ಎಂ.ಈರಣ್ಣ ವೃತ್ತದ ಬಳಿ ತರಕಾರಿ ಮಾರಾಟಗಾರರ ಸ್ಥಳಾಂತರ ಕ್ರಮ ಸರಿಯಲ್ಲ: ನನ್ನ ವಿರುದ್ಧ ದುರುದ್ದೇಶದಿಂದ ಮಹಾವೀರ ಪ್ರಕರಣ ದಾಖಲಿಸಿದರೆ ಎದುರಿಸುತ್ತೇನೆ-ಜಲ್ದಾರ್

 


ಎಂ.ಈರಣ್ಣ ವೃತ್ತದ ಬಳಿ ತರಕಾರಿ ಮಾರಾಟಗಾರರ ಸ್ಥಳಾಂತರ ಕ್ರಮ ಸರಿಯಲ್ಲ:

ನನ್ನ ವಿರುದ್ಧ ದುರುದ್ದೇಶದಿಂದ ಮಹಾವೀರ ಪ್ರಕರಣ ದಾಖಲಿಸಿದರೆ ಎದುರಿಸುತ್ತೇನೆ-ಜಲ್ದಾರ್

ರಾಯಚೂರು,ಜು.೨೬-ಕಳೆದ ನಾಲ್ಕು ವರ್ಷದಿಂದ ಎಂ.ಈರಣ್ಣ ವೃತ್ತದಲ್ಲಿ ತರಕಾರಿ ಮಾರಾಟ ಮಾಡಲಾಗುತ್ತಿದ್ದು ದಿಢಿರನೆ ಅವರನ್ನು ಸ್ಥಳಾಂತರ ಮಾಡಿರುವ ನಗರಸಭೆ ಕ್ರಮ ಸರಿಯಲ್ಲವೆಂದು  ಮುಖಂಡರಾದ ರವೀಂದ್ರ ಜಲ್ದಾರ್ ಹೇಳಿದರು.

ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಕರೋನಾ ಸಂದರ್ಭದಲ್ಲಿ ಎಂ.ಈರಣ್ಣ ವೃತ್ತದಲ್ಲಿ ತರಕಾರಿ ಮಾರಾಟಕ್ಕೆ ಜಿಲ್ಲಾಡಳಿತವೆ ಆಸ್ಪದ ಮಾಡಿಕೊಟ್ಟಿತ್ತು ಇದೀಗ ಏಕಾಏಕಿ ತೆರವು ಮಾಡಿರುವ ಹಿಂದೆ ರಾಜಕೀಯ ಅಡಗಿದೆ ಎಂದು ಅರೋಪಿಸಿದ ಅವರು ನಾಲ್ಕು ವರ್ಷದ ವರೆಗೆ ಇಲ್ಲದ ಸಮಸ್ಯೆ ದಿಡೀರನೆ ಹುಟ್ಟಿದ್ದು ಏಕೆ ಇಲ್ಲಿನ ತರಕಾರಿ ವ್ಯಾಪಾರದಿಂದ ಯಾರಿಗೂ ತೊಂದರೆಯಾಗುತ್ತಿದೆ ಎಂದು  ಯಾರು ದೂರು ನೀಡಿಲ್ಲ ಯಾವದೆ ಅಪಘಾತ ,ಅಹಿತಕರ ಘಟನೆ ನಡೆಯದೆ ಸ್ಥಾಳಾಂತರ ಮಾಡಿದ್ದು ಯಾರ ಕುಮ್ಮಕ್ಕಿನಿಂದ ಎಂದು ಪ್ರಶ್ನಿಸಿದರು.


ನನ್ನ ವಿರುದ್ಧ ಉಸ್ಮಾನಿಯ ತರಕಾರಿ ಮಾರಾಟಗಾರರ ಕ್ಷೇಮಾಭಿಬೃದ್ದಿ ಸಂಘದ ಅಧ್ಯಕ್ಷರಾದ ಎನ್,ಮಹಾವೀರ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ನಾನು ನನ್ನ ರಾಜಕೀಯ ಜೀವನದಲ್ಲಿ ಯಾರ ವಿರುದ್ದವು ಕೀಳು ಭಾಷೆ ಬಳಿಸಿಲ್ಲ ಮತ್ತು ಕೋಮು ಪ್ರಚೋದನೆ ಮಾಡಿಲ್ಲವೆಂದ ಅವರು ನಾನು ಮೂಲತಃ ಗುತ್ತಿಗೆದಾರರಾಗಿದ್ದು ನಾನು ನಿಯಮಿತವಾಗಿ ತೆರಿಗೆ ಕಟ್ಟುತ್ತಿದ್ದೇನೆ ನನ್ನ ವಿರುದ್ಧ ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದರೆ ಅದನ್ನು ನಾನು ಎದುರಿಸುತ್ತೇನೆ ಹಾಗೂ ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ಕೋಮು ಗಲಭೆ ಇನ್ನಿತರ ಕಾಯ್ದೆಯಡಿ ಪ್ರಕರಣ ದಾಖಲಿಸಿದರೆ ನಾನು ಕಾನೂನಿನ ಮೂಲಕವೇ ಉತ್ತರಿಸುತ್ತೇನೆ ನಾನು ಕಾನುನು ವಿರುದ್ಧ ನಡೆದುಕೊಳ್ಳುವ ವ್ಯಕ್ತಿಯಲ್ಲವೆಂದರು.

ಕರೋನಾ ಸಂದರ್ಭದಲ್ಲಿ ನಗರದ ಕ್ಷೇತ್ರಕ್ಕೆ ಸಂಬ0ಧೀಸಿದ ಸುಮಾರು ೭-೮ ಹಳ್ಳಿಗಳಿಂದ ಸಣ್ಣ ಪುಟ್ಟ ತರಕಾರಿ ವ್ಯಾಪಾರಸ್ಥರು ಇಲ್ಲಿ ತರಕಾರಿ ಮಾರಾಟ ಮಾಡಲು ಪ್ರಾರಂಬಿಸಿದರು ಇದಕ್ಕೆ ಕರವನ್ನು ಸಹ ಸಂಗ್ರಹಿಸಲಾಗಿದೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರ ಒಪ್ಪಿಗೆ ಮೇಲೆ ನಿರ್ಣಯ ಕೈಗೊಂಡಿದು ಅದನ್ನು ರದ್ದು ಪಡಿಸಿದ್ದು ಯಾವ ಉದ್ದೇಶ ಮತ್ತು ಯಾರ ಪ್ರಭಾವಕ್ಕೆ ಒಳಗಾಗಿ ಎಂದು ಪ್ರಶ್ನಿಸಿದರು.

ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಮನವರಿಕೆ ಮಾಡುತ್ತೇವೆ ತರಕಾರಿ ಮಾರಾಟಗಾರರ ಉಪ ಜೀವನದ ಮೇಲೆ ಬರೆಯಳೆಯುವದು ಸರಿಯಲ್ಲವೆಂದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಸಾಜಿದ ಸಮೀರ,ಜಾನಕಿರಾಮ,ಶಂಕರರೆಡ್ಡಿ, ಸಾದಿಕ ಇನ್ನಿತರರು ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ