್ವಾಮಿ ಸ್ಮರಾಣಾರ್ಥ ಪ್ರಶಸ್ತಿಯನ್ನು ಸಿರವಾರ ಸ್ಟಾರ್ ಆಫ್ ರಾಯಚೂರು ವರದಿಗಾರ ಅರಳಯ್ಯ, ದಿ.ಈಶ್ವರಮ್ಮ ನರಸಪ್ಪ ಜಲ್ದಾರ್ ಸ್ಮರಣಾರ್ಥ ಪ್ರಶಸ್ತಿಯನ್ನು ಹಟ್ಟಿ ಪ್ರಜಾವಾಣಿ ವರದಿಗಾರ ಅಮರೇಶ ಹಟ್ಟಿ , ಸ್ಪಂದನಾ ಸಂಸ್ಥೆ ನಂದಿಕೋಲಮಠ ಪ್ರಾಯೋಜಿತ ಪ್ರಶಸ್ತಿಯನ್ನು ಸಿಂಧನೂರು ಸಂಯುಕ್ತ ಕರ್ನಾಟಕ ಪತ್ರಿಕೆ ವರದಿಗಾರ ಶಿವಪುತ್ರ ಧನಶೆಟ್ಟಿ, ಸಿದ್ದಪ್ಪ ಹಳ್ಳೂರು ಸಿರವಾರ ಪ್ರಯೋಜಿತ ಪ್ರಶಸ್ತಿಯನ್ನು ರಾಯಚೂರು ಅಮೋಘ ನ್ಯೂಸ್ ಕ್ಯಾಮರಾಮೆನ್ ಕೆ.ಶ್ರೀನಿವಾಸ್ ರವರಿಗೆ ನೀಡಲಾಗುತ್ತಿದೆ ಎಂದರು.
ಆರ್ ಆರ್ ಜಿ ವಾರ್ಷಿಕ ಪ್ರಶಸ್ತಿ ಪುರಸ್ಕೃತ ರು: ರಾಯಚೂರು ರಿಪೋಟರ‍್ಸ್ ಗಿಲ್ಡ್ ಅಧ್ಯಕ್ಷರಾದ ಚೆನ್ನಬಸವಣ್ಣ ಮಾತನಾಡಿ ರಾಯಚೂರು ರಿಪೋಟರ‍್ಸ್ ಗಿಲ್ಡ್ ವಾರ್ಷಿಕ ಪ್ರಶಸ್ತಿಗಳಾದ ದಿ.ಎನ್.ಕೆ.ಕುಲಕರ್ಣೀ ಸ್ಮರಣಾರ್ಥ ರಾಯಚೂರುವಾಣಿ ಪ್ರಾಯೋಜಿತ ಪ್ರಶಸ್ತಿಯನ್ನು ರಾಯಚೂರು ಟಿವಿ.9 ವರದಿಗಾರ ಭೀಮೇಶ ಪೂಜಾರ್, ದಿ.ಕೆ.ಅಡಿವೆಪ್ಪ ಸ್ಮರಣಾರ್ಥ ಪತ್ರಕರ್ತ ಕೆ.ಸತ್ಯನಾರಾಯಣ ಪ್ರಯೋಜಿತ ಪ್ರಶಸ್ತಿಯನ್ನು ನ್ಯೂಸ್ ಫಸ್ಟ್ ವಿಡಿಯೋ ಜರ್ನಲಿಸ್ಟ್ ಹನಮಂತು ಕಾರಕೂರು, ದಿ.ದಿದ್ದಗಿ ಕಿಶನ್‌ರಾವ್ ಸ್ಮರಣಾರ್ಥ ಪತ್ರಕರ್ತರಾದ ಡಿ.ಕೆ.ಕಿಶನ್‌ರಾವ ಪ್ರಾಯೋಜಿತ ಪ್ರಶಸ್ತಿ ಹಾಗೂ ದಿ.ಹನುಮಂತ್ರಾಯ ಗೌಡ ಸ್ಮರಣಾರ್ಥ ಮಾಜಿ ಸಚಿವ ಕೆ.ಶಿವನಗೌಡ ನಾಯಕ ಪ್ರಯೋಜಿತ ಪ್ರಶಸ್ತಿಯನ್ನು ಜನವಾದಿ ಪತ್ರಿಕೆ ವರದಿಗಾರ ಮಲ್ಲನಗೌಡ, ಪತ್ರಕರ್ತ ಪ್ರಕಾಶ ಮಸ್ಕಿ ಪ್ರಾಯೋಜಿತ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಹಾಗೂ ದಿ,ಬೊಮ್ಮನಾಳ ರಘುನಾಥ ಸಿಂಗ್ ಸ್ಮರಣಾರ್ಥ ಪತ್ರಕರ್ತ ಬಿ.ವೆಂಕಟಸಿಂಗ್ ಪ್ರಯೋಜಿತ ಪ್ರಶಸ್ತಿಯನ್ನು ಕೆಪಿಎನ್ ಛಾಯಾಗ್ರಾಹಕ ಸಂತೋಷ ಸಾಗರ್ ರವರಿಗೆ ನೀಡಲಾಗುತ್ತಿದ್ದು ಪ್ರಶಸ್ತಿಗಳ ಆಯ್ಕೆಯನ್ನು ಹಿರಿತನ ಮತ್ತು ಉಭಯ ಸಂಘಟನೆಗಳ ಆಯಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚಿರ್ಚಿಸಿ ಅಂತಿಮಗೊಳಿಸಲಾಗಿದ್ದು ಪಾರದರ್ಶಕವಾಗಿ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಉದಯೋನ್ಮುಖ ಪತ್ರಕರ್ತರಿಗೆ ಪ್ರಶಸ್ತಿ ನೀಡಲಾಗುತ್ತದೆ ಪ್ರಶಸ್ತಿ ಆಯ್ಕೆಯಲ್ಲಿ ಯಾವುದೆ ಗೊಂದಲಗಳಿಲ್ಲ ಎಲ್ಲರ ಅಭಿಪ್ರಾಯದಂತೆ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಶಿವಮೂರ್ತಿ ಹಿರೇಮಠ, ಪಾಷಾ ಹಟ್ಟಿ,ಶಿವಪ್ಪ ಮಡಿವಾಳ, ವಿಜಯ ಜಾಗಟಗಲ್ ಇದ್ದರು.
Comments
Post a Comment