ತುಂಗಾ ನದಿ ಕಾರಿಡಾರ್ - ಶ್ರೀ ಜಗನ್ನಾಥ ದಾಸರ ಸಂಗ್ರಹಾಲಯ ಲೋಕಾರ್ಪಣೆ: ಪವಿತ್ರ ನದಿಗಳ ಮಹತ್ವ ಸಾರುವ ಅವಶ್ಯಕತೆ ಇದೆ- ಶ್ರೀ ಸುಬುಧೇಂದ್ರತೀರ್ಥರು
ತುಂಗಾ ನದಿ ಕಾರಿಡಾರ್ - ಶ್ರೀ ಜಗನ್ನಾಥ ದಾಸರ ಸಂಗ್ರಹಾಲಯ ಲೋಕಾರ್ಪಣೆ: ಪವಿತ್ರ ನದಿಗಳ ಮಹತ್ವ ಸಾರುವ ಅವಶ್ಯಕತೆ ಇದೆ- ಶ್ರೀ ಸುಬುಧೇಂದ್ರತೀರ್ಥರು
ರಾಯಚೂರು,ಆ.30- ಧಾರ್ಮಿಕ ಕ್ಷೇತ್ರದಲ್ಲಿ ಹರಿಯುವ ನದಿಗಳ ಅವುಗಳ ಮಹತ್ವದ ಕುರಿತು ಭಕ್ತಾದಿಗಳಿಗೆ ತಿಳಿಸುವುದು ಬಹಳ ಅವಶ್ಯಕತೆ ಇದೆ ಎಂದು ಮಂತ್ರಾಯ ಶ್ರೀ ರಾಘವಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀ ಪಾದಂಗಳವರು ಹೇಳಿದರು.
ಅವರಿಂದು ಶ್ರೀ ಮಠದ ಆವರಣದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಸಪ್ತರಾತ್ರೋತ್ಸವ ಎರಡನೇ ದಿನವಾದ ಇಂದು ತುಂಗಭದ್ರಾ ನದಿಯಿಂದ ಶ್ರೀ ಮಠದ ವರೆಗಿನ ತುಂಗಾ ನದಿ ಕಾರಿಡಾರ್ ( ತುಂಗಾ ಮಾರ್ಗ) ಹಾಗೂ ಶ್ರೀ ಜಗನ್ನಾಥ ದಾಸರ ಜೀವನ, ಕೃತಿಗಳ ಪರಿಚಯಮಾಡಿಕೊಡುವ ಸಂಗ್ರಹಾಲಯ (ಮ್ಯೂಸಿಯಂ) ರ್ಲೋಕಾರ್ಪಣೆಗೊಳಿಸಿ ಮಾತನಾಡಿದರು.
ಧಾರ್ಮಿಕವಾಗಿ ನದಿಗಳು ಬಹಳ ಅತ್ಯಂತ ಪವಿತ್ರವಾಗಿದ್ದು, ಅವುಗಳ ಮಹತ್ವ ಸಾರುವ ಕೆಲಸಕ್ಕೆ ಶ್ರೀ ಮಠ ಮುಂದಾಗಿದ್ದು, ಅದರ ಭಾಗವಾಗಿ ಇಂದು ಸಾಂಕೇತಿಕವಾಗಿ ತುಂಗಾ ಮಾರ್ಗ ಉದ್ಘಾಟಿಸಲಾಗಿದೆ. ಬಾಕಿ ಇರುವ ಕಾಮಗಾರಿ ಆರಾಧನೆ ನಂತರ ಕೈ ಗೊಳ್ಳಲಾಗುವುದು ಎಂದರು.
ನದಿಗಳ ಉಗಮ, ಅವುಗಳ ಪಾವಿತ್ರತೆ, ಸ್ಮರಣೆ, ಸಂಕಲ್ಪ ಸೇರಿದಂತೆ ಪೂಣ್ಯ ಸ್ನಾನದ ಮಹತ್ವವನ್ನು ಭಕ್ತಾದಿಗಳಿಗೆ ಸಾರುವ ಉದ್ದೇಶ ತುಂಗಾ ನದಿ ಕಾರಿಡಾರ್ ಹೊಂದಲಾಗಿದೆ ಎಂದರು.
ದಾಸ ಸಾಹಿತ್ಯದ ಶ್ರೀ ಜಗನ್ನಾಥ ದಾಸರು ರಚಿಸಿರುವ ಹರಿಕಥಾಮೃತ ಸಾರ ಬಹಳ ಮಹತ್ವದಾಗಿದ್ದು, ಅವರ ಜೀವನ, ಕೃತಿಗಳ ಪರಿಚಯಿಸುವ ಈ ಸಂಗ್ರಹಾಲಯ ಮಾರ್ಗದರ್ಶಕವಾಗಿದ್ದು, ಇಲ್ಲಿ ಹರಿಕಥಾಮೃತಸಾರದ 32 ಸುಳಾಧಿಗಳ ಸಂಪೂರ್ಣವಾಗಿ ಚಿತ್ರದೊಂದಿಗೆ ಅದ್ಭುತವಾಗಿ ಮೂಡಿಬಂದಿದೆ ಎಂದರು.
ಇದರ ಜೊತೆಗೆ ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆಯನ್ನು ಸಾರುವ ಸಂಗ್ರಹಾಲಯ (ಮ್ಯೂಸಿಯಂ) ಕಾರ್ಯ ಪ್ರಗತಿಯಲ್ಲಿದೆ, ಸುಮಾರು 35 ಕೋಟಿ ವೆಚ್ಚದಲ್ಲಿ ಮೂರು ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ರಾಮ ಕಥಾ ಥೀಮ್ ಪಾರ್ಕ ಮುಂದಿನ ಆರು ತಿಂಗಳಲ್ಲಿ ಉದ್ಘಾಟನೆ ಆಗಲಿದೆ ಎಂದರು.
ಈ ಸಂದರ್ಭದಲ್ಲಿ ದಾಸಸಾಹಿತ್ಯ ಪ್ರಾಜೆಕ್ಟ್ ನಿರ್ದೇಶಕ ಅಪ್ಪಣ್ಣ ಆಚಾರ್ಯ, ವಿಧ್ವಾನ ಮಧುಗಿರಿ ಆಚಾರ್ಯ, ಮುಳಬಾಗಿಲು ಕೃಷ್ಣಾಚಾರ್ಯ, ಸುಳಾದಿ ಹನುಮೇಶ ಆಚಾರ್ಯ ಸೇರಿದಂತೆ ಶ್ರೀ ಮಠದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಗಮನ ಸೇಳೆದ ಅಂಗಾಕುಲಂಗ್ ವಾದನ:
ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯದಲ್ಲಿ ಅಂಗಾಕುಲಂಗ್ ವಾದನ ಜನರ ಗಮನ ಸೆಳೆಯಿತು.ಶ್ರೀ ಮಠದ ಆವರಣದಲ್ಲಿರುವ ಯೋಗೀಂದ್ರ ಸಭಾ ಮಂಟಪದಲ್ಲಿ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಎರಡನೇ ದಿನ ಬುಧವಾರ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರದಲ್ಲಿ ಎಚ್.ಎಸ್ ಅನುಸೂಯ ಕುಲಕರ್ಣಿ ಇವರಿಂದ ಅಂಗಾಕುಲಂಗ್ ವಾದನ, ವಿದ್ವಾನ ಆರ್.ಕೆ ಪ್ರಸನ್ನಕುಮಾರಿ ಅವರಿಂದ ಕರ್ನಾಟಕ ಸಂಗೀತ , ಕಲಾ ಬಿಂದು ಅವರಿಂದ ಭರತನಾಟ್ಯ ಸಾಂಸ್ಕೃತಿಕ ಕಾರ್ಯಕ್ರಮ ನೆರೆದಿದ್ದ ಜನರ ಗಮನ ಸೆಳೆಯಿತು. ಅಂಚೆ ಲಕೋಟೆ ಮೂಲಕ ಭಕ್ತರ ಮನೆಗೆ ಗುರು ರಾಯರು: ವಿಶೇಷ ಅಂಚೆ ಲಕೋಟೆ ಮೂಲಕ ಶ್ರೀ ರಾಘವೇಂದ್ರ ಸ್ವಾಮಿಗಳು ಅಪಾರ ಭಕ್ತಾದಿಗಳ ಮನೆಗೆ ತಲುಪಿಸುವ ಕಾರ್ಯ ಅಂಚೆ ಇಲಾಖೆ ಮಾಡಿರುವುದು ಶ್ಲಾಘನೀಯ ಎಂದು ಮಂತ್ರಾಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದರು.
ಶ್ರೀ ಮಠದ ಆವರಣದಲ್ಲಿ ಯೋಗೀಂದ್ರ ಸಭಾ ಮಂಟಪದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಸಪ್ತರಾತ್ರೋತ್ಸವ ಎರಡನೇ ದಿನ ಬುಧವಾರ ಸಂಜೆ ನಡೆದ ಅಂಚೆ ಇಲಾಖೆಯಿಂದ ಶ್ರೀ ರಾಘವೇಂದ್ರ ಸ್ವಾಮಿಗಳವರ ಭಾವಚಿತ್ರವನ್ನು ಹೊಂದಿರುವ ವಿಶೇಷ ಲಕೋಟೆ ಬಿಡುಗಡೆ ಗೊಳಿಸಿ ಮಾತನಾಡಿ, ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಶುಭ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹಾಗೂ ಅಂಚೆ ಇಲಾಖೆ ಸಹಯೋಗದೊಂದಿಗೆ ಶ್ರೀ ರಾಘವೇಂದ್ರ ಸ್ವಾಮಿಗಳವರ ಭಾವಚಿತ್ರವನ್ನು ಹೊಂದಿರುವ ವಿಶೇಷ ಲಕೋಟೆ ಬಿಡುಗಡೆ ಮಾಡಲಾಗಿದ್ದು, ದೇಶದಲ್ಲಿ ನೆಲೆಸಿರುವ ರಾಯರ ಅಪಾರ ಭಕ್ತಾದಿಗಳಿಗೆ ಅಂಚೆ ಲಕೋಟೆ ಮೂಲಕ ಮನೆಗೆ ಬರಲಿದ್ದು, ಭಕ್ತರಲ್ಲಿ ಸಂತಸ ಹೆಚ್ಚಿಸಲಿದೆ.
ಅಂಚೆ ಲಕೋಟೆ ಬಿಡುಗಡೆಗಾಗಿ ಕಾರ್ಯಪ್ರವೃತರಾಗಿ ಕಾರ್ಯ ನಿರ್ವಹಿದ ಅಂಚೆ ಇಲಾಖೆ ಅಧಿಕಾರಿಗಳಿಗೆ ಶ್ರೀ ಮಠ ಅಭಿನಂಧಿಸಲಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ಅಂಚೆ ಇಲಾಖೆಯ ಮುಖ್ಯಸ್ಥರಾದ ರಾಜೇಂದ್ರ ಕುಮಾರ್, ಮೈಸೂರಿನ ಡಿ.ಪಿ ಮಧುಸೂದನ್, ವೆಂಕಟ ನರಸಿಂಹ ಆಚಾರ್ಯ ರಾಜಪುರೋಹಿತ್, ಆಂದ್ರಪ್ರದೇಶದ ಧಾರ್ಮಿಕ ಪರಿಷತ್ ಸದಸ್ಯ ಎಸ್ ಗೋವಿಂದ ಹರಿ, ಲಕ್ಷ್ಮೀ ಮಾಧವಿ, ರಾಜೇಶ,ಶಂಕರ್ ಸೇರಿದಂತೆ ಶ್ರೀ ಮಠದ ಸಿಬ್ಬಂದಿಗಳು ಉಪಸ್ಥಿತರಿದ್ದರು.
Comments
Post a Comment