ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ : ಗುರು ರಾಯರು ಭಕ್ತರನ್ನು ಸನ್ಮಾರ್ಗದಲ್ಲಿ ನಡೆಸುತ್ತಿದ್ದಾರೆ- ಶ್ರೀ ಸುಬುಧೇಂದ್ರ ತೀರ್ಥರು


ಮಂತ್ರಾಲಯದಲ್ಲಿ  ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ :             
ಗುರು ರಾಯರು ಭಕ್ತರನ್ನು ಸನ್ಮಾರ್ಗದಲ್ಲಿ ನಡೆಸುತ್ತಿದ್ದಾರೆ- ಶ್ರೀ ಸುಬುಧೇಂದ್ರ ತೀರ್ಥರು
,     ರಾಯಚೂರು,ಆ.31- ರಾಘವೇಂದ್ರ ಸ್ವಾಮಿಗಳಲ್ಲಿ ಇರುವ ಗುರುತ್ವ ಶಕ್ತಿಯಿಂದ  ಭಕ್ತರನ್ನು ಸನ್ಮಾರ್ಗದಲ್ಲಿ ಕರೆದೊಯುತ್ತಿದ್ದಾರೆ ಎಂದು ಮಠದ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು  ಹೇಳಿದರು.

ಅವರಿಂದು ಸಂಜೆ ಶ್ರೀ ಮಠದ ಆವರಣದಲ್ಲಿರುವ ಯೋಗೀಂದ್ರ ಸಭಾ ಮಂಟಪದಲ್ಲಿ  ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಪೂರ್ವಾರಾಧನೆ ಅಂಗವಾಗಿ ವಿವಿಧ ಕ್ಷೇತ್ರಗಳ ಸಾಧಕರಾದ ವಿದ್ವಾನ್ ರಾಮವಿಠಲಾಚಾರ್ಯ, ವಿದ್ವಾನ್ ಡಾ.ಗರಿಕಿಪಾಟಿ ನರಸಿಂಹರಾವ್, ಶ್ರೀ.ಎನ್.ಚಂದ್ರಶೇಖರನ್, ಶ್ರೀ ವಿಶ್ವನಾಥ್ ಕರಾಡ್ ಇವರಿಗೆ ಶ್ರೀಮಠದ ಪ್ರತಿಷ್ಠಿತ ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಿ ಆಶೀರ್ವಚನ ನೀಡಿದರು.   


                    ದೇವರು ಎಂದರೆ ತಿರುಪತಿ ತಿಮ್ಮಪ್ಪ ಗುರುಗಳು ಎಂದರೆ ಮಂಚಾಲಿ ರಾಗಪ್ಪ ಎನ್ನುವ ನಾನ್ನುಡಿಯಂತೆ ಯೋಗ ಶಕ್ತಿಯ ಮೂಲಕ ವೃಂದಾವನಸ್ಥರಾಗಿದ್ದವರು, ಭಕ್ತರ ಸಂಕಷ್ಟಗಳನ್ನು ಈಡೇರಿಸುವ ಮೂಲಕ ಕಲಿಯುಗದ ಕಲ್ಪವೃಕ್ಷ ಕಾಮದೇನು ಆಗಿ ಭಕ್ತರ ಹೃದಯದಲ್ಲಿ ನೆಲೆಸಿದ್ದಾರೆ ಎಂದರು.

 ರಾಘವೇಂದ್ರ ಸ್ವಾಮಿಗಳು ಜಾತ್ಯಾತೀತರಾಗಿ  ವಿಶ್ಚಮಾನ್ಯರಾಗಿದ್ದು,  ಗರುಸ್ಥಾನದಲ್ಲಿ ನಿಂತು ಭಕ್ತರನ್ನು ಸನ್ಮಾರ್ಗದಲ್ಲಿ ಕೊಂಡೊಯುತ್ತಿದ್ದು,  ಶ್ರೀ ಮಠದ ಪರಂಪರೆಯಂತೆ ವಿದ್ವಾಂಸರನ್ನು ಗುರುತಿಸಿ  ಗೌರವಿಸಲಾಗುತ್ತಿದ್ದುಇಂದು  ಶ್ರೀ  ರಾಘವೇಂದ್ರ ಅನುಗ್ರಹ ಪ್ರಶಸ್ತಿಗೆ ಭಾಜನರಾದವರ ಸೇವೆ ಅನನ್ಯವಾಗಿದೆ ಎಂದರು.


ನ್ಯಾಯಮೂರ್ತಿ ಶ್ರೀಷಾ ನಂದ ಮಾತನಾಡಿ, ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವ ಅತಿ ವಿಜೃಂಭ ಣೆಯಿಂದ ನಡೆಯುತ್ತಿದ್ದು, ಮುತ್ತು ರತ್ನಗಳು ಹೆಕ್ಕಿ ತಗೆದಹಾಗೆ ಇಂದು ಶ್ರೀ ರಾಘವೇಂದ್ರ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದರು.


ಶ್ರೀ ಮಠವು ಸಾಕಷ್ಟು ಅಭಿವೃದ್ಧಿ ಕಾಯರ್ಯಮಾಡುತ್ತಿದ್ದು,ಧರೆಯಲ್ಲಿ ಇಂದ್ರ ಲೋಕ ಸೃಷ್ಟಿಸಿದ್ದಾರೆ ಎಂದರು.


 ಗ್ರಂಥಗಳ ಬಿಡುಗಡೆ: ಇದೇ ವೇಳೆ  ಪರಿಮಳ ಗ್ರಂಥದ 7 ನೇ ಆವೃತ್ತಿ, ಕಲಿಯುಗ ಕಲ್ಪತರು 51 ಆವೃತ್ತಿ, ರಾಮಚರಿತ ಮಂಜರಿ, ಸೋತ್ತ್ರ ಸಂಪುಟ, ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆ, ಪರಿಮಾಳಾಚಾರ್ಯ ಪಟ್ಟಾಭಿಷೇಕ ಗ್ರಂಥಗಳನ್ನು  ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಆಂಧ್ರ ಪ್ರದೇಶದ ಘನತವೆತ್ತ ರಾಜ್ಯ ಪಾಲರಾದ ನ್ಯಾ.ಅಬ್ದುಲ್ ನಜೀರ್,  ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತರಾದ ಪಂಡಿತ ಕೇಸರಿ ಮಹಾ ಮಹಾಮಹೋಪೋದ್ಯಾಯರಾದ ರಾಜಾ ಎಸ್. ಗಿರಿ ಆಚಾರ್ಯ,ಶ್ರೀ ಮಠದ ಆಡಳಿತಾಧಿಕಾರಿ ಮಾಧವಶೆಟ್ಟಿ, ವ್ಯವಸ್ಥಾಪಕ ಎಸ್.ಕೆ ಶ್ರಿನಿವಾಸರಾವ್, ವಿದ್ವಾನ ವಾದಿರಾಜ ಆಚಾರ್ಯ, ರಾಜಾ ಗೌತಮ ಆಚಾರ್ಯ ಸೇರಿದಂತೆ ಶ್ರೀ ಮಠದ ಸಿಬ್ಬಂದಿಗಳು ಉಪಸ್ಥಿತರಿದ್ದರು

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ