ರಾಯರ ಮಠ ಸರ್ವ ಜನಾಂಗದ ಶಾಂತಿಯ ತೋಟ- ರಾಜ್ಯಪಾಲ ನ್ಯಾ.ಅಬ್ದುಲ್‌ ನಜೀರ್‌


 ರಾಯರ  ಮಠ ಸರ್ವ ಜನಾಂಗದ ಶಾಂತಿಯ ತೋಟ- ರಾಜ್ಯಪಾಲ ನ್ಯಾ.ಅಬ್ದುಲ್‌ ನಜೀರ್‌ 

ಮಂತ್ರಾಲಯ,ಆ.31-  ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ ಎಂದು ಆಂಧ್ರ ಪ್ರದೇಶದ  ರಾಜ್ಯಪಾಲರಾದ  ನ್ಯಾ. ಅಬ್ದುಲ್‌ ನಜೀರ್‌ ಹೇಳಿದರು.                               ಅವರಿಂದು ಮಂತ್ರಾಲಯಕ್ಕೆ ಆಗಮಿಸಿ ರಾಯರ ಬೃಂದಾವನ ದರ್ಶನ ಪಡೆದು ನಂತರ ವೇದಿಕೆ ಕಾರ್ಯಕ್ರಮದಲ್ಲಿ  ಮಾತನಾಡಿ, ಶ್ರೀ ಮಠವು ವಿಶ್ವದಾದ್ಯಾಂತ ಮಧ್ವ ಸಿದ್ದಾಂತದ ಪರಸರಿಸುವ ಕಾರ್ಯ ಮಾಡುತ್ತಿದೆ ಎಂದ ಅವರು ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಭಕ್ತರ ಪಾಲಿನ ಕಲ್ಪವೃಕ್ಷ ಕಾಮಧೇನು ಇದ್ದಂತೆ ಶ್ರೀ ಮಠವು ಸಾಮಾಜಿಕ ಕಾರ್ಯ ಮಾಡುತ್ತಿದ್ದು, ಭಕ್ತಾದಿಗಳಿಗೆ ಅನ್ನದಾನ, ರೋಗಿಗಳಿಗೆ ಪ್ರಾಣದಾನ, ಗುರುಸಾರ್ವಭೌಮ  ವಿದ್ಯಾಪೀಠದ ಮೂಲಕ ಆಧ್ಯಾತ್ಮಿಕ ಪ್ರಸಾರ, ಪರಿಮಳ ವಿದ್ಯಾಪೀಠದ ಮೂಲಕ  ಮಕ್ಕಳಿಗೆ ಉಚಿತ ಶಿಕ್ಷಣ, ಕೇಂದ್ರ ಸರ್ಕಾರದಿಂದ ಸ್ವಚ್ಛ ಮಂತ್ರಾಲಯಕ್ಕೆ ಪಾತ್ರವಾಗಿದೆ ಎಂದರು.


 ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ವಿಶ್ವವಿದ್ಯಾಲಯ, ಮಿನಿ ವಿಮಾನ ನಿಲ್ದಾಣ  ಶ್ರೀ ಮಠದ ಯೋಜನೆಗಳಾಗಿವೆ ಎಂದರು. 


                           
ಪೂರ್ಣ ಕುಂಬ ಸ್ವಾಗತ :  ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ  ಪೂರ್ವಾರಾಧನೆ ಅಂಗವಾಗಿ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಸಮಾರಂಭದ ಹಿನ್ನೆಲೆ ಮಂತ್ರಾಲಯಕ್ಕೆ  ಆಗಮಿಸಿದ ಆಂಧ್ರ ಪ್ರದೇಶದ  ರಾಜ್ಯಪಾಲರಾದ  ನ್ಯಾ.ಅಬ್ದುಲ್‌ ನಜೀರ್‌ ಅವರಿಗೆ ಶ್ರೀ ಮಠದ ಆಡಳಿತ ಮಂಡಳಿಯಿಂದ ಪೂರ್ಣ ಕುಂಬ ಸ್ವಾಗತ ಕೋರಲಾಯಿತು.

ಶ್ರೀ ಮಠದ ಆವರಣದಲ್ಲಿ ಪೂರ್ಣ ಕುಂಬ,  ವಾದ್ಯಗಳೊಂದಿಗೆ ಸ್ವಾಗತದೊಂದಿಗೆ ರಾಯರ ಮೂಲ ಬೃಂದಾವನ ದರ್ಶನ ಪಡೆದರು.  ಈ ಸಂದರ್ಭದಲ್ಲಿ ಶ್ರೀ ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು, ರಾಜಾ ಎಸ್.ಗಿರಿಯಾಚಾರ್, ವ್ಯವಸ್ಥಾಪಕರು, ಸಿಬ್ಬಂದಿಗಳಿದ್ದರು.



Comments

Popular posts from this blog