ಯಾಪಲದಿನ್ನಿ ಗ್ರಾಮದಲ್ಲಿ ಸಂತೆ ಬಜಾರ ನಲ್ಲಿ ಸ್ವಚ್ಚತೆ ಮತ್ತು ಕೆಲವು ಕಡೆ ಕಾಲುವೆ ನಿರ್ಮಾಣ ಮಾಡಲು ಕೆಪಿಆರ್ ಎಸ್ ಒತ್ತಾಯ


 ಯಾಪಲದಿನ್ನಿ ಗ್ರಾಮದಲ್ಲಿ ಸಂತೆ ಬಜಾರ ನಲ್ಲಿ ಸ್ವಚ್ಚತೆ ಮತ್ತು ಕೆಲವು ಕಡೆ ಕಾಲುವೆ ನಿರ್ಮಾಣ ಮಾಡಲು ಕೆಪಿಆರ್ ಎಸ್  ಒತ್ತಾಯ

  ರಾಯಚೂರು,ಜು.31-  ಕರ್ನಾಟಕ ಪ್ರಾಂತ ರೈತ ಸಂಘ ಯಾಪಲದಿನ್ನಿ ಗ್ರಾಮ ಘಟಕ ಈ ಮೂಲಕ  ಒತ್ತಾಯಿಸುವುದೇನೆಂದರೆ ಯಾಪಲದಿನ್ನಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಂಚಾಯತ್ ಕೇಂದ್ರ ಗ್ರಾಮದಲ್ಲಿ ಇಡೀ ಗ್ರಾಮದ ಪ್ರಮುಖ ರಸ್ತೆಗಳಲ್ಲಿ  ಸರಿಯಾದ ಕಾಲುವೆಗಳು ಇಲ್ಲದೆ. ಮನೆಗಳ ಚಾರಂಡಿ ನೀರು ಎಲ್ಲಾ ರಸ್ತೆಗಳಲ್ಲಿ ಹರಿಯುತ್ತಾವೆ. ಇದ್ದರಿಂದ ಊರಿನ ಜನರಿಗೆ ತಿರುಗಾಡಲು ತುಂಬಾ ತೂದರೆ ಆಗುತ್ತದೆ  ವಿಶೇಷವಾಗಿ ಸಣ್ಣ ಮಕ್ಕಳು ಮತ್ತು ವಯಸ್ಸು ಅದ ಹಿರಿಯರಿಗೆ ಅನೇಕರು ಕಾಲು ಜಾರಿ ಬಿದ್ದಿದ್ದಾರೆ .   


                   ಅದಲ್ಲದೇ 
ಪ್ರತಿ ನಿತ್ಯ ಚರಂಡಿಯ ನೀರು ರಸ್ತೆಗಳಿಗೆ ಹರಿದು ಬಹುತೇಕ ರಸ್ತೆ ಹಾಳು ಅಗಿವೆ  ರಸ್ತೆ ಗಳಲ್ಲಿ ಮನೆಯ ಚರಂಡಿ ನೀರು ಎಲ್ಲಾ ರಸ್ತೆ ಗಳಿಗೆ ಹರಿಯುತ್ತಿವೆ ಮತ್ತು ಸಂತೆ ಬಜಾರ್ ನಲ್ಲಿ ಸಾರ್ವಜನಿಕ ಕುಡಿಯುವ ನೀರು ಪೂರೈಸುವ ವಾಲ್ ಒಡೆದಿದ್ದು ಅದ್ದರಿಂದ ಚರಂಡಿ ನೀರು ಸೇರಿದ ನೀರು ಪೂರೈಕೆ ಅಗುತ್ತಿದೆ  ಇದ್ದರಿಂದ ಊರಿನ ಜನರು ಅನೇಕ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚು ಇದೆ ಇದನ್ನು ಸರಿ ಪಡಿಸಲು ನಮ್ಮ ಸಂಘಟನೆ ಎರಡು ಮೂರು ಸಲ ತಮ್ಮ ಗೆ ತಿಳಿಸಿದರು ಇದುವರೆಗೆ ಅದನ್ನು ಸರಿಪಡಿಲ್ಲ   ಕಳೆದ ಒಂದು ವಾರದಿಂದ ಸುರಿದ ಮಳೆಗೆ ಇನ್ನೂ ಹೊಲಸು ಅಗಿವೆ. ಅದೇ ರೀತಿ ಪ್ರತಿ ವಾರ ನಡೆಯುವ ಸಂತೆಗೆ ಗ್ರಾಮದಲ್ಲಿ ಸಂತೆ ಬಜಾರ್ ಇದ್ದರು ಅದು ಸಂಪೂರ್ಣವಾಗಿ ಕಸ ಮತ್ತು ಹೊಲಸು ತುಂಬಿ ಅದ್ದರಿಂದ ದುರ್ನಾಥ ನಾರುತ್ತಿದ್ದು ಅದ್ದರಿಂದ ಸಾರ್ವಜನಿಕರಿಗೆ ಆರೋಗ್ಯ ಹದೆಗಡುತ್ತಿದೆ.ಅದ್ದರಿಂದ ಕರ್ನಾಟಕ ಪ್ರಾಂತ ರೈತ ಸಂಘ ಕೆ.ಪಿ.ಆರ್.ಎಸ್. ಯಾಪಲದಿನ್ನಿ ಗ್ರಾಮ ಘಟಕ ಈ ಮೂಲಕ ತಮ್ಮಗೆ  ಒತ್ತಾಯಿಸುವುದು ಎನೆಂದರೆ  ಈ ಕೆಳಗೆ ಸೂಚಿಸಿದ ಸಮಸ್ಯೆಗಳನ್ನು ಅದಷ್ಟು ಬೇಗ ಸ್ವಚ್ಚತೆಗೆ ಮುಂದಾಗಬೇಕು ಒಂದು ವೇಳೆ ಇದೇ ರೀತಿ ತಾವು ವಿಳಂಬ ಮಾಡಿದಲ್ಲಿ ಊರಿನ ಜನರಿನೂಂದಿಗೆ ಸಂಘಟನೆ ನೇತೃತ್ವದಲ್ಲಿ ಪಂಚಾಯತ್ ಕಛೇರಿ ಮುಂದೆ ಪ್ರತಿಭಟನಾಧರಣೆ ಹಮ್ಮಿಕೊಳ್ಳುಬೇಕಾಗುತ್ತದೆ ಎಂದು ತಿಳಿಸಲಾಗಿದೆ.     

   ಈ ಸಂದರ್ಭದಲ್ಲಿ ರಮೇಶ ಯಾಪಲದಿನ್ನಿ,ತಾಲೂಕ ಕಾರ್ಯದರ್ಶಿಕುಂಬಾರ ಈರೇಶ,ಗ್ರಾಮ ಘಟಕದ ಅಧ್ಯಕ್ಷರು ಜನಾರ್ಥನ.ಗ್ರಾಮ ಘಟಕದ ಕಾರ್ಯದರ್ಶಿ  ,ರಮೇಶ, ಈರೇಶ, ಅಮರೇಶ, ಖಾದರ,ಜೀಂದವಲಿ, ಅಜ್ಗರ್ ,ಶರಣಪ್ಪ ಯಲ್ಲಮ್ಮ,ಮಲ್ಲಮ್ಮ ಉಪಸ್ಥಿತಿರಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ