ವಿಶಿಷ್ಟ ಚಿತ್ರಕಥೆ, ಸಂಗೀತ, ಸಾಹಸಮಯ ದೃಶ್ಯಗಳಿರುವ ರಕ್ತಾಕ್ಷ ಚಿತ್ರ ಅಕ್ಟೋಬರ್‌ಗೆ ತೆರೆಗೆ -ರೋಹಿತ್
ವಿಶಿಷ್ಟ ಚಿತ್ರಕಥೆ, ಸಂಗೀತ, ಸಾಹಸಮಯ ದೃಶ್ಯಗಳಿರುವ ರಕ್ತಾಕ್ಷ ಚಿತ್ರ ಅಕ್ಟೋಬರ್‌ಗೆ ತೆರೆಗೆ -ರೋಹಿತ್
ರಾಯಚೂರು,ಜು.೨೭-ಸಾಯಿ ಪ್ರೋಡಕ್ಷನ್ಸ್ ಬ್ಯಾನರ್ ಅಡಿ ವಿಶಿಷ್ಟ ಚಿತ್ರ ಕಥೆ, ಸಂಗೀತ ಮತ್ತು ಸಾಹಸಮಯ ದೃಶ್ಯಗಳುಳ್ಳ ರಕ್ತಾಕ್ಷ ಚಿತ್ರವು ಸೆಪ್ಟೆಂಬರ್ ಅಥವಾ ಅಕ್ಟೋಬರ್ ನಲ್ಲಿ ತೆರೆಗೆ ಬರಲಿದೆ ಎಂದು ಚಿತ್ರದ ನಿರ್ಮಾಪಕ ಹಾಗೂ ನಾಯಕ ನಟ ರೋಹಿತ್ ಹೇಳಿದರು.
ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ನಾನು ಮೂಲತಃ ಮುದಗಲ್ ಪಟ್ಟಣದವನಾಗಿದ್ದು ಚಿತ್ರರಂಗದಲ್ಲಿ ವಿಶಿಷ್ಟ ಸಾಧನೆ ಮಾಡಬೇಕೆನ್ನುವ ದೃಷ್ಟಿಯಿಂದ ಈ ರಂಗದಲ್ಲಿ ತೊಡಗಿಸಿಕೊಂಡಿದ್ದು ನನ್ನ ಮೊದಲ ಚಿತ್ರವಾದ ರಕ್ತಾಕ್ಷ ಚಿತ್ರವನ್ನು ನಾನೆ ನಿರ್ಮಿಸಿದ್ದು ನಾಯಕ ನಟನಾಗಿ ನಟಸಿದ್ದು ಚಿತ್ರಕ್ಕೆ ಎಸ್.ಎನ್.ವಾಸುದೇವ ನಿರ್ದೇಶನವಿದ್ದು, ಗೀತ ರಚನೆ ವಶಿಷ್ಠ ಸಿಂಹ ,ಸಂಗೀತವನ್ನು ಧೀರೇಂದ್ರ ದಾಸ್, ಸಾಹಸ ನಿರ್ದೇಶನವನ್ನು ಸ್ಟಂಟ್ ರವಿ ಮಾಡಿದ್ದಾರೆ ಎಂದ ಅವರು ಚಿತ್ರದಲ್ಲಿ ಅರ್ಚನಾ ಹಾಗೂ ಇತರ ಮೂವರು ನಾಯಕ ನಟಿಯರಿದ್ದು ಚಿತ್ರದಲ್ಲಿ ಎರೆಡು ಹಾಡುಗಳಿವೆ ಎಂದರು.
ಚಿತ್ರಕ್ಕೆ ಸುಮಾರು ಎರೆಡು ಕೋಟಿ ರೂ. ಬಂಡವಾಳ ಹೂಡಲಾಗಿದ್ದು ಬೆಂಗಳೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಚಿತ್ರದ ಚಿತ್ರಿಕರಣ ಮಾಡಲಾಗಿದೆ ಎಂದ ಅವರು ಚಿತ್ರ ಪ್ರೇಮಿಗಳು ಚಿತ್ರ ವೀಕ್ಷಿಸಿ ಪ್ರೋತ್ಸಹಿಸಬೇಕೆಂದರು.
ಈ ಸಂದರ್ಭದಲ್ಲಿ ಬದ್ರಿನಾರಾಯಣ, ಅಭಿವರ್ದನ, ಪ್ರಭು, ಬಸವರಾಜ,ಶಶಿ,ವಿಶ್ವ, ನಾರಾಯಣ ಇದ್ದರು.
Comments
Post a Comment