ಮಂತ್ರಾಲಯದಲ್ಲಿ ರಾಯರ 352ನೇ ಆರಾಧನಾ ಸಪ್ತರಾತ್ರೋತ್ಸವಕ್ಕೆ ವಿದ್ಯುಕ್ತ ಚಾಲನೆ: ಭಕ್ತಾದಿಗಳಿಗೆ ಸಕಲ ವ್ಯವಸ್ಥೆ- ಶ್ರೀ ಸುಬುಧೇಂದ್ರತೀರ್ಥರು

 


ಮಂತ್ರಾಲಯದಲ್ಲಿ ರಾಯರ 352ನೇ ಆರಾಧನಾ ಸಪ್ತರಾತ್ರೋತ್ಸವಕ್ಕೆ ವಿದ್ಯುಕ್ತ ಚಾಲನೆ:                 ಭಕ್ತಾದಿಗಳಿಗೆ ಸಕಲ ವ್ಯವಸ್ಥೆ- ಶ್ರೀ ಸುಬುಧೇಂದ್ರತೀರ್ಥರು      ರಾಯಚೂರು,ಆ.29- ಮಂತ್ರಾಲಯದಲ್ಲಿ ರಾಯರ 352 ನೇ ರಾಘವೇಂದ್ರ ಸ್ವಾಮಿಗಳ ಆರಾಧನಾ ಸಪ್ತರಾತ್ರೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಸಂಜೆ ಗೋಧೂಳಿ ಮುಹೂರ್ತದಲ್ಲಿ  ಗೋ, ಅಶ್ವ ಮುಂತಾದವುಗಳಿಗೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು.

   ನಂತರ ಯೋಗಿಂದ್ರ ಸಭಾಂಗಣದಲ್ಲಿ ಆರಾಧನಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ  
ಮಾತನಾಡಿ ಗ್ರಾಮ ದೇವತೆ   ಮಂಚಾಲಮ್ಮ ಆಶೀರ್ವಾದದೊಂದಿಗೆ ರಾಯರ ಆರಾಧನೆ ಸಪ್ತರಾತ್ರೋತ್ಸವಕ್ಕೆ ಅದ್ದೂರಿ ಚಾಲನೆ ದೊರೆತಿದ್ದು  ಆ.31 ಪೂರ್ವಾರಾಧನೆ, ಸೆ.1 ಮಧ್ಯಾ ರಾಧನೆ ಮತ್ತು 2 ರಂದು ಉತ್ತರಾರಾಧನೆ ನೆರವೇರಲಿದ್ದು   ಆರಾಧನೆಗೆ ಆಂಧ್ರದ ರಾಜ್ಯಪಾಲರಾದ ಅಬ್ದುಲ್ ನಜೀರ ಆಗಮಿಸಲಿದ್ದು ಈ ಬಾರಿ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿಯನ್ನು ಟಾಟಾ ಗ್ರುಪ್ ನ ಚಂದ್ರಶೇಖರ, ಕರಾಡ,ಗಿರಕಿಪಾಟಿ  ನರಸಿಂಹರಾವ್, ರಾಮವಿಠಲಾಚಾರ್ಯರಿಗೆ ನೀಡಲಾಗುತ್ತಿದೆ ಎಂದರು.   

                      ಬರುವ ಭಕ್ತಾದಿಗಳಿಗೆ ನೂತನವಾದ ಶ್ರೀ ನರಹರಿ ತೀರ್ಥ ವಸತಿಗೃಹ, ಮೂಲರಾಮ ವಸತಿಗೃಹ ಮುಂತಾದ ವಿವಿಧ  ವಸತಿಗೃಹಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ನದಿಯಲ್ಲಿ ನೀರಿನ ಅಭಾವವಿದ್ದರು ನದಿಗೆ ನೀರು ಹರಿಸಲಾಗುತ್ತದೆ ಎಂಬ ಮಾಹಿತಿಯಿದೆ ಎಂದ ಅವರು ಭಕ್ತರಿಗೆ ಉಚಿತ ಪ್ರಸಾದ, ವೈದ್ಯಕೀಯ ಚಿಕಿತ್ಸೆ  ನೆರವು ನೀಡಲಾಗುತ್ತಿದೆ ಭಕ್ತರು ತಮ್ಮ ಸ್ವ ಕಾಳಜಿ ವಹಿಸಿಕೊಳ್ಳಬೇಕು ಶ್ರೀಮಠದಿಂದಲು ಭಕ್ತರಿಗೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದರು.   

                                                     ಈ ಸಂದರ್ಭದಲ್ಲಿ ರಾಜಾ ಎಸ್.ಗಿರಿಯಾಚಾರ್ಯ, ವ್ಯವಸ್ಥಾಪಕರಾದ ಎಸ್.ಕೆ .ಶ್ರೀನಿವಾಸರಾವ್, ವೆಂಕಟೇಶ ಜೋಷಿ, ಡಿ.ಎಂ.ಆನಂದರಾವ್ ಸೇರಿದಂತೆ ಶ್ರೀಮಠದ ಸಿಬ್ಬಂದಿಗಳು, ಭಕ್ತರಿದ್ದರು.                          ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ