ಶ್ರೀ ಸುಬುಧೇಂದ್ರ ತೀರ್ಥರ 11ನೇ ಚಾರ್ತುಮಾಸ್ಯ ಸಮಾರೋಪ: ಸನಾತನ ಹಿಂದೂ ಧರ್ಮಕ್ಕೆ ಪರ್ಯಾಯವಾದ ಬೇರೆ ಯಾವುದೇ ಧರ್ಮವಿಲ್ಲ -ಶ್ರೀ ಸುಬುಧೇಂದ್ರ ತೀರ್ಥರು
ಶ್ರೀ ಸುಬುಧೇಂದ್ರ ತೀರ್ಥರ 11ನೇ ಚಾರ್ತುಮಾಸ್ಯ ಸಮಾರೋಪ: ಸನಾತನ ಹಿಂದೂ ಧರ್ಮಕ್ಕೆ ಪರ್ಯಾಯವಾದ ಬೇರೆ ಯಾವುದೇ ಧರ್ಮವಿಲ್ಲ - ಶ್ರೀ ಸುಬುಧೇಂದ್ರ ತೀರ್ಥರು
ರಾಯಚೂರು,ಸೆ.29- ಸನಾತನ ಹಿಂದೂ ಧರ್ಮಕ್ಕೆ ಪರ್ಯಾಯವಾದ ಬೇರೆ ಯಾವುದೇ ಧರ್ಮವಿಲ್ಲ ಅದರ ಬಗ್ಗೆ ಅಪ ಪ್ರಚಾರಕ್ಕೆ ಮಾನ್ಯತೆ ನೀಡಬಾರದು ಎಂದು ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿಗಳ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಹೇಳಿದರು.
ಅವರಿಂದು ಶ್ರೀ ಮಠದ ಆವರಣದಲ್ಲಿರುವ ಯೋಗೀಂದ್ರ ಸಭಾ ಮಂಟಪದಲ್ಲಿ 11ನೇ ಚಾರ್ತುಮಾಸ್ಯ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿ, ಇಂದು ಸನಾತನ ಹಿಂದೂ ಧರ್ಮದ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದು, ಅವರು ಹೇಳುತ್ತಿರುವ ದೋಷಗಳನ್ನು ಸರಿಪಡಿಸುವುದರೊಂದಿಗೆ ಧರ್ಮದ ಗಟ್ಟಿತನವನ್ನು ಸುಭದ್ರಪಡಿಸುವ ಅನಿವಾರ್ಯತೆ ಹಾಗೂ ಅವಶ್ಯಕತೆ ಇದೆ ಎಂದರು.
ಇಂದು ವಿಶ್ವದಲ್ಲೇ ಅಶಾಂತಿ ತಾಂಡವ ಮಾಡುತ್ತಿದ್ದು, ವಸುದೇವಕ ಕುಟುಂಬಕಂ ಅನ್ನುವ ಹಾಗೆ ವಿಶ್ವದಲ್ಲಿ ಶಾಂತಿ ನೆಲಸಬೇಕು ಧರ್ಮ ಗಟ್ಟಿಯಾಗಲು ಭದ್ರ ಬುನಾದಿ ಹಾಕಬೇಕಾಗಿದೆ ಎಂದರು.
ಮಾನವೀಯ ಮೌಲ್ಯಗಳು ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಸದೃಢ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದರು.
ರಾಘವೇಂದ್ರ ಸ್ವಾಮಿಗಳ ಮಠ ಎಲ್ಲ ಸಮುದಾಯಗಳ ಮಠವಾಗಿದ್ದು, ಅವುಗಳ ಅಭಿವೃದ್ಧಿಗೆ ಬದ್ದವಾಗಿದ್ದು, ವಿಪ್ರ ಸಮಾಜದ ಸಂಘಟನೆ ಜೋತೆಗೆ ತ್ರಿಮತಸ್ಥ ವಿದ್ಯಾರ್ಥಿಗಳಿಗೆ ಬೆಂಗಳೂರು, ರಾಯಚೂರು, ಬಳ್ಳಾರಿ, ಸೇರಿದಂತೆ ನೇರೆಯ ರಾಜ್ಯಗಳಲ್ಲಿ ವಿದ್ಯಾರ್ಥಿಗಳಿಗೆ ವಸತಿ ನಿಲಯ, ಆಸ್ಪತ್ರೆ ಸೇರಿದಂತೆ ಇತರೆ ಸೌಲಭ್ಯಗಳು ನೀಡಲು ಶ್ರೀ ಮಠ ಕಾರ್ಯಯೋಜನೆ ಹಾಕಿಕೊಂಡಿದೆ ಎಂದರು.
ಈ ಸಂದರ್ಭದಲ್ಲಿ ಶ್ರೀ ಮಠದ ಸಿಬ್ಬಂದಿಗಳು ಶ್ರೀಗಳಿಗೆ ಪುಷ್ಪಾರ್ಚನೆ ಮಾಡಿ ಸನ್ಮಾನಿಸಿದರು. ವಿವಿಧ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.
Comments
Post a Comment