ಶ್ರೀ ಶ್ರೀ 1008 ಶ್ರೀವಿದ್ಯಾಕಣ್ವ ವಿರಾಜತೀರ್ಥ ಶ್ರೀಪಾದಂಗಳವರ ದಂಡೋದಕ ಸ್ನಾನ, ಸೀಮೋಲ್ಲoಘನ

 





ಶ್ರೀ ಶ್ರೀ 1008 ಶ್ರೀವಿದ್ಯಾಕಣ್ವ ವಿರಾಜತೀರ್ಥ ಶ್ರೀಪಾದಂಗಳವರ ದಂಡೋದಕ ಸ್ನಾನ, ಸೀಮೋಲ್ಲoಘನ



ರಾಯಚೂರು,ಸೆ.30- ಚಾತುರ್ಮಾಸದ ಪರ್ಯಂತ ಶ್ರೀಮಠದಲ್ಲಿ ಹೋಮ, ಹವನ ಮತ್ತು ಶ್ರೀಭಾಗವತ ಪುರಾಣ ವಿಶೇಷವಾದ ಶಕ್ತಿ ನಿರ್ಮಾಣವಾಗಿದೆ, ಭಕ್ತರು ಶ್ರೀ ಮಠದ ಅಭಿವೃದ್ಧಿ ಮತ್ತು ದೇವಸ್ಥಾನ ನಿರ್ಮಾಣ ಕಾರ್ಯದಲ್ಲಿ ಸಹಕರಿಸಬೇಕೆಂದು ಶ್ರೀಮತ್ ಕಣ್ವ ಮಠ ಹುಣಸಿಹೊಳೆಯ, ಪೀಠಾಧಿಪತಿಗಳಾದ ಶ್ರೀ ಶ್ರೀ 1008 ಶ್ರೀ ವಿದ್ಯಾಕಣ್ವ ವಿರಾಜ ತೀರ್ಥ ಶ್ರೀಪಾದಂಗಳವರ ತಮ್ಮ ಚತುರ್ಥ ಚಾತುರ್ಮಾಸ್ಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಈ ಬಾರಿಯ ಚಾತುರ್ಮಾಸ್ಯದಲ್ಲಿ ಭಕ್ತರು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ಶ್ರೀವಿಠ್ಠಲಕೃಷ್ಣನ ದರ್ಶನ ಪಡೆದು ಚಾತುರ್ಮಾಸ್ಯವನ್ನು ವಿಜೃಂಭಣೆಯಿಂದ ಸಂಪನ್ನಗೊಳಿಸಿದರು, ವಿಶೇಷವಾಗಿ ಮಹಿಳೆಯರು ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದು ಗಣನೀಯ ಸೇವೆ ಸಲ್ಲಿಸಿದ್ದಾರೆ ಚಾತುರ್ಮಾಸ್ಯದ ಫಲ ಸಕಲ ಭಕ್ತರಿಗೂ ತಲುಪಲಿದೆ ಎಂದರು._

ಬೆಳಿಗ್ಗೆ ಶ್ರೀಮನ್ ಮಾಧವತೀರ್ಥರ ತಪೋಭೂಮಿ, ವೀರಘಟ್ಟದ ಕೃಷ್ಣಾ ನದಿ ತಟದಲ್ಲಿ ನೂರಾರು ಭಕ್ತರೊಂದಿಗೆ ದಂಡೋದಕ ಸ್ನಾನ, ಸಕಲ ವಿಧಿ ವಿಧಾನಗಳೊಂದಿಗೆ ತಮ್ಮ ಚಾತುರ್ಮಾಸ ಸಂಕಲ್ಪವನ್ನು ಸಂಪೂರ್ಣಗೊಳಿಸಿದರು, ನಂತರ ಶ್ರೀಮನ್ ಮಾಧವತೀರ್ಥರ ತಪೋಭೂಮಿ ವೀರಘಟ್ಟದಲ್ಲಿ ಮಂಗಳಾರತಿ ಮಾಡಿ ದರ್ಶನ ಪಡೆದು, ವೀರಘಟ್ಟದಿಂದ ಸಕಲ ವಾದ್ಯ, ತಾಳ ಮೇಳಗಳೊಂದಿಗೆ ಶುಭಯಾತ್ರೆ ಮೂಲಕ ಹುಣಸಿಹೊಳೆವರೆಗೂ ಆಗಮಿಸಿ ಗ್ರಾಮದೇವತೆಗೆ ಮಂಗಳಾರತಿ ಮಾಡಿದರು, ಭಕ್ತರು ಶ್ರೀಪಾದಂಗಳವರನ್ನು ಪೂರ್ಣಕುಂಭದ ಮೂಲಕ ಶ್ರಿಮಠಕ್ಕೆ ಸ್ವಾಗತಸಿದರು.


ಶ್ರೀಮಠದಲ್ಲಿ ಪಂಡಿತ್ ಶ್ರೀಸೂರ್ಯನಾರಾಯಣಚಾರ್ಯರಿಂದ ಶ್ರೀಭಾಗವತ ಪುರಾಣದ ಮಂಗಳ ಕಾರ್ಯಕ್ರಮ ನೆರವೇರಿತು ನಂತರ ಶ್ರೀಪಾದಂಗಳವರಿಂದ ಮುದ್ರಾಧಾರಣೆ ಭಕ್ತರಿಂದ ಪಾದಪೂಜೆ ಶ್ರೀಗಳಿಂದ ಸಂಸ್ಥಾನ ಪೂಜೆ ನಡೆಯಿತು, ವೇದಿಕೆ ಕಾರ್ಯಕ್ರಮವನ್ನು ಶ್ರೀ ಶ್ರೀ 1008 ಶ್ರೀ ವಿದ್ಯಾಕಣ್ವ ವಿರಾಜತೀರ್ಥ ಶ್ರೀಗಳು ದೀಪ ಪ್ರಜ್ವಲಿಸುವುದರೊಂದಿಗೆ ಉದ್ಘಾಟಿಸಿದರು. ಶ್ರೀಮತ್ ಕಣ್ವಮಠ  ಆಡಳಿತಾಭಿವೃದ್ಧಿ ಟ್ರಸ್ಟ್ ಕಾರ್ಯಾಧ್ಯಕ್ಷರಾದ ಶ್ರೀ ಮನೋಹರ ಮಾಡಿಗೇರಿ ಚತುರ್ಥ ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷರಾದ ಶ್ರೀ ವಿ.ಕಿಶನರಾವ್ ಕುಲಕರ್ಣಿ ವೇದಿಕೆ ಮೇಲೆ ಉಪಸ್ಥಿತರಿದ್ದರು.



ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀಮತ್ ಕಣ್ವಮಠ ಆಡಳಿತಾಭಿವೃದ್ಧಿ  ಟ್ರಸ್ಟ್ ಅಧ್ಯಕ್ಷರಾದ ಶ್ರೀ ಮನೋಹರ್ ಮಡಿಕೇರಿ, ಶುಕ್ಲಯಜುರ್ವೇದಿಗಳಿಗೆ ಭಾರತದಲ್ಲಿರುವ ಏಕೈಕ ಮಠ ಶ್ರೀಮತ್ ಕಣ್ವಮಠ, ಭಾರತದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಶುಕ್ಲಯಜುರ್ವೇದಿಗಳಿದ್ದಾರೆ, ತ್ರಿಮತಸ್ಥರನ್ನು ಒಗ್ಗೂಡಿಸುವ ಕೆಲಸ ಮಾಡಲಾಗುವುದು, ಶ್ರೀ ಮಠದ ಪೂರ್ವ 14 ಯತಿಗಳ ತಪಸ್ಸಿನ ಫಲದಿಂದ ಶ್ರೀಮಠ ವೈಭವೋಪೇತವಾಗಿದೆ. ಮುಂಬರುವ ದಿನಗಳಲ್ಲಿ ಶ್ರೀಮಠದಲ್ಲಿ ಮಕ್ಕಳಿಗಾಗಿ ಬೇಸಿಗೆ ಶಿಬಿರ ವೈದಿಕ ಮತ್ತು ಲೌಕಿಕ ಶಿಕ್ಷಣದ ಶಾಲೆ ನ್ಯಾಚುರೋಪತಿ ಕೇಂದ್ರ ಸಂಸ್ಕಾರ ಶಿಬಿರಗಳನ್ನು ಆಯೋಜಿಸಲಾಗುವುದು ಎಂದರು, ಚಾತುರ್ಮಾಸ್ಯವನ್ನು ವಿಜೃಂಭಣೆಯಿಂದ ನಡೆಸಿಕೊಟ್ಟ ಚತುರ್ಥ ಚಾತುರ್ಮಾಸ್ಯ ಸಮಿತಿ ಅಧ್ಯಕ್ಷರಾದ ಶ್ರೀ ವಿ.ಕಿಶನರಾವ್ ಕುಲಕರ್ಣಿ ಅವರಿಗೆ ಧನ್ಯವಾದ ತಿಳಿಸಿದರು._


_ಚತುರ್ಥ ಚಾತುರ್ಮಾಸ್ಯ ಸಮಿತಿ ಅಧ್ಯಕ್ಷರಾದ ಶ್ರೀ ವಿ.ಕಿಶನರಾವ್ ಕುಲಕರ್ಣಿ ಮಾತನಾಡಿ ಭಕ್ತರು ದಾನಿಗಳು ಯಥೇಚ್ಛವಾಗಿ ಧನ ಧಾನ್ಯ. ನೀಡಿದ್ದಾರೆ ಮತ್ತು ಸಹಕಾರದಿಂದ ಈ ಬಾರಿಯ ಚಾತುರ್ಮಾಸ್ಯ ಯಶಸ್ವಿಯಾಗಿ ಸಂಪನ್ನಗೊಳಿಸಲು ಸಾಧ್ಯವಾಯಿತು ಚಾತುರ್ಮಾಸ್ಯ ಸಮಿತಿಯ ಉಪಾಧ್ಯಕ್ಷರು ಸಂಚಾಲಕರು ಸದಸ್ಯರುಗಳಿಗೆ ಧನ್ಯವಾದಗಳು ತಿಳಿಸಿದರು. ಇದೇ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಸಾಧನೆಗೈದ ಸಾಧಕರಿಗೆ ಮತ್ತು ಶಾತೃ ಮಾಸದಲ್ಲಿ ವಿಶೇಷ ಸೇವಕ ಇದೆ ಸೇವಾ ಕರ್ತರಿಗೆ ಶ್ರೀಪಾದಂಗಳವರು ಸನ್ಮಾನಿಸಿದರು._


ವೈದಿಕರಾದ ಶ್ರೀ ವಿಷ್ಣು ಪ್ರಕಾಶ್ ಜೋ,ಶಿ ಶ್ರೀ ಜಗನ್ನಾಥಾಚಾರ್ಯ ಜೋಶಿ ಕೊಡೆಕಲ್, ಹನುಮೇಶಾಚಾರ್ಯ ಬುದ್ದಿನ್ನಿ, ಶಂಕರ್ ಭಟ್ ಜೋಶಿ ವೇದ ಘೋಷ ನಡೆಸಿಕೊಟ್ಟರು, ವಿ.ಕಿಶನ್ರಾವ್ ಕುಲಕರ್ಣಿ ಸ್ವಾಗತಿಸಿದರು, ಕುಮಾರಿ ಅಪೇಕ್ಷ ಸರ್ಕಿಲ್ ಪ್ರಾರ್ಥಿಸಿದರು, ಶ್ರೀರಂಗನಾಥಾಚಾರ್ಯ ಸಾಲಗುಂದ ಶ್ರೀಪಾದಂಗಳವರಿಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಣೆ ಮಾಡಿದರು._


_ಶ್ರೀ ವಿದ್ಯಾತಪೋನಿದಿ ತೀರ್ಥ ಶ್ರೀಪಾದಂಗಳವರ ಪೂರ್ವಾಶ್ರಮದ ಸುಪುತ್ರರಾದ ಶ್ರೀ ಔದುಂಬರಭಟ್ ಜೋಶಿ, ಶ್ರೀ ವಿದ್ಯಾ ಭಾಸ್ಕರ ತೀರ್ಥ ಶ್ರೀ ಪಾದಂಗಳವರ ಪೂರ್ವಾಶ್ರಮದ ಸುಪುತ್ರರಾದ ಶ್ರೀ ಮೋಹನ್ ದೇವರು ಶ್ರೀ ಹನುಮೇಶ್ ದೇವರು, ವೈದಿಕರಾದ ಪಾಪಣ್ಣಾಚಾರ್ಯ ಜೋಶಿ ರಂಗಂಪೇಟೆ, ಕೃಷ್ಣಾಚಾರ್ ಪುರೋಹಿತ್ ಗುರುಗುಂಟ, ಸತ್ಯನಾರಾಯಣರಾವ್ ಮುಜುಂದಾರ್, ರಾಘವೇಂದ್ರ ಕುಲಕರ್ಣಿ ಕೊಡೆಕಲ್,  ಕೃಷ್ಣಾಚಾರ್ಯ ತುರಡಗಿ, ರಾಘವೇಂದ್ರ ಲಕ್ಕಿಹಾಳ ರಾಘವೇಂದ್ರ ಗೆದ್ದಲುಮರಿ, ಭೀಮಸೇನರಾವ್ ವಿಜಯಪುರ, ಗೋವಿಂದರಾವ್ ಆಲಂಪಲ್ಲಿ, ಪ್ರಸನ್ನ ಆಲಂಪಲ್ಲಿ, ಸತ್ಯನಾರಾಯಣ ಕುಲಕರ್ಣಿ ಮನೋಹರರಾವ್ ದ್ಯಾಮನಾಳ, ಗುರುರಾಜರಾವ್ ಚಾಮನಾಳ, ಮುರಳಿಧರರಾವ್ ಗಂಗನಾಳ, ಪ್ರಾಣೇಶರಾವ್ ಕವಿತಾಳ, ಮಂಜುನಾಥ್ ಕುಲಕರ್ಣಿ, ಆನಂದತೀರ್ಥ ಜೋಶಿ, ರಮೇಶ್ ಕಾಮನಟಗಿ, ಅಶೋಕ್ ಬಾಬುರಾವ್, ಅಶೋಕ್ ನಾಯಕ್, ವಾಸು ದ್ಯಾಮನಾಳ, ಪ್ರಕಾಶರಾವ್ ಆಲಂಪಲ್ಲಿ  ವಿನುತ್  ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.




Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ