ನಗರದಲ್ಲಿ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟನೆ: ಪತ್ರಕರ್ತರು ಸಂಕಷ್ಟದಲ್ಲಿಯೂ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವುದು ಅಭಿನಂದನಾರ್ಹ- ಬೋಸರಾಜು


 ನಗರದಲ್ಲಿ ಪತ್ರಿಕಾ ದಿನಾಚರಣೆ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟನೆ: ಪತ್ರಕರ್ತರು ಸಂಕಷ್ಟದಲ್ಲಿಯೂ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವುದು ಅಭಿನಂದನಾರ್ಹ- ಬೋಸರಾಜು 


ರಾಯಚೂರು,ಜು.30- ಪತ್ರಕರ್ತರು ಸಂಕಷ್ಟದಲ್ಲಿಯೂ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವುದು ಅಭಿನಂದನಾರ್ಹವೆಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು  ಅಭಿಪ್ರಾಯ ಪಟ್ಟರು.

    ಅವರಿಂದು   ನಗರದ ವೀರಶೈವ ಮಹಾಂತೇಶ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಕಾರ್ಯನಿರತ

ಪತ್ರಕರ್ತರ ಸಂಘದ ಜಿಲ್ಲಾ ಘಟಕ ಹಾಗೂ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ವತಿಯಿಂದ

 ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ವಾರ್ಷಿಕ ಪ್ರಶಸ್ತಿ

ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.


       ಪ್ರಾಮಾಣಿಕ ಪತ್ರಕರ್ತರು ಇಂದಿಗೂ ಸಾಕಷ್ಟು ನಿಷ್ಠೆಯಿಂದ ಕೆಲಸ

ಮಾಡುತ್ತಿದ್ದಾರೆ. ಆದರೆ, ಅವರನ್ನು ವ್ಯವಸ್ಥೆ ಕಟ್ಟಿ ಹಾಕುತ್ತಿದೆ.

ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆಯುವಲ್ಲಿ ಮಾಧ್ಯಮಗಳ ಪಾತ್ರ

ಮುಖ್ಯವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಪತ್ರಿಕೋದ್ಯಮ ಉದ್ಯಮವಾಗಿ

ಮಾರ್ಪಟ್ಟಿದ್ದು, ಪತ್ರಕರ್ತ ಕಾರ್ಯವೈಖರಿಗೆ ಅಡ್ಡಿ ಉಂಟು ಮಾಡುತ್ತಿದೆ ಎಂದರು.


ಮಾಧ್ಯಮ ಕ್ಷೇತ್ರ ಉದ್ಯಮವಾಗಿ ಬದಲಾಗಿದ್ದು, ನಿಷ್ಠಾವಂತ

ಪತ್ರಕರ್ತರ ಕೈಗಳನ್ನು ಕಟ್ಟಿ ಹಾಕಿದಂತಾಗಿದೆ. ಸತ್ಯಾಂಶ ಮುಕ್ತವಾಗಿ

ಪ್ರಕಟಿಸುವಲ್ಲಿ ಅಸಹಾಯಕರಾಗಿದ್ದಾರೆ ಎಂದರು .

       ಜಿಲ್ಲೆಯ ಅನೇಕ ಪತ್ರಕರ್ತರ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ.

ಜಿಲ್ಲೆಯ ಸಮಸ್ಯೆಗಳ ಕುರಿತಂತೆ ಅವರೊಡನೆ ಚರ್ಚಿಸಿದ್ದೇನೆ. ಸಮಸ್ಯೆಗಳ

ಪರಿಹಾರಕ್ಕಾಗಿ ಪತ್ರಕರ್ತರ ಶ್ರಮಕ್ಕೆ ನಾನು ಸಹಕರಿಸಿದ್ದೇನೆ. ಅನೇಕ

ಪತ್ರಿಕೆಗಳು ದೃಶ್ಯ ಮಾಧ್ಯಮಗಳು ಕರ್ತವ್ಯ ನಿರ್ವಹಿಸುತ್ತೀವೆ.


ಆದರೆ, ಕೆಲ 
ಮುದ್ರಣ ಮಾಧ್ಯಮಗಳು ಸಂಕಷ್ಟದಲ್ಲಿಯೂ ಸೇವೆ ಸಲ್ಲಿಸುತ್ತಿರುವುದು

ಅಭಿನಂದನಾರ್ಹ. ಜಿಲ್ಲೆಯ ಪತ್ರಕರ್ತರ ಸಮಸ್ಯೆಗಳ ಬಗ್ಗೆ ಗಮನಿಸಿ

ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ,

ಪತ್ರಕರ್ತರು ಮುಕ್ತವಾಗಿ ಕೆಲಸ ಮಾಡದ ವಾತಾವರಣ

ಸೃಷ್ಟಿಯಾಗುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆ ಕಂಟಕ.

ಕಾರ್ಪೊರೇಟ್‌ಗಳ ಕಪಿಮುಷ್ಠಿಗಳ ಕೈಗೆ ಸಿಲುಕಿದ್ದು, ಪತ್ರಕರ್ತರು

ಸ್ವಾಭಿಮಾನದಿಂದ ಕೆಲಸ ಮಾಡಲು ಆಗುತ್ತಿಲ್ಲ ಎಂದರು.


       ಪತ್ರಕರ್ತರು ವಿಶ್ವಾಸ ಕಳೆದುಕೊಳ್ಳುವ ಕೆಲಸ ಮಾಡಬಾರದು.

ಪತ್ರಕರ್ತರಿಗೆ ಉದ್ಯೋಗ ಭದ್ರತೆಯಿಲ್ಲ. ಇದಕ್ಕೆ ಸಂಸತ್‌ನಲ್ಲಿ ವಿಶೇಷ

ಕಾನೂನು ರೂಪಿಸುವ ಮೂಲಕ ಸೇವಾ ಭದ್ರತೆಗೆ ಕ್ರಮ ಕೈಗೊಳ್ಳಬೇಕು.

ಪತ್ರಿಕೆ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ. ಆಧುನಿಕ ಮಾಧ್ಯಮ,

ಸಾಮಾಜಿಕ ಜಾಲತಾಣಗಳ ಸ್ಪರ್ಧೆಯಿಂದಾಗಿ ಸಾಂಪ್ರದಾಯಿಕ ಸುದ್ದಿ ಮಾಧ್ಯಮಗಳಿಗೆ

ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ಇಂದು ಮಾಧ್ಯಮಗಳಲ್ಲಿ ನಕರಾತ್ಮಕ

ಸುದ್ದಿಗಳೇ ಹೆಚ್ಚು ರಾರಾಜಿಸುತ್ತಿದೆ. ಜನರ ಅಭಿರುಚಿಯೇ ಬದಲಾಗಿದೆ. ಜನರು

ನಕರಾತ್ಮಕ ಸುದ್ದಿಗಳಿಗೆ ಮಹತ್ವ ನೀಡುವುದು ಕಡಿಮೆ ಮಾಡಿದಾಗ ಮಾತ್ರ

ಉತ್ತಮ ಸುದ್ದಿಗಳನ್ನು ನೋಡಲು ಸಾಧ್ಯ ಎಂದರು.


       ವಿಶೇಷ ಉಪನ್ಯಾಸ ನೀಡಿದ ಮುಖ್ಯಮಂತ್ರಿಗಳ ಮಾಧ್ಯಮ

ಸಲಹೆಗಾರ ಕೆ.ವಿ.ಪ್ರಭಾಕರ ಮಾತನಾಡಿ, ಮಾಧ್ಯಮಗಳ ಸ್ವರೂಪ

ಬದಲಾಗಿದೆ. ಪತ್ರಕರ್ತರಿಗೆ ತಾಳ್ಮೆ ಇಲ್ಲದಾಗಿದೆ. ತಾವು ಏನು ಪ್ರಶ್ನಿಸುತ್ತಿದ್ದೇವೆ

ಎಂಬ ಪರಿಜ್ಞಾನ ಇಲ್ಲದಾಗಿದೆ. ಊಹೆ ಪತ್ರಿಕೋದ್ಯಮ ನಡೆಯುತ್ತಿದೆ. ವಿಷಯದ ಆಳ

ಅರಿತು ಕೆಲಸ ಮಾಡುವ ಪತ್ರಕರ್ತರು ಬೇಕಿದೆ ಎಂದರು.

       ಪತ್ರಕರ್ತರು ಸರ್ಕಾರ ಹಾಗೂ ಜನರ ನಡುವೆ ಸೇತುವೆಯಾಗಿ ಕೆಲಸ

ಮಾಡಬೇಕು. ಪತ್ರಿಕೋದ್ಯಮಕ್ಕೆ  ಇತಿಹಾಸವಿದೆ. ಪತ್ರಿಕೆಗಳು

ಉದ್ಯಮವಾಗಿ ಬೆಳೆದಿದೆ ವಿನಃ ಪತ್ರಕರ್ತರ ಸ್ಥಿತಿ ಬದಲಾಗಿಲ್ಲ. ಎಲ್ಲರ ಸಮಸ್ಯೆಗಳ

ಬಗ್ಗೆ ಬರೆಯುವ ಪತ್ರಕರ್ತರು ತಮ್ಮ ಸಮಸ್ಯೆಗಳ ಚಿಂತಿಸುವ ಸ್ಥಿತಿಯಲ್ಲಿಲ್ಲ

ಎಂದು ಬೇಸರ ವ್ಯಕ್ತಪಡಿಸಿದರು. ಪತ್ರಕರ್ತರಿಗೆ ನಿವೇಶನ ಕಲ್ಪಿಸಲು ಐದು

ಎಕರೆ ಸ್ಥಳ ಗುರುತಿಸಿ ಕಲ್ಪಿಸುವಂತೆ ಸಚಿವರಿಗೆ ಮನವಿ ಮಾಡಿದರು.


ಹಿರಿಯ ಪತ್ರಕರ್ತರಾದ ದತ್ತು ಸರ್ಕಿಲ್ ಮತ್ತು

ಕೆ.ಸತ್ಯನಾರಾಯಣರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಗಿಲ್ಡ್ ಮತ್ತು ಸಂಘದಿಂದ  ಪತ್ರಕರ್ತರಿಗೆ ಪ್ರಶಸ್ತಿಗಳನ್ನು ನೀಡಿ

ಗೌರವಿಸಲಾಯಿತು.

ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಅಧ್ಯಕ್ಷ ಚನ್ನಬಸವಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ

ಜಿಲ್ಲಾಧ್ಯಕ್ಷ ಆರ್.ಗುರುನಾಥ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಸಕರಾದ ಡಾ.ಶಿವರಾಜ

ಪಾಟೀಲ, ಬಸನಗೌಡ ದದ್ದಲ್, ಹಂಪನಗೌಡ ಬದರ್ಲಿ, ಹಂಪಯ್ಯ ನಾಯಕ,ಕರೆಮ್ಮ ಜಿ ನಾಯಕ, ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ, ಎಸ್‌ಪಿ ನಿಖಿಲ್ ಬಿ,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ

ಶಿವಮೂರ್ತಿ ಹಿರೇಮಠ, ಗಿಲ್ಡ್ ಪ್ರಧಾನ ಕಾರ್ಯದರ್ಶಿ ವಿಜಯಜಾಗಟಗಲ್, ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಪಾಷಾ ಹಟ್ಟಿ ಇದ್ದರು.  ವೆಂಕಟೇಶ ಹೂಗಾರ, ಸಿದ್ದಯ್ಯ ಸ್ವಾಮಿ ,ಈರಣ್ಣ ಕರ್ಲಿ ನಿರೂಪಿಸಿದರು. ವೇಣುಗೋಪಾಲ್ ವರಪ್ ಪ್ರಾರ್ಥಿಸಿದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ