ವಾಸವಿ ಪತ್ತಿನ ಸಹಕಾರ ಸಂಘ:23ನೇ ವಾರ್ಷಿಕ ಮಹಾಸಭೆ
ವಾಸವಿ ಪತ್ತಿನ ಸಹಕಾರ ಸಂಘ: 23ನೇ ವಾರ್ಷಿಕ ಮಹಾಸಭೆ ರಾಯಚೂರು,ಸೆ.25- ವಾಸವಿ ಪತ್ತಿನ ಸಹಕಾರ ಸಂಘದ 23ನೇ ವಾರ್ಷಿಕ ಮಹಾಸಭೆಯು ದಿನಾಂಕ ರವಿವಾರ ದಂದು ಮಾ ಆಶಪುರ ಕನ್ವೆನ್ಷನ್ ಹಾಲ್ ಇದರ ಸಭಾಂಗಣದಲ್ಲಿ ಸಭೆಯು ನಡೆಯಿತು. ಸಭೆಯು ನಿರ್ದೇಶಕ ಮಂಡಳಿಯಿಂದ ದೀಪ ಬೆಳಗುವುದರ ಮೂಲಕ ಅರಂಭಗೊಂಡಿತು.
ಸಂಘವು ಸನ್ 2022-23 ನೇ ಸಾಲಿಗೆ ₹ 7.22 ಕೋಟಿ ಠೇವಣಿ ಹೊಂದಿದ್ದು ₹ 7.67 ಕೋಟಿ ತನ್ನ ಸದಸ್ಯರಿಗೆ ಸಾಲವನ್ನು ನೀಡಿದೆ. ₹9.74 ಕೋಟಿ ದುಡಿಯುವ ಬಂಡವಾಳ ಹೊಂದಿರುತ್ತದೆ. ₹47.09 ಲಕ್ಷ ನಿವ್ವಳ ಲಾಭವನ್ನು ಮಾಡಿದ್ದು, ತನ್ನ ಸದಸ್ಯರಿಗೆ ಶೇಕಡಾ 18 ರಷ್ಟು ಲಾಭಾoಶ ಘೋಷಿಸಿದರು.
ಅಲ್ಲದೆ ಸಂಘವು ಜಾಗವನ್ನು ಖರೀದಿಸಿದ್ದು ಇದೇ ವರ್ಷದಲ್ಲಿ ಸ್ವಂತ ಹಾಗೂ ಸುಸಜ್ಜಿತ ಕಟ್ಟಡವನ್ನು ಹೊಂದುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಕ್ಕೆ ಸದಸ್ಯರು ಚಪ್ಪಾಳೆಯೊಂದಿಗೆ ಅನುಮೋದಿಸಿದರು.
ಸಂಘದ ಅಧ್ಯಕ್ಷರಾದ ಕೆ. ವಿ. ಮನೋಹರ ಇವರು 22-23 ನೇ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಸಹಕಾರ ಶಿಕ್ಷಣ ನಿಧಿ ಚೆಕ್ ನ್ನು ಸಹಕಾರ ಒಕ್ಕೂಟದ ಭೋದಕರಾದ ಶ್ರೀಮತಿ ಮಂಜುಳಾ ರವರಿಗೆ ನೀಡಿದರು.ಸಭೆಯಲ್ಲಿ ಉಪಾಧ್ಯಕ್ಷರಾದ ನೆಲ್ಲೂರು ಶ್ರೀನಿವಾಸ, ನಿರ್ದೇಶಕರುಗಳಾದ ಶೆಟ್ಟಿ ನಾಗರಾಜ, ಪಿ ಗುಂಡಯ್ಯ, ದೇವನಪಲ್ಲಿ ಶ್ರೀನಿವಾಸ, ಜಿ, ಆರ್, ಬಸಣ್ಣ, ತನ್ ಶೇಖರನ್, ಸುಭಾಷಬಾಬು ಸುಬೇದಾರ, ಶ್ರೀಮತಿ ವೀರಂ ಗೀತಾ, ಶ್ರೀಮತಿ ಎಮ್, ಆರ್. ಅಂಜಲಿ ಹಾಗೂ ಶ್ರೀಮತಿ ಎಮ್. ಸರೋಜ ಮತ್ತು ಲೆಕ್ಕಪರಿಶೋಧಕರಾದ ರಂಜಿತ್ ಕಟ್ಟಾ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ವ್ಯವಸ್ಥಾಪಕರಾದ ಶ್ರೀಮತಿ ಅನುಪಮಾ ರಸ್ತಾಪುರ ಸಭೆಯ ಕಾರ್ಯಸೂಚಿ ವಿಷಯಗಳನ್ನು ಪ್ರಸ್ತಾಪಿಸಿ ಸಭೆಯ ನಡುವಳಿಕೆಗಳನ್ನು ಬರೆದುಕೊಂಡರು. ಸಿಬ್ಬಂದಿಯವರು ತಮ್ನ ಕೆಲಸಗಳನ್ನು ಸುಗಮವಾಗಿ ನಡೆಸಿದರು. ಗರಿಷ್ಠ ಸಂಖ್ಯೆಯಲ್ಲಿ ಸದಸ್ಯರು ಸಭೆಗೆ ಆಗಮಿಸಿ ತಮ್ಮ ಸಲಹೆ -ಸೂಚನೆಗಳನ್ನು ನೀಡಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿ ಕೊಟ್ಟರು.
Comments
Post a Comment