ನಗರದ ವಿವಿಧೆಡೆ ರಾಯರ ಪೂರ್ವಾರಾಧನೆ:.
ನಗರದ ವಿವಿಧೆಡೆ ರಾಯರ ಪೂರ್ವಾರಾಧನೆ: ರಾಯಚೂರು,ಆ.31-ನಗರದ ವಿವಿಧೆಡೆ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಪೂರ್ವಾರಾಧನೆ ವಿಜೃಂಭಣೆಯಿಂದ ನೆರವೇರಿತು. ನಗರದ ಜವಾಹರ ನಗರ ರಾಯರ ಮಠದಲ್ಲಿ ಬೆಳಿಗ್ಗೆ ರಾಯರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ ಅಲಂಕಾರ, ಹಸ್ತೋದಕ, ಮಂಗಳಾರತಿ,ತೀರ್ಥ ಪ್ರಸಾದ ನೆರವೇರಿತು.
ಸಂಜೆ ಸಿ.ಎನ್.ರಾಘವೇಂದ್ರರವರಿಂದ ದಾಸವಾಣಿ ನೆರವೇರಿತು. ಉತ್ತರಾಧಿ ಮಠದಲ್ಲಿ: ಗಾಜಗಾರಪೇಟೆ ಉತ್ತರಾಧಿ ಮಠದಲ್ಲಿ ಮಾರುತಿ ಭಜನಾ ಮಂಡಳಿ ಸಹಯೋಗದಲ್ಲಿ ವಿವಿಧ ಧಾರ್ಮಿಕ ,ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ಸಾಯಂಕಾಲ ವೇದಿಕೆಯಲ್ಲಿ ರಘುಪತಿ ಪೂಜಾರ್ ತಂಡದಿಂದ ಕ್ಲಾರಿಯೋನೆಟ್ ವಾದನ ಮತ್ತು ದಾಸವಾಣಿ ನೆರವೇರಿತು. ಗಾಜಗಾರ ಪೇಟೆ ಉತ್ತರಾದಿ ಮಠದ ಬೀದಿ ವಿದ್ಯುತ್ ದೀಪದಿಂದ ಕಂಗೊಳಿಸುತ್ತಿತ್ತು.
Comments
Post a Comment