ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ 2023 ನೇ ಸಾಲಿನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ: ಚಂದ್ರಯಾನ-3 ಯಶಸ್ಸಿನಿಂದ ಭಾರತೀಯ ತಂತ್ರಜ್ಞಾನದತ್ತ ಪ್ರಪಂಚದ ದೃಷ್ಟಿ-ದತ್ತಾತ್ರಿ ಸಾಲಗಾಮೆ

 


ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ 2023 ನೇ ಸಾಲಿನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ:

ಚಂದ್ರಯಾನ-3 ಯಶಸ್ಸಿನಿಂದ ಭಾರತೀಯ ತಂತ್ರಜ್ಞಾನದತ್ತ ಪ್ರಪಂಚದ ದೃಷ್ಟಿ- ದತ್ತಾತ್ರಿ ಸಾಲಗಾಮೆ

ರಾಯಚೂರು,ಆ.30- ಚಂದ್ರಯಾನ -3 ಯಶಸ್ವಿಯಾಗುವ ಮೂಲಕ ಇಡಿ ಪ್ರಪಂಚದ ದೃಷ್ಟಿ ಭಾರತೀಯ ತಂತ್ರಜ್ಞಾನದ ಮೇಲೆ ನೆಟ್ಟಿದೆ ಎಂದು ಬಾಷ್ ಗ್ಲೋಬಲ್ ಸಾಫ್ಟವೇರ್ ಟೆಕ್ನಾಲಜಿ ಸಿಇಓ ಮತ್ತು ಉಪಾಧ್ಯಕ್ಷರಾದ ದತ್ತಾತ್ರಿ ಸಾಲಗಾಮೆ ಅಭಿಪ್ರಾಯ ಪಟ್ಟರು.

ಅವರಿಂದು ಯರಮರಸ್ ಕ್ಯಾಂಪ್‌ನಲ್ಲಿರುವ ಭಾರತೀಯ  ಮಾಹಿತಿ ತಂತ್ರಜ್ಞಾನ ಸಂಸ್ಥೆಯ ೨೦೨೩ ನೇ ಸಾಲಿನ  ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆಂಡ್ ಡಾಟಾ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಸ್ವಾಗತ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಭಾರತ ದೇಶ ಇಂದು ತಂತ್ರಜ್ಞಾನದಲ್ಲಿ ಅಗಾಧವಾದ ಶಕ್ತಿ ಹೊಂದಿದ್ದು ಇಡಿ ಪ್ರಪಂಚವೆ ನಮ್ಮನ್ನು ನೋಡುತ್ತಿದ್ದು ದೇಶದ ಐಐಟಿ,ಐಐಎಂ,ಐಐಐಟ ಮುಂತಾದ ಸಂಸ್ಥೆಗಳು ಈ ದೇಶದ ಹೆಮ್ಮೆಯ ಸಂಸ್ಥೆಗಳಾಗಿವೆ ಎಂದ ಅವರು ಚಂದ್ರಯಾನ-೩ ಯಶಸ್ವಿಯಾಗುವ ಮೂಲಕ ಇಡಿ ವಿಶ್ವವೆ ಭಾರತದ ಬುದ್ದಿಮತ್ತೆಯನ್ನು ಪ್ರಶಂಸಿಸುತ್ತಿದೆ ಎಂದರು.


ಚ0ದ್ರಯಾನ-೩ ರಲ್ಲಿ ವಿಕ್ರಮ ಲ್ಯಾಂಡರ್ ಪ್ರಗ್ಯಾನ್ ರೋವರ್‌ರನನ್ನು ಇಂತಿಷ್ಟೆ ಸಮಯದಲ್ಲಿ ಲ್ಯಾಂಡ್ ಮಾಡುತ್ತದೆ ಎಂದು ಮೊದಲೆ ಅಂದಾಜು ಮಾಡಿದ್ದು ಕರಾರುವಕ್ಕಾಗಿ ಅದೆ ಸಮಯಕ್ಕೆ ಲ್ಯಾಂಡ್ ಮಾಡುವುದು ಪ್ರಯಾಸಕರ ಸಂಗತಿ ಮತ್ತು ತಂತ್ರಜ್ಞಾನದಲ್ಲಿ ಭಾರತ ದೇಶದ ವಿಜ್ಞಾನಿಗಳ ಶಕ್ತಿ ಸಾಬೀತು ಪಡಿಸಿದ್ದಾರೆ ಎಂದರು.


ಮೇಕ್ ಇನ್ ಇಂಡಿಯಾ ಮೂಲಕ ಸ್ವಾಭಿಮಾನದ ಹೆಜ್ಜೆ ದೇಶ ಇರಿಸಿದೆ ನಮ್ಮ ದೇಶದಲ್ಲಿ ಡಿಜಿಟಲಿಕರಣ ದಾಪುಗಾಲು ಇಡುತ್ತಿದ್ದು ದೇಶದಲ್ಲಿ ದಿನದಿಂದ ದಿನಕ್ಕೆ ನಗದು ವ್ಯವಹಾರ ಮಾಯವಾಗಿ ಎಲ್ಲವು ಡಿಜಿಟಲ್ ನಗದು ರಹಿತ ವ್ಯವಹಾರ ಮಾಡಲಾಗುತ್ತಿದೆ ನಮ್ಮ ದೇಶದ ಸಾಫ್ಟ್ವೇರ್ ಕಂಪನಿಗಳು ೩೫೦ ದಶಲಕ್ಷ ಸಾಪ್ಟ್ ವೇರ್ ರಫ್ತು ಮಾಡುತ್ತಿವೆ ದೇಶದ ಶೇ.೧೦ ರಷ್ಟು ಜಿಡಿಪಿ ಸಹಕಾರಿಯಾಗಿವೆ ಎಂದ ಅವರು ಐಐಟಿ, ಐಐಐಟಿ ಮುಂತಾದ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆ ಮತ್ತು ಉದ್ಯೋಗ ಪಡೆಯುವ ಕನಸು ಇಟ್ಟುಕೊಳ್ಳದೆ ದೇಶಕ್ಕೆ ಏನನ್ನಾದರೂ ಮಾಡುವ ಸಂಕಲ್ಪ ಮಾಡಿರಿ ಎಂದರು.


ಮುಖ್ಯ ಭಾಷಣಕಾರರಾದ ಬಾಷ್ ಕಂಪನಿ  ಗ್ಲೋಬಲ್ ಸಾಫ್ಟವೇರ್  ಸಿಓಓ ರಾಘವೇಂದ್ರ ಕೃಷ್ಣ ಮೂರ್ತಿ ಮಾತನಾಡಿ ನಾನು ರಾಯಚೂರಲ್ಲೆ ಹುಟ್ಟಿ ಬೆಳೆದಿದ್ದು ಎಸ್‌ಎಲ್‌ಎನ್  ಇಂಜಿನಿಯರಿ0ಗ್ ಕಾಲೇಜಿನಲ್ಲಿ ಇಂಜಿನಿಯರಿ0ಗ್ ಪದವಿ ಮುಗಿಸಿದ್ದೇನೆ ರಾಯಚೂರಿಗೆ ಹಿಂದುಳಿದ ಜಿಲ್ಲೆ ಎಂಬ ಹಣೆ ಪಟ್ಟಿ ಕೀಳಲು ಇಲ್ಲಿಯ ಶಿಕ್ಷಣ ಸಂಸ್ಥೆಗಳು ಮತ್ತು ಜನಪ್ರತಿನಿಧಿಗಳು ಮುಂದಾಗಬೇಕೆ0ದ ಅವರು ಐಐಐಟಿ ರಾಯಚೂರಲ್ಲಿ ಸ್ಥಾಪನೆಯಾಗಿದ್ದು ಇಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥೀಗಳು ದೊಡ್ಡ ಕನಸ್ಸು ಕಾಣಬೇಕು ನಿಮಗೆ ಉದ್ಯೋಗ ದೊರೆತರೆ ಮಾತ್ರ ಸಾಲದು ನೀವು ಉತ್ತಮ ಕೊಡುಗೆ ಸಮಾಜಕ್ಕೆ ನೀಡುವಂತಾಗಬೇಕೆoದರು.


ಬಾಷ್ ಕಂಪನಿ ಐಐಐಟಿಗೆ ಎಕೆಡಮಿಕ್ ಕೊಲಾಬರೇಷನ್ ಮಾಡಿಕೊಂಡಿದ್ದು ನಿಮ್ಮ ಸಂಸ್ಥೆಗೆ ನಾವು ಸಲಹೆ ನೀಡಲು ಸದಾ ಸಿದ್ದರೆಂದ ಅವರು ದೇಶವು ಮುನ್ನಡೆ ಸಾಧಿಸಬೇಕೆಂದರೆ ಅಲ್ಲಿರುವ ತಂತ್ರಜ್ಞಾನ ಬೆಳೆಯಬೇಕೆಂದರು.

ಐಐಐಟಿ ನಿರ್ದೇಶಕ ಡಾ.ಹರೀಶ ಕುಮಾರ್ ಸರ್ಡಾನಾ ಮಾತನಾಡಿ ವಿದ್ಯಾರ್ಥಿಗಳು ಕೇವಲ ಕೆಲಸವನ್ನು ಪಡೆಯಲು ಶಿಕ್ಷಣವಂತರಾಗದೆ ಸಮಾಜಕ್ಕೆ, ದೇಶಕ್ಕೆ ಕೊಡುಗೆ ನೀಡುವ ದೃಡ ಸಂಕಲ್ಪಗೈಯ್ಯಬೇಕೆ0ದ ಅವರು ಉದ್ಯೋಗಾಕಾಂಕ್ಷಿಗಳಾಗದೆ ಉದ್ಯೋಗದಾತರಾಗಿ ಹತ್ತಾರು ಜನಕ್ಕೆ ಉದ್ಯೋಗ ನೀಡುವ ಗುರಿ ಹೊಂದಿ ಎಂದ ಅವರು ಕಾರ್ಯಕ್ರಮು ಮುಖ್ಯ ಅತಿಥಿಗಳಿಗೆ ಮತ್ತು ಮುಖ್ಯ ಭಾಷಣಕಾರರಿಗೆ ಅಭಿನಂದನೆ ಸಲ್ಲಿಸಿದರು.

ಐಐಐಟಿ ಸಾರ್ವಜನಿಕ ಸಂಪರ್ಕಾಧಿಕಾರಿ ಸುರೇಶ ಮಾತನಾಡಿ ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿ ವಂದಸಿದರು. ವಿದ್ಯಾರ್ಥಿಗಳು, ಬೋಧಕ ,ಬೋಧಕೇತರ ಸಿಬ್ಬಂದಿಗಳಿದ್ದರು.


Comments

Popular posts from this blog