ಕರ್ನಾಟಕ ವೆಲ್‌ಫೇರ್ ಟ್ರಸ್ಟ್ ಶಿಕ್ಷಣ ಸಂಸ್ಥೆ : ರಾಷ್ಟ್ರೀಯ ಕ್ರೀಡಾ ದಿನಾಚರಣೆ ಆಚರಣೆ
ಕರ್ನಾಟಕ ವೆಲ್‌ಫೇರ್ ಟ್ರಸ್ಟ್ ಶಿಕ್ಷಣ ಸಂಸ್ಥೆ :ರಾಷ್ಟ್ರೀಯ ಕ್ರೀಡಾ ದಿನಾಚರಣೆ ಆಚರಣೆ ರಾಯಚೂರ,ಆ.30- ನಗರದ ಕರ್ನಾಟಕ ವೆಲ್‌ಫೇರ್ ಟ್ರಸ್ಟ್ ಶಿಕ್ಷಣ ಸಂಸ್ಥೆಯಲ್ಲಿ ಪಿ ಬಿ ಎಸ್ ಕೆ. ಸಿ ಬಿ ಎಸ್ ಇ ಶಾಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಆಗಸ್ಟ್ 29 ರಂದು ಆಚರಣೆ ಮಾಡಲಾಯಿತು. ಮೇಜರ್ ಧ್ಯಾನ್ ಚಂದ್ ರವರ ಜನ್ಮ ದಿನದ ನಿಮಿತ್ಯ ರಾಷ್ಟ್ರೀಯ ಕ್ರೀಡಾದಿನ ಆಚರಿಸಲಾಯಿತು. ಶಾಲೆಯ ಪ್ರಾಂಶುಪಾಲರಾದ ಡಿ ಜಿ ನಳಿನಿ ಕಾರ್ಯಕ್ರ ಮವನ್ನು ಉದ್ದೇಶಿಸಿ ಮಾತನಾಡಿ ಮಕ್ಕಳಿಗೆ ಮೇಜರ್ ಧ್ಯಾನ್ ಚಂದ ರವರು ಒಬ್ಬ ಭಾರತೀಯ ಫೀಲ್ಡ್ ಹಾಕಿ ಆಟಗಾರರಾಗಿದ್ದರು ಇವರನ್ನುಅನೇಕರು ಇತಿಹಾಸದಲ್ಲಿ ಶ್ರೇಷ್ಠ ಫೀಲ್ಡ್ ಹಾಕಿ ಆಟಗಾರ ಎಂದು ಪರಿಗಣಿಸಿದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿ ಆಡಳಿತ ಅಧಿಕಾರಿಗಳಾದ ಕುಮಾರಿ ಸುಭಾಷಿಣಿ ವಿಸಲಾಕ್ಷಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆ ಯನ್ನು ಏಳನೆಯ ತರಗತಿ ಸಂಧ್ಯಾ ನಿರ್ವಹಿಸಿದರು. ಈ ಕಾರ್ಯಕ್ರಮ ಉದ್ದೇಶಿಸಿ ಏಳನೇ ತರಗತಿ ವಿದ್ಯಾರ್ಥಿನಿ ನಿರ್ಮಲ ಹಾಗೂ 5ನೇ ತರಗತಿ ವಿದ್ಯಾರ್ಥಿ ಆರುಷ್ ಸಿಂಗ್ ಧ್ಯಾನ್ ಚಂದ ರವರ ಸಾಧನೆ ಬಗ್ಗೆ ಮಾತಾಡಿದರು . ದೈಹಿಕ ನಿರ್ದೇಶಕರಾದ ಬಿ.ಎಸ್ ರೆಡ್ಡಿ ಮತ್ತು ವೀರಭದ್ರಯ್ಯ ಎಂ ಡಿ ವಲಿ , ಶಾಂತಕುಮಾರಿ ಜಗದೀಶ್ ಹಾಗೂ ಎಲ್ಲಾ ಶಿಕ್ಷಕ ವೃಂದದವರು ಪಾಲ್ಗೊಂಡಿದರು.
Comments
Post a Comment