ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಸಂಘಟಿತ ಹೋರಾಟ: ಸೆ.23 ರಿಂದ 25 ರವರೆಗೆ ಅಖಿಲ ಭಾರತ ಅನುಭವ ಮಂಟಪ-ಎಸ್.ಅರ್.ಹಿರೇಮಠ
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಸಂಘಟಿತ ಹೋರಾಟ:
ಸೆ.23 ರಿಂದ 25 ರವರೆಗೆ ಅಖಿಲ ಭಾರತ ಅನುಭವ ಮಂಟಪ-ಎಸ್.ಅರ್.ಹಿರೇಮಠ
ರಾಯಚೂರು,ಜು.31- ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳನ್ನು ಸೋಲಿಸಲು ಸಂಘಟಿತ ಹೋರಾಟ ಮಾಡಲಾಗುತ್ತದೆ ಈ ನಿಟ್ಟಿನಲ್ಲಿ ಅನೇಕ ಸಮಾನ ಮನಸ್ಕರು ಸೇರಿ ಅಖಿಲ ಭಾರತ ಅನುಭವ ಮಂಟಪ ಕಾರ್ಯಕ್ರಮವು ಸೆ.23 ರಿಂದ 25 ರವರೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯಲಿದೆ ಎಂದು ಸಿಟಿಜನ್ಸ್ ಫಾರ್ ಡೆಮಾಕ್ರಸಿ ಅಧ್ಯಕ್ಷರಾದ ಎಸ್.ಅರ್.ಹಿರೇಮಠ ಹೇಳಿದರು.
ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಬಿಜೆಪಿ ಸೋಲಿಸುವುದೆ ನಮ್ಮ ಪರಮ ಗುರಿಯಾಗಿದ್ದು ಮೋದಿಯವರ ಆಡಳಿತದಿಂದ ದೇಶದಲ್ಲಿ ಅಸಮಾನತೆ ಮೂಡಿದೆ ಎಂದ ಅವರು ಭ್ರಷ್ಟಾಚಾರ, ಬೆಲೆ ಏರಿಕೆ ಮಿತಿಮೀರಿದೆ ಇದನ್ನು ನಿಯಂತ್ರಿಸಲು ಮೋದಿಯವರ ನೇತೃತವರ ಸರ್ಕಾರ ವಿಫಲವಾಗಿದೆ ಎಂದು ದೂರಿದರು.
ಜನಾಂದೋಲನ ರೂಪಿಸಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ನಿರ್ಮೂಲನೆ ಮಾಡಿದ ಹಾಗೇಯೇ ದೇಶದಲ್ಲಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಬೇಕೆಂದ ಅವರು ದೇಶವು ಎಲ್ಲರ ಸ್ವತ್ತಾಗಿದೆ ಇದು ಒಂದೆ ಧರ್ಮ ಜಾತಿಗೆ ಸೀಮಿತವಾಗಿದ್ದಲ್ಲವೆಂದರು.
ಹೋರಾಟಗಾರ ರಾಘವೇಂದ್ರ ಕುಷ್ಟಗಿ ಮಾತನಾಡಿ ಮೋದಿ ಸರ್ಕಾರ ಅನೇಕ ಜನವಿರೋಧಿ ನೀತಿ ತರುತ್ತಿದೆ ಕೃಷಿ ಕಾಯ್ದೆ ತಂದಿತು ನಂತರ ರೈತರ ತೀರ್ವ ವಿರೋಧದಿಂದ ಅದನ್ನು ವಾಪಸ್ಸು ಪಡೆಯತೆಂದ ಅವರು ಇದೀಗ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಬಗ್ಗೆ ಚಿಂತಿಸುತ್ತಿದೆ ಇದು ದೇಶಕ್ಕೆ ಮಾರಕವೆಂದ ಅವರು ವಾಸ್ತವದಲ್ಲಿ ದೇಶದಲ್ಲಿ ದುಸ್ತಿತಿ ತರಲು ಗ್ಲೋಬಲ್ ಫೈನಾನ್ಸ್ ಕ್ಯಾಪಿಟಲ್ ಮಾಫಿಯಾ ಇದಕ್ಕೆ ಸೂತ್ರದಾರರಾಗಿದ್ದಾರೆ ದೇಶವನ್ನು ಇದರಿಂದ ಹೊರತರಬೇಕಿದೆ ಎಂದರು
ಭಾರತವನ್ನು ಸಂಕಷ್ಟಗಳೀoದ ಪಾರು ಮಾಡಬೇಕಿದೆ ಮಣೀಪುರ ಘಟನೆ ದೇಶಾದ್ಯಂತ ವಿಸ್ತಿರಿಸದಂತೆ ನಾವೆಲ್ಲರೂ ನೋಡಿಕೊಳ್ಳಬೇಕಿದೆ ಎಂದ ಅವರು ಲೋಕಸಭಾ ಚುನಾವಣೆಯಲ್ಲಿ ಮೊದಿಯವರನ್ನು ಕೆಳಗೆ ಇಳಿಸಲೇಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಚಾಮರಸ್ ಮಾಲೀಪಾಟೀಲ, ಜಾನ ವೆಸ್ಲಿ,ಖಲಿಲುಲ್ಲಾ, ಕೆ.ವೇಣುಗೋಲ ಭಟ್ಇದ್ದರು.
Comments
Post a Comment