ರಾಯಚೂರು ವಿಶ್ವವಿದ್ಯಾಲಯದಲ್ಲಿ ಸಾಹಿತ್ಯ ವೇದಿಕೆ ಕಾರ್ಯಕ್ರಮ: ಕನ್ನಡ ಕಾವ್ಯಮೀಮಾಂಸೆ ಅಂದರೆ ಬದುಕನ್ನು ಕಟ್ಟಿಕೊಳ್ಳುವುದು - ಪ್ರೊ.ಬಸವರಾಜ ಕೋಡಗಂಟಿ
ರಾಯಚೂರು ವಿಶ್ವವಿದ್ಯಾಲಯದಲ್ಲಿ ಸಾಹಿತ್ಯ ವೇದಿಕೆ ಕಾರ್ಯಕ್ರಮ:
ಕನ್ನಡ ಕಾವ್ಯ ಮೀಮಾಂಸೆ ಅಂದರೆ ಬದುಕನ್ನು ಕಟ್ಟಿಕೊಳ್ಳುವುದು - ಪ್ರೊ.ಬಸವರಾಜ ಕೋಡಗಂಟಿ
ರಾಯಚೂರು,ಸೆ.23-ಯಾವುದೇ ಒಂದು ವಿಷಯಕ್ಕೆ ಸಂಬoಧಿಸಿದ ಕಾವ್ಯಗಳು ತುಂಬಾ ಆಳವಾದ ರೀತಿಯಲ್ಲಿ ಬೆಳೆದಿರುವಂತ ಸಿದ್ಧಾಂತಗಳು ಅದರ ಹಗುರವಾದ ಕಾರಣಗಳನ್ನು ಇಟ್ಟುಕೊಂಡಿರುವುದಿಲ್ಲ ಎಂದು ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಪ್ರೊ.ಬಸವರಾಜ ಕೋಡಗಂಟಿ ಅವರು ಕನ್ನಡ ಕಾವ್ಯಮೀಮಾಂಸೆಗೆ ಪ್ರೊ.ಕೆ.ಕೃಷ್ಣಮೂರ್ತಿಯವರ ಕೊಡುಗೆ ಕುರಿತು ಉಪನ್ಯಾಸ ನೀಡಿದರು. ಪ್ರತಿ ಭಾಷೆಗೂ ಅದರದೇ ಆದ ಸಾಮಾಜಿಕ, ಮಾನಸಿಕ ರಚನೆ ಇರುವುದರಿಂದ ಅವರವರು ಆಡುವ ಭಾಷೆಯ ಭಾಷಿಕ ರಚನೆಯಾಗಿರುತ್ತದೆ. ಕನ್ನಡ ಕಾವ್ಯಮೀಮಾಂಸೆ ಅಂದರೆ ಬದುಕನ್ನು ಕಟ್ಟಿಕೊಳ್ಳುವುದು, ನಮ್ಮನ್ನು ಅರ್ಥಮಾಡಿಕೋಳ್ಳಲು ಕಾವ್ಯಮೀಮಾಂಸೆ ಓದಬೇಕು ಎಂದರು.
ಸಾಹಿತ್ಯ ಅಕಾದೆಮಿ ಹಾಗೂ ರಾಯಚೂರು ವಿಶ್ವವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಸಾಹಿತ್ಯ ವೇದಿಕೆ ಕಾರ್ಯಕ್ರಮವು ಶುಕ್ರವಾರ ಬೆಳಿಗ್ಗೆ ರಾಯಚೂರು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಉಜಿರೆ ಎಸ್‌ಡಿಎಂ ಕಾಲೇಜಿನ ಕನ್ನಡ ವಿಭಾಗದ ಸಹಪ್ರಾಧ್ಯಾಪಕರಾದ ಪ್ರೊ.ರಾಜಶೇಖರ ಹಳೆಮನೆ ಅವರು ಗಂಗಾಧರ ಚಿತ್ತಾಲರ ಕಾವ್ಯದ ವಿಭಿನ್ನ ನೆಲೆಗಳು ಕುರಿತು ಉಪನ್ಯಾಸದಲ್ಲಿ ಮಾತನಾಡಿದ ಅವರು, ಗಂಗಾಧರ ಚಿತ್ತಾಲರು ಕಾವ್ಯವನ್ನು ಕೇವಲ ಕಾವ್ಯವನ್ನಾಗಿ ಸ್ವೀಕಾರ ಮಾಡದೆ ಅದೊಂದು ಜೀವನಮಾನದ ಪ್ರಶ್ನೆಯಾಗಿ ತಮ್ಮ ಬದುಕಿನಲ್ಲಿ ಅಂರ್ತಗತವಾಗಿ ತೆಗೆದುಕೊಂಡು ಹೋದರು ಹೀಗಾಗಿ ಅವರ ಬದುಕು ಬೇರೆಯಲ್ಲ ಅವರ ಅಂತರಂಗ ಬೇರೆಯಲ್ಲ ಅವರ ಭಾವವಶ ಬೇರೆಯಲ್ಲ, ಸಂಯೋಗ ಮತ್ತು ಸಮಾಗಮ ಚಿತ್ತಾಲರ ಕಾವ್ಯದ ನಡೆಯಲ್ಲಿ ಇರುವಂತಹದು ಹಾಗಾಗಿ ನಮ್ಮ ಕನ್ನಡ ಕಾವ್ಯ ಪರಂಪರೆಯಲ್ಲಿ ಚಿತ್ತಾಲರ ಕನ್ನಡ ಭಾಷೆ, ಲಯ, ಚಿತ್ರಣ, ಜೀವತತ್ವ ಅದು ಅತ್ಯಂತ ಆಳವಾಗಿದೆ ರಾಜಕೀಯ, ಮಾನವೀಯ ಮೌಲ್ಯ, ಸಾಂಸ್ಕೃತಿಕ ಸ್ಥಿತಿಗತಿ, ಕವಿ ಯಾತನೆಗಳನ್ನು ಅನುಭವಿಸಿ ಬರೆಯುವುದಾಗಿದೆ. ತಮ್ಮ ಅಂತರಂಗದಲ್ಲಿ ಜಗತ್ತನ್ನು ನೋಡಿದರು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ ಮಾತನಾಡಿ, ಅಂತರಂಗದ ಬದುಕಿನಲ್ಲಿ ಖಾಸಗಿ ಕ್ಷಣಗಳಲ್ಲಿ ಸಾಹಿತ್ಯ ಕೃತಿಗಳ ಓದು, ಗ್ರಹಿಕೆ, ಅನುಭವವೆಲ್ಲ ಬಹಳ ಮುಖ್ಯ ಪಾತ್ರವಹಿಸುತ್ತವೆ. ಸಮಾಜದಲ್ಲಿ ಆಗುತ್ತಿರುವ ಅನ್ಯಾಯವನ್ನು ತಿಳಿಯಲು, ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಚಲಿತ ವಿದ್ಯಾಮಾನಗಳನ್ನು ತಿಳಿಯಲು ಸಾಹಿತ್ಯ ಓದಬೇಕು. ಸಾಹಿತ್ಯ ಕಾವ್ಯ ಓದುವ ರಸಿಕತೆಯಿಂದ ಬದುಕನ್ನು ಒಳ್ಳೆ ದೃಷ್ಟಿಕೋನದಿಂದ ನೋಡಿ ಬದುಕಲು ಸಾಧ್ಯ. ಸಾಹಿತ್ಯ ಓದುವ ರುಚಿಯಿದ್ದಾಗ ಮಾತ್ರ ಪ್ರತಿಯೊಬ್ಬರಲ್ಲೂ ಕಾಲ್ಪನಿಕ, ಯೋಚನಾ ಶಕ್ತಿ ಹೆಚ್ಚುತ್ತದೆ ಎಂದು ಅವರು ಹೇಳಿದರು.
ಗಂಗಾವತಿಯ ಕನ್ನಡ ಉಪನ್ಯಾಸಕರಾದ ಗುಂಡೂರು ಪವನಕುಮಾರ ಕಾರ್ಯಕ್ರಮ ಉದ್ದೇಶಿಸಿ ಪ್ರತಿಕ್ರಿಯೆ ನೀಡಿದರು. ನವದೆಹಲಿ ಸಾಹಿತ್ಯ ಅಕಾದೆಮಿ, ಕನ್ನಡ ಸಲಹಾ ಸಮಿತಿ ಸದಸ್ಯ ಡಾ.ಚಿದಾನಂದ ಸಾಲಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ರಾಯಚೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ವಿಶ್ವನಾಥ ಎಂ, ಕುಲಸಚಿವ ಮೌಲ್ಯಮಾಪನ ಪ್ರೊ.ಯರಿಸ್ವಾಮಿ.ಎಂ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಲಾನಿಕಾಯದ ಡೀನ್ ಪ್ರೊ.ಪಿ.ಭಾಸ್ಕರ್, ವಿವಿಧ ವಿಭಾಗಗಳ ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಸ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಪನ್ನಗವೇಣಿ ಪ್ರಾರ್ಥಿಸಿದರು. ಅತಿಥಿ ಉಪನ್ಯಾಸಕರಾದ ಕನ್ನಡ ವಿಭಾಗದ ಡಾ.ಶಿವಲೀಲಾ ಬಸನಗೌಡ ನಿರೂಪಿಸಿದರು, ಪತ್ರಿಕೋದ್ಯಮ ವಿಭಾಗದ ಡಾ.ಗೀತಮ್ಮ ಹೂಗುಚ್ಛ ವಿತರಣೆ ಕಾರ್ಯಕ್ರಮ ನೆರವೇರಿಸಿದರೆ, ಕಾರ್ಯಕ್ರಮ ಸಂಯೋಜಕರಾದ ಇಂಗ್ಲಿಷ್ ವಿಭಾಗದ ಅನಿಲ್ ಅಪ್ರಾಳ್ ವಂದಿಸಿದರು.
.
Comments
Post a Comment