ಸರ್ಕಾರದಿಂದ ಹೊಸ ಮದ್ಯದಂಗಡಿ ಪರವಾನಿಗೆ ವಿರೋಧಿಸಿ ಗಾಂಧಿ ಜಯಂತಿಯಂದು ಜನಪ್ರತಿನಿಧಿಗಳಿಗೆ ಪ್ರತಿಮೆ ಬಳಿ ನಿರ್ಬಂಧ- ಮೋಕ್ಷಮ್ಮ.

 


ಸರ್ಕಾರದಿಂದ ಹೊಸ ಮದ್ಯದಂಗಡಿ ಪರವಾನಿಗೆ  ವಿರೋಧಿಸಿ          ಗಾಂಧಿ ಜಯಂತಿಯಂದು ಜನಪ್ರತಿನಿಧಿಗಳಿಗೆ ಪ್ರತಿಮೆ ಬಳಿ ನಿರ್ಬಂಧ- ಮೋಕ್ಷಮ್ಮ.                 ರಾಯಚೂರು,ಸೆ.27- ಕಾಂಗ್ರೆಸ್ ಸರ್ಕಾರ ಹೊಸ ಮಧ್ಯದಂಗಡಿಗಳಾಗೆ ಪರವಾನಿಗೆ ನೀಡುತ್ತಿರುವುದನ್ನು ವಿರೋಧಿಸಿ ಗಾಂಧಿ ಜಯಂತಿಯಂದು ಆಡಳಿತ ಪಕ್ಷದ ಜನಪ್ರತಿನಿಧಿಗಳು ಗಾಂಧಿ ಪ್ರತಿಮೆ ಬಳಿ ಬರದಂತೆ ನಿರ್ಬಂಧಿಸುತ್ತೇವೆಂದು ಮದ್ಯ ನಿಷೇಧ ಆಂದೋಲನದ ಸಂಚಾಲಕಿ ಮೋಕ್ಷಮ್ಮ ಹೇಳಿದರು.                                          ಅವರಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿ  ರಾಜ್ಯ ಸರ್ಕಾರ ಐದು ಗ್ಯಾರಂಟಿ ನೀಡಿ ಜನಪರವಾದ ಆಡಳಿತ ನೀಡುತ್ತಿದೆ ಎಂದು ನಿರೀಕ್ಷಿಸಿದ್ದೆವು ಆದರೆ ಸರ್ಕಾರ ರಾಜ್ಯದಲ್ಲಿ ಕುಡುಕರ ಹಾವಳಿ ಹೆಚ್ಚಿಸಲು ಹೊರಟಿದೆ ಅಬಕಾರಿ ಸಚಿವರು ಹೊಸದಾಗಿ ಸಾವಿರ ಮದ್ಯದಂಗಡಿಗಳಿಗೆ ಪರವಾನಿಗೆ ನೀಡುತ್ತೇವೆಂದಿ ದ್ದಾರೆ ಇದು ಅಕ್ಷಮ್ಯ ಮಹಿಳೆಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಕುಡುಕ ಗಂಡಂದಿರಿಂದ ನಿತ್ಯ ನರಕ ಅನುಭವಿಸುತ್ತಿದ್ದಾರೆ ಎಂದರು.                                               ಹಳ್ಳಿಗಳಲ್ಲಿ ಗೂಡಂಗಡಿಗಳಲ್ಲಿ ಮಧ್ಯೆ ಸಿಗುತ್ತಿದೆ ಅಕ್ರಮ ಮದ್ಯ ಮಾರಾಟ ನಿರಾತಂಕವಾಗಿ ಸಾಗಿದೆ ಈ ಹಿನ್ನೆಲೆಯಲ್ಲಿ ಅ.1 ಮಧ್ಯಾಹ್ನ ದಿಂದ ಆಹೋರಾತ್ರಿ ಧರಣಿ ನಡೆಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ವಿದ್ಯಾ ಪಾಟೀಲ್, ಡಾ. ಶಾರದಾ ಹುಲಿ ನಾಯಕ, ಎಂ.ಆರ್.ಭೇರಿ, ಸುಶೀಲಮ್ಮ, ರೇಣುಕಾ ಇದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ