ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಮಧ್ಯಾರಾಧನೆ:. ತಿರುಪತಿ ತಿರುಮಲ ದೇವಸ್ಥಾನದಿಂದ ಶೇಷ ವಸ್ತ್ರ ಗುರುರಾಯರಿಗೆ ಸಮರ್ಪಣೆ
ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಮಧ್ಯಾರಾಧನೆ: ತಿರುಪತಿ ತಿರುಮಲ ದೇವಸ್ಥಾನದಿಂದ ಶೇಷ ವಸ್ತ್ರ ಗುರುರಾಯರಿಗೆ ಸಮರ್ಪಣೆ ರಾಯಚೂರು,ಸೆ.1-ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಮಧ್ಯಾರಾಧನೆ ಅಂಗವಾಗಿ ತಿರುಪತಿ ತಿರುಮಲ ದೇವಸ್ಥಾನದಿಂದ ಮಂತ್ರಾಲಯಕ್ಕೆ ಆಗಮಿಸಿ ಶೇಷ ವಸ್ತ್ರವನ್ನು ಶ್ರೀ ರಾಘವೇಂದ್ರ ಸ್ವಾಮಿ ಮಠದ ಆಡಳಿತ ಅಧಿಕಾರಿಗಳು, ಸಿಬ್ಬಂದಿಗಳು ಸ್ವಾಗತಿಸಿದರು.
ಶ್ರೀ ಮಠದ ಆವರಣದಿಂದ ಸಕಲ ವಾಧ್ಯಗಳ ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು.
ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಶೇಷ ವಸ್ತ್ರವನ್ನು ಸ್ವೀಕರಿಸಿ ತಲೆಯ ಮೇಲೆ ಹೊತ್ತು ಮೂಲ ವೃಂದಾವನ ಪ್ರದಕ್ಷಿಣೆ ಮಾಡುವ ಮೂಲಕ ರಾಯರಿಗೆ ಸಮರ್ಪಿಸಿದರು.
ನಂತರ ಶ್ರೀಗಳು ಮಾತನಾಡಿ, ಇಂದು ಭೂ ಲೋಕದ ಒಡೆಯ ಶ್ರೀನಿವಾಸ ದೇವರ ಶೇಷ ವಸ್ತ್ರದ ಮೂಲಕ ಗುರುರಾಯರ ಸನ್ನಿಧಾನಕ್ಕೆ ಬಂದಿದ್ದಾನೆ, ಕಳೆದ ಅನೇಕ ವರ್ಷಗಳಿಂದ
ಗುರುರಾಯರ ಆರಾಧನೆ ಸಮಯದಲ್ಲಿ ಪ್ರತಿ ವರ್ಷ ತಿರುಪತಿಯ ಶ್ರೀನಿವಾಸನ ಸನ್ನಿಧಿಯಿಂದ ಶೇಷ ವಸ್ತ್ರವನ್ನು ಅಲ್ಲಿನ ದೇವಸ್ಥಾನ ಆಡಳಿತ ಮಂಡಳಿ ತಪ್ಪದೆ ವಾಡಿಕೆ ತಪ್ಪದೆ ಪಾಲಿಸುತ್ತ ಬಂದಿದ್ದು, ನಾಡ ನುಡಿಯಂತೆ ದೇವರು ಎಂದರೆ ತಿರುಪತಿ ತಿಮ್ಮಪ್ಪ ಗುರುಗಳು ಎಂದರೆ ಮಂತ್ರಾಲಯ ರಾಗಪ್ಪ ಎನ್ನುವ ಹಾಗೆ ತಿರುಪತಿ ಮಂತ್ರಾಲಯ ನಡುವೆ ಅವಿನಾವ ಸಂಬಂಧ ಹೊಂದಿದೆ ಎಂದರು.
ತಿರುಪತಿ ತಿರುಮಲ ದೇವಸ್ಥಾನ - ತಿರುಪತಿ ಜೆ. ಇ. ಒ. ಶ್ರೀ ವೀರ ಬ್ರಹ್ಮೇಂದ್ರ ಮಾತನಾಡಿ ಇಂದು ಗುರುರಾಯರ ಮದ್ಯಾರಾಧನೆ ಸಮಯದಲ್ಲಿ ತಿರುಪತಿಯಿಂದ ಶೇಷ ವಸ್ತ್ರ ನೀಡುವ ಪರಂಪರೆ ನಡೆದುಕೊಂಡು ಬಂದಿದ್ದು, ಇಂದು ನಾವು ತಿರುಪತಿಯಿಂದ ತಂದ ಶೇಷ ವಸ್ತ್ರವನ್ನು ಶ್ರೀ ಗಳ ಮೂಲಕ ಗುರುರಾಯರಿಗೆ ಅರ್ಪಿಸಿದ್ದೆವೆ ಎಂದರು.
ಇದೇ ವೇಳೆ ಶ್ರೀಗಳು ಶರತ ಕುಮಾರ, ವರ್ಣಬೇಧ, ಸಾಧನೆಯಲ್ಲಿ ಹಿಂದೆ, ನಾವೇಕೆ ಎಚ್ಚರವಿಲ್ಲ,ಯಾರು ಸಾಧಕರು,ನಮ್ಮಲ್ಲಿ ಇರಬೇಕಾದ ಗುಣಗಳ ಸಮೀಕ್ಷೆ, ನಮ್ಮಲ್ಲಿ ಇರುವ ದೋಷಗಳ ಸಮೀಕ್ಷೆ, ಬೃಹ್ಮ ತತ್ವ, ಬೃಹ್ಮ ಸೋತ್ರ ಭಾಷೆ, ಶ್ರೀ ಪಾದರ 11 ವರ್ಷದ ಸಾಧನೆ ಸೇರಿದಂತೆ ಇತರೆ ಕಿರು ಹೊತ್ತಿಗೆ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ವಿದ್ವಾನ ವಾದಿರಾಜ ಆಚಾರ್ಯ, ವಿದ್ವಾನ ಸುಧೀಂದ್ರ ಅಚಾರ್ಯ, ಶ್ರೀ ಧರ ಆಚಾರ್ಯ, ಶ್ರೀ ಮಠದ ಆಡಳಿತಾಧಿಕಾರಿ ಮಾಧವಶೆಟ್ಟಿ, ವ್ಯವಸ್ಥಾಪಕ ಎಸ್.ಕೆ ಶ್ರಿನಿವಾಸರಾವ್, ವೆಂಕಟೇಶ್ ಜೋಶಿ ,ಗುರುಸಾರ್ವಭೌಮ ವಿದ್ಯಾಪೀಠದ ಪ್ರಚಾರ್ಯರಾದ ರಮಣರಾವ, ಶ್ರೀ ಮಠದ ಮಾಧ್ಯಮ ಉಸ್ತುವಾರಿ ಶ್ರೀನಿಧಿ ಸೇರಿದಂತೆ ಗುರುಸಾರ್ವಭೌಮ ವಿದ್ಯಾಪೀಠದ ವಿದ್ಯಾರ್ಥಿಗಳು, ಶ್ರೀ ಮಠದ ಸಿಬ್ಬಂದಿಗಳು ಉಪಸ್ಥಿತರಿದ್ದರು.
Comments
Post a Comment