ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಿಂದ ಪದವಿ ಮತ್ತು ಚಿನ್ನದ ಪದಕಗಳ ಪ್ರದಾನ: ಮುಂದಿನ ದಿನಗಳಳ್ಲಿ ಭಾರತ ವಿಶ್ವದ ಮೂರನೆ ಆರ್ಥಿಕ ರಾಷ್ಟ್ರ ಗಳ ಸಾಲಿನಲ್ಲಿ- ಥಾವರಚಂದ್ ಗೆಹ್ಲೋಟ್

 

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರಿಂದ ಪದವಿ ಮತ್ತು ಚಿನ್ನದ ಪದಕಗಳ ಪ್ರದಾನ:

ಮುಂದಿನ ದಿನಗಳಳ್ಲಿ ಭಾರತ ವಿಶ್ವದ ಮೂರನೆ ಆರ್ಥಿಕ ರಾಷ್ಟ್ರ ಗಳ ಸಾಲಿನಲ್ಲಿ- ಥಾವರಚಂದ್ ಗೆಹ್ಲೋಟ್

ರಾಯಚೂರು,ಜು.೨೮-ಸದ್ಯ ನಮ್ಮ ದೇಶ ವಿಶ್ವದ ಆರ್ಥಿಕ ಸ್ಥಾನದಲ್ಲಿ ಐದನೇ ಸ್ಥಾನದಲ್ಲಿದೆ ಮುಂದಿನ ದಿನಗಳಲ್ಲಿ ನಮ್ಮ ಭಾರತ ವಿಶ್ವದ ಮೂರನೆ ಆರ್ಥಿಕ ರಾಷ್ಟ್ರ ಗಳ ಸಾಲಿನಲ್ಲಿ ನಿಲ್ಲಲಿದೆ ಎಂದು ರಾಜ್ಯಪಾಲರು ಮತ್ತು ಕೃಷಿ ವಿವಿ ಕುಲಾಧಿಪತಿಗಳಾದ ಥಾವರಚಂದ್ ಗೆಹ್ಲೋಟ್ ಹೇಳಿದರು.
ಅವರಿಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ೧೨ ನೇ ಘಟಿಕೋತ್ಸವದಲ್ಲಿ ಪಾಳ್ಗೊಂಡು ವಿದ್ಯಾರ್ಥಿಗಳಿಗೆ ಪದವಿ ಮತ್ತು ಚಿನ್ನದ ಪದಕಗಳನ್ನು ಪ್ರದಾನ ಮಾಡಿ ಮಾತನಾಡಿದರು.
ಕನ್ನಡದಲ್ಲಿ ಮಾತು ಪ್ರಾರಂಬಿಸಿದ ಅವರು ಎಲ್ಲರಿಗೂ ನಮಸ್ಕಾರ ಮತ್ತು ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಹೇಳಿ ಮಾತು ಮುಂದುವರಿಸಿದ ಅವರು ವಿಶ್ವವಿದ್ಯಾಲಯಗಳು ದೇಶವನ್ನು ಮುನ್ನಡೆಸಲು ಪ್ರಮುಖ ಪಾತ್ರವಹಿಸುತ್ತವೆ ಕೃಷಿ ವಿವಿ ಸಹ ಅಂತಹ ಮಹತ್ತರ ಕಾರ್ಯ ಮಾಡುತ್ತಿದೆ ಎಂದ ಅವರು ರಾಯಚೂರು ಕೃಷಿ ವಿವಿ ತನ್ನ ೧೨ ನೇ ಘಟಿಕೋತ್ಸವ ಆಚರಿಸುತ್ತಿದೆ ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವೆಂದರು.


ಇಂದಿನ ಈ ಸಮಾರಂಭದಲ್ಲಿ ಅನೇಕರು ಪದವಿ ಪಡೆದಿದ್ದಾರೆ ಸುಮಾರು ೫೨ ಚಿನ್ನದ ಪದಕಗಳ ಪ್ರದಾನ ನಡೆದಿದೆ ಇದು ಸಂತಸದ ವಿಷಯವೆಂದ ಅವರು ನೀವೆಲ್ಲರೂ ಇಂದು ಪದವಿ, ಸ್ನಾತಕೋತ್ತರ ಪದವಿ, ಪಿಹೆಚ್‌ಡಿ ಪದವಿ ಪಡೆದು ಹೊಸ ಜೀವನಕ್ಕೆ ಕಾಲಿರಿಸಿದ್ದೀರಿ ನೀವು ಶಿಕ್ಷಣವಂತರಾಗುವುದು ದೇಶದ ಮತ್ತು ನಾಡಿನ ಹಾಗೂ ನಿಮ್ಮ ಪರಿವಾರದ ಹಿತ್ತಕ್ಕಾಗಿ ಎಂದರು.


ಭಾರತವನ್ನು ಆತ್ಮ ನಿರ್ಭರ ಮಾಡಲು ನಿಮ್ಮೆಲ್ಲರ ಶ್ರಮದಿಂದ ಸಾಧ್ಯವೆಂದ ಅವರು ಭಾರತ ಕೃಷಿ ಪ್ರಧಾನ ದೇಶ ಕೃಷಿ ಯನ್ನು ಸುಸ್ಥಿರ ಮತ್ತು ಲಾಭದಾಯಕಗೊಳಿಸಿ ದ್ವಿಗುಣ ಆದಾಯ ತರುವ ಕ್ಷೇತ್ರವನ್ನಾಗಿಸಬೇಕಿದೆ ಎಂದ ಅವರು ನೀವು ಉದ್ಯೋಗ ಹುಡುಕುವ ಬದಲು ಉದ್ಯೋಗದಾತರಾಗಿ ಎಂದರು.
ಸರ್ಕಾರ ಅನೇಕ ಯೋಜನೆ ಜಾರಿಗೆ ತಂದಿದೆ ದೇಶಿ ಕೃಷಿ ಬೆಳವಣೀಗೆಗೆ ಆದ್ಯತೆ ನೀಡಿ ಎಂದ ಅವರು ಪ್ರಪಂಚದಲ್ಲಿ ಚಿಕ್ಕ ರಾಷ್ಟçವಾಗಿರುವ ಇಸ್ರೇಲ್ ಕೃಷಿಯಲ್ಲಿ ವಿಶ್ವದಲ್ಲೆ ಮೊಟ್ಟಮೊದಲ ಸ್ಥಾನದಲ್ಲಿದೆ ಎಂದ ಅವರು ಇಸ್ರೇಲ್ ದೇಶದಲ್ಲಿ ಕೃಷಿ ಯೋಗ್ಯ ಹವಾಮಾನವಿಲ್ಲದಿದ್ದರೂ ಅವರ ಸಂಕಲ್ಪದಿಂದ ಈ ಸಾಧನೆ ಸಾಧ್ಯವಾಗಿದೆ ಎಂದರು.
  ಹಸಿರು ಕ್ರಾಂತಿ ನಂತರ ಭಾರತ ದೇಶವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿದೆ ಕೃಷಿ ಮತ್ತು ಐಟಿ ಬಿಟಿ ಆವಿಷ್ಕಾರಗಳು ದೇಶಕ್ಕೆ ಶಕ್ತಿ ತುಂಬಿವೆ ಎಂದ ಅವರು ಭಾರತ ಅಭಿವೃದ್ದಿ ಹೊಂದಿದ ರಾಷ್ಟçವಾಗಲಿದೆ ಎಂದ ಅವರು ಯುವಕರು ಈ ದೇಶದ ಸಂಪತ್ತು ಈ ಹಿಂದೆ ದೇಶದ ಸ್ವಾತಂತ್ರö್ಯಕ್ಕಾಗಿ ಹೋರಾಡಿದವರಲ್ಲಿಯೂ ಯುವಕರ ಪಾತ್ರ ಪ್ರಮುಖವಾಗಿತ್ತೆಂದ ಅವರು ಯುವಕರು ದೇಶ ಪ್ರೇಮ ಬೆಳೆಸಿಕೊಳ್ಳಬೇಕೆಂದರು.
ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವೆಂದ ಅವರು ಪರಿಸರ ಮತ್ತು ಅರಣ್ಯ ನಾಶದಿಂದ ದೇಶವು ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ ಅದಕ್ಕೆ ಆಸ್ಪದ ನೀಡದೆ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನಿರ್ಮಿಸಕೇಕೆಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ನವದೆಹಲಿಯ ಡಿಎಅರ್‌ಇ ಕಾರ್ಯದರ್ಶಿಗಳು ಮತ್ತು ಐಸಿಎಅರ್ ಮಹಾನಿರ್ದೇಶಕರಾದ ಡಾ.ಹಿಮಾಂಶು ಪಾಠಕ್ ಮಾತನಾಡಿ
ಇಂದಿನ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಮತ್ತು ಪದಕ ಪಡೆದ ವಿದ್ಯಾರ್ಥಿಗಳಿಗೆ ಅಭೀನಂದನೆ ಸಲ್ಲಿಸಿ ವಿದ್ಯಾರ್ಥಿಗಳ ಈ ಸಾಧನೆ ಹಿಂದೆ ಅವರ ಪಾಲಕರ ಮತ್ತು ಉಪನ್ಯಾಸಕರ  ಶ್ರಮವು ಇದೆ ಎಂದ ಅವರು ಶಿಕ್ಷಣವು ನಮಗೆ ಜ್ಞಾನದ ಜೊತೆಗೆ ಸಂಸ್ಕಾರ ನೀಡುತ್ತದೆ ವಿದ್ಯೆಯಿಂದ ವಿನಯ, ಸಂಪತ್ತು, ಗೌರವ ಸಿಗುತ್ತದೆ  ವಿಶ್ವ ವಿದ್ಯಾಲಯಗಳು ಶಿಕ್ಷಣ ದೇಗುಲಗಳು ಇದ್ದಂತೆ ಎಂದರು.
ಭಾರತದ ಕೃಷಿ ಸಾವಿರಾರು ವರ್ಷಗಳ ಇತಿಹಾಸವಿದೆ ಕೃಷಿಯಿಂದ ಆಹಾರ ಭದ್ರತೆ ಲಭಿಸುತ್ತದೆ ಇಂದು ಪ್ರಪಂಚದ ಅನೇಕ ರಾಷ್ಟçಗಳು ಭಾರತದಿಂದ ಧಾನ್ಯಗಳನ್ನು ಪಡೆದುಕೊಳ್ಳುತ್ತವೆ ನಮ್ಮ ಮೇಲೆ ಅವರು ಅವಲಂಬಿತರಾಗಿದ್ದಾರೆ ಇದು ಹೆಮ್ಮೆಯ ಸಂಗತಿ ಎಂದರು.


ಭಾರತದಲ್ಲಿ ಕೃಷಿ ಕ್ಷೇತ್ರ ಅನೇಕ ಸವಾಲುಗಳನ್ನು ಎದುರಿಸುತ್ತಿದೆ ಹವಾಮಾನ ವೈಪರೀತ್ಯ, ಅತಿ ವೃಷ್ಟಿ ಅನಾವೃಷ್ಟಿ,ಕೀಟ ಬಾಧೆ, ಬೆಲೆ ಕುಸಿತ ಮುಂತಾದವುಗಳಿದ್ದು ಅವುಗಳನ್ನು ಮೆಟ್ಟಿ ನಿಲ್ಲಬೇಕೆಂದ ಅವರು ನಾವು ಕೃಷಿ ಕ್ಷೇತ್ರದಲ್ಲಿ ಸ್ವಾವಲಂಬನೆ ಹೊಂದ ಬೇಕೆಂದರು.
ಕರ್ನಾಟಕ ರಾಜ್ಯ ಕೃಷಿ ಕ್ಷೇತ್ರದಲ್ಲಿ ದಾಪುಗಾಲಿಡುತ್ತಿದೆ ಇಲ್ಲಿನ ಕೃಷಿ ವಿವಿಗಳು ಅನೇಕ ಕೃಷಿ ಆವಿಷ್ಕಾರಗಳ ಮೂಲಕ ಕೃಷಿಗೆ ಉತ್ತೇಜನ ನೀಡುತ್ತಿದೆ ಎಂದ ಅವರು ವಿಶ್ವವಿದ್ಯಾಲಯಗಳಿಗೆ ಕಟ್ಟಡಗಳಿಗಿಂತ ಬುದ್ದಿವಂತ ವಿದ್ಯಾರ್ಥಿಗಳೆ ಭೂಷಣವೆಂದರು.
ಮುಂದಿನ ದಿನಗಳಲ್ಲಿ ಭಾರತ ವಿಕಸಿತ ರಾಷ್ಟçವಾಗಲಿದೆ ಎಂದ ಅವರು ಕಾರ್ಯಕ್ರಮದ ಬಗ್ಗೆ ಮತ್ತು ವಿದ್ಯಾರ್ಥಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.                          ಪ್ರಾಸ್ತಾವಿಕವಾಗಿ ಕೃಷಿ ವಿವಿ ಕುಲಪತಿಗಳಾದ ಡಾ.ಎಂ.ಹನುಮಂತಪ್ಪ ಮಾತನಾಡಿ ಘಟಿಕೋತ್ಸವಕ್ಕೆ ರಾಜ್ಯಪಾಲರ ಆಗಮನ ಕಳೆ ಕಟ್ಟಿದ್ದು ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಕೃಷಿ ಸಚಿವರ ಸಂದೇಶ: ಘಟಿಕೋತ್ಸವಕ್ಕೆ ಗೈರಾಗಿದ್ದು ಕೃಷಿ ಸಚಿವರಾದ ಚೆಲುವರಾಯಸ್ವಾಮಿ ಕಾರ್ಯಕ್ರಮಕ್ಕೆ ತಮ್ಮ ಸಂದೇಶ ಕಳುಹಿಸಿ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲಿ ಮತ್ತು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತೇಂದು ಸಂದೇಶ ಕಳಹಿಸಿದ್ದರು.
ವೇದಿಕೆ ಮೇಲೆ ಕೃಷಿ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯರು, ವಿವಿಧ ವಿಭಾಗಗಳ ಮುಖ್ಯಸ್ಥರು ಇದ್ದರು.
೫೨ ಚಿನ್ನದ ಪದಕ ಪ್ರದಾನ: ಘಟಿಕೋತ್ಸವದಲ್ಲಿ ಸುಮಾರು ೫೨ ಚಿನ್ನದ ಪದಕಗಳನ್ನು ರಾಜ್ಯಪಾಲರು ಪ್ರದಾನ ಮಾಡಿದರು.


ಚಿನ್ನ ಮುಡಿಗೇರಿಸಿಕೊಂಡ ವಿದ್ಯಾರ್ಥಿನಿಯರು: ಈ ಬಾರಿಯ ಘಟಿಕೋತ್ಸವದಲ್ಲಿ ಅತಿ ಹೆಚ್ಚು ಚಿನ್ನದ ಪದಕ ಪಡೆದು ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ.                                           ಜ್ಯೋತಿ ಹೆಚ್ ಅತಿ ಹೆಚ್ಚು ಚಿನ್ನದ ಪದಕ ಪಡೆದ ವಿದ್ಯಾರ್ಥಿನಿಯಾಗಿದ್ದು ಒಟ್ಟು ಆರು ಚಿನ್ನದ ಪದಕ ಪಡೆದಿದ್ದಾರೆ.                                    ಇನ್ನುಳಿದಂತೆ ಕಾಮಾಕ್ಷಿ ಎಂಬ ವಿದ್ಯಾರ್ಥಿನಿ ಐದು ಚಿನ್ನದ ಪದಕ ಪಡೆದ್ದಾರೆ.                                   ಪಿ .ಲಲಿತಾ ಎಂಬ ವಿದ್ಯಾರ್ಥಿನಿ ಮೂರು ಚಿನ್ನದ ಪದಕಗಳನ್ನು ಪಡೆದಿದ್ದಾರೆ.


Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್