ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಮಸ್ಯೆ ಬಗೆಹರಿಸಲು ಒತ್ತಾಯ-ವೆಂಕಟೇಶ
ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಮಸ್ಯೆ ಬಗೆಹರಿಸಲು ಒತ್ತಾಯ-ವೆಂಕಟೇಶ
ರಾಯಚೂರು,ಜು.೩೧-ಜಿಲ್ಲೆಯಲ್ಲಿರುವ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಮಸ್ಯೆ ಬಗೆಹರಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಲಾಗುತ್ತಿದೆ ಎಂದು ಸಂಘದ ಜಿಲ್ಲಾ ಕಾರ್ಯರ್ಶಿ ವೆಂಕಟೇಶ ಚಿಲಕದ್ ಹೇಳೀದರು.
ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಜೆಸ್ಕಾಂ ಇಲಾಖೆ ಗುತ್ತಿಗೆದಾರರ ಸಂಕಷ್ಟಕ್ಕೆ ಕಿವಿಗೊಡುತ್ತಿಲ್ಲ ವಿದ್ಯುತ್ ಗುತ್ತಿಗೆದಾರರು ತಾವು ವಿದ್ಯುತ್ ಸಂಪರ್ಕ ಕಲ್ಪಿಸಲು ಗ್ರಾಹಕರಿಗೆ ಬೇಕಾದ ವಿದ್ಯುತ ಮಾಪಕ ಇನ್ನಿತರರ ವಿದ್ಯುತ್ ಪರಿಕರ ಖರೀದಿಸಲು ಆಗುತಿಲ್ಲ ಸಮಯಕ್ಕೆ ಸರಿಯಾಗಿ ಸಲಕರಣೆ ಲಭ್ಯವಾಗದೆ ಗ್ರಾಹಕರು ಮನೆ ಪ್ರವೇಶ ಮಾಡದೆ ಪರಿತಪಿಸಬೇಕಾದ ಅನಿವಾರ್ಯತೆಯಿದೆ ಎಂದ ಅವರು ಕಳಫೆ ಗುಣಮಟ್ಟದ ಸಾಮಗ್ರಿಗಳು ಲಭ್ಯವಾಗುತ್ತಿವೆ ಎಂದರು.
ವಿದ್ಯುತ ಪರಿವರ್ತಕಗಳು ಸಹ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ ಅದೇ ರೀತಿ ವಿದ್ಯುತ್ ಮಾಪಕಗಳು ವರ್ಷಪೂರ್ತಿ ಲಭ್ಯವಾಗುವುದಿಲ್ಲ ಕೇವಲ ಎರೆಡು ಮೂರು ತಿಂಗಳು ಮಾತ್ರ ಲಭ್ಯವಾಗುತ್ತವೆ ಎಂದ ಅವರು ಈ ಬಗ್ಗೆ ಸರ್ಕಾರ ಗಮನಹರಿಸಬೇಕೆಂದ ಅವರು ಕಲಬುರ್ಗಿಗೆ ಭೇಟಿ ನೀಡಲಿರುವ ಸಿಎಂ ಸಿದ್ದರಾಮಯ್ಯಗೆ ಈ ಬಗ್ಗೆ ಮನವಿ ಮಾಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಅಲ್ಲಾಭಕ್ಷ, ಭೀಮಣ್ಣ, ಕರಿಯಪ್ಪ,ಶ್ರೀನಿವಾಸರಾವ್ ಇನ್ನಿತರರು ಇದ್ದರು.
Comments
Post a Comment