ಶ್ರೀನಿವಾಸ್ ಇನಾಂದಾರ್ ರವರಿಗೆ ಕೆಪಿಎ ಛಾಯಾಭೂಷಣ ಪ್ರಶಸ್ತಿ
ಶ್ರೀನಿವಾಸ್ ಇನಾಂದಾರ್ ರವರಿಗೆ ಕೆಪಿಎ ಛಾಯಾಭೂಷಣ ಪ್ರಶಸ್ತಿ ರಾಯಚೂರು, ಜು.28-ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದ ನೇತೃತ್ವದಲ್ಲಿ 185 ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯ ಅಂಗವಾಗಿ "ಕೆಪಿಎ ಛಾಯಾಭೂಷಣ ಪ್ರಶಸ್ತಿ ಪ್ರಧಾನ ಸಮಾರಂಭ"ವನ್ನು ಆ.19ರಂದು ಹಮ್ಮಿಕೊಳ್ಳಲಾಗಿದೆ.
ಈ ಸಮಾರಂಭದಲ್ಲಿ ಕೆಪಿಎ ಮಾಜಿ ನಿರ್ದೇಶಕರು ಹಾಗೂ ಪತ್ರಿಕಾ ಛಾಯಾಗ್ರಾಹಕರಾಗಿರುವ ಶ್ರೀನಿವಾಸ್ ಇನಾಂದಾರ್ ರವರಿಗೆ ಛಾಯಾಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಕೆ ಸಂಪತ್ ಕುಮಾರ್ ಮಾಜಿ ಕೆಪಿಎ ನಿರ್ದೇಶಕರು, ಡಿ.ವಿಜಯರಾಘವನ್
ಮಾಜಿ ಕೆಪಿಎ ನಿರ್ದೇಶಕರು, ಜಿ.ಕೃಷ್ಣ
ಕೋಲಾರ ಜಿಲ್ಲಾಧ್ಯಕ್ಷರು, ಭಕ್ತವತ್ಸಲ ತುಮಕೂರು ಜಿಲ್ಲಾಧ್ಯಕ್ಷರು, ಇವರಿಗೂ ಕೆಪಿಎ ಛಾಯಾಭೂಷಣ ಪ್ರಶಸ್ತಿ ಪ್ರದಾನ ನಡೆಯಲಿದೆ
ನಾಡಿನ ಸಮಸ್ತ ಛಾಯಾಗ್ರಾಹಕರು, ಅಭಿಮಾನಿಗಳು, ಬಂಧು ಮಿತ್ರರನ್ನು ಕಾರ್ಯಕ್ರಮಕ್ಕೆ ಆಮಂತ್ರಿಸುತ್ತಿದ್ದೇವೆ.
ದಿನಾಂಕ : 19 ಆಗಸ್ಟ್ 2023
ಸ್ಥಳ : ಅಖಿಲ ಭಾರತ ವೀರಶೈವ ಮಹಾಸಭಾ ಸಭಾಂಗಣ, ಬೆಂಗಳೂರು.
*ನಾಡಿನ ಸಮಸ್ತ ಛಾಯಾಬಂಧುಗಳಿಗೆ ಆತ್ಮೀಯ ಸ್ವಾಗತ*
ಕೆಪಿಎ ಅದ್ಯಕ್ಷರು ಮತ್ತು ಆಡಳಿತ ಮಂಡಳಿ ಆಮಂತ್ರಿಸಿದೆ.
Comments
Post a Comment