ಶೋಷಣೆಗಳ ಆಯಾಮ ಅರಿತು ಹೋರಾಟ ಮಾಡಿ- ಕರಿಗೂಳಿ ಸುಂಕೇಶ್ವರ

 


ಶೋಷಣೆಗಳ ಆಯಾಮ ಅರಿತು ಹೋರಾಟ ಮಾಡಿ- ಕರಿಗೂಳಿ ಸುಂಕೇಶ್ವರ


ರಾಯಚೂರು,ಸೆ.24- ದಲಿತರ ಮೇಲೆ ನಿರಂತರವಾಗಿ ನಡೆಯುತ್ತಿರುವ ಶೋಷಣೆಗಳನ್ನು ತಡೆಗಟ್ಟಬೇಕಾದರೆ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೋರಾಟದ ಅಸ್ತ್ರ ಮತ್ತು ಕ್ರಾಂತಿಕಾರಿ ಚಿಂತನೆಗಳ ಅರಿತುಕೊಂಡು, ಶೋಷಣೆಗಳ ಆಯಾಮಗಳನ್ನು ಸಮರ್ಥವಾಗಿ ಎದುರಿಸಬೇಕಾಗಿದೆ ಎಂದು ದಲಿತ ಸಾಹಿತ್ಯ ಪರಿಷತ್ತಿನ ರಾಯಚೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರಿಗೂಳಿ ಸುಂಕೇಶ್ವರ ಅವರು ಅಭಿಮತ ವ್ಯಕ್ತಪಡಿಸಿದರು.


ನಗರದ ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯಾಲಯದಲ್ಲಿ ಭಾನುವಾರ ದಲಿತ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ, 'ಪೂನಾ ಒಪ್ಪಂದದ' ವಿಶೇಷ ಉಪನ್ಯಾಸ ಕಾರ್ಯಕ್ರಮ ಹಾಗೂ ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಹಾಗೂ ವಿವಿಧ ತಾಲೂಕು ಘಟಕಗಳ ರಚನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.


ಪ್ರಸ್ತುತ ದಿನಮಾನಗಳಲ್ಲಿ ದಲಿತ ಸಂಘಟನೆಗಳು ಸರಿಯಾದ ಮಾರ್ಗದಲ್ಲಿ ಸಾಗುತ್ತಿಲ್ಲ. ಕೇವಲ ಹುದ್ದೆಗಳ ಆಸೆಗಾಗಿ ಸಂಘಟನೆಗಳನ್ನು ಹುಟ್ಟುಹಾಕುತ್ತಿರುವುದು ಬೇಸರದ ಸಂಗತಿಯಾಗಿದೆ. ಆದರೆ ಎಲ್ಲಾ ದಲಿತ ಸಂಘಟನೆಗಳು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯಗಳನ್ನು ಈಡೇರಿಸುವ ಪ್ರಯತ್ನ ಮಾಡದೆ ಹೋದರೆ, ಮುಂದಿನ ದಿನಗಳಲ್ಲಿ ದಲಿತರ ಅಸ್ಮಿತೆಗೆ ಧಕ್ಕೆ ಬರುವಂತಹ ಸಂಭವವಿದೆ ಎಂದು ಆತಂಕ ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ತಾಯರಾಜ್ ಮರ್ಚೆಟ್ಹಾಳ್, ಕೋರೆನಲ್, ಡಾ.ಹುಸೇನಪ್ಪ ಅಮರಾಪೂರ, ಅರುಣ್ ಕುಮಾರ್, ರಾಮಣ್ಣ, ಈರಪ್ಪ ಕೊಂಬಿನ, ಯಂಕಪ್ಪ ಪಿರಂಗಿ, ಶರಣಪ್ಪ ಬಲ್ಲಟಗಿ, ವೀರೇಶ್ ಕಣ್ಣಾರಿ, ಭೀಮಣ್ಣ ಉಡುಮಗಲ್, ವೆಂಕಟೇಶ್ ಚಂದ್ರಬಂಡಾ, ಸಿದ್ದಪ್ಪ, ಶಿವರಾಜ್, ಸುರೇಶ್, ಮೂರ್ತಿ, ಮಾರೆಪ್ಪ, ಶಾಂತಪ್ಪ ಪಿತಗಲ್, ತಿಮ್ಮಪ್ಪ, ಡಾ.ಬಸವರಾಜ್, ಆರ್. ಕೆ.ಈರಣ್ಣ, ಪಾರ್ಥಾ ಸಿರವಾರ, ಮೌನೇಶ ಶಾಖಾಪುರ, ನರಸಿಂಹ ಸೇರಿದಂತೆ ಇತರರು ಉಪಸ್ಥಿತರಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್