ಕರ್ನಾಟಕ ಬಂದ್ ಗೆ ಬೆಂಬಲಿಸಿ ಕರವೇಯಿಂದ ಕಂದುಗಡ್ಡೆ ಮಾರೆಮ್ಮದೇವಿಗೆ ಪೂಜೆ ಸಲ್ಲಿಸಿ ವಿನೂತನ ಪ್ರತಿಭಟನೆ
ಕರ್ನಾಟಕ ಬಂದ್ ಗೆ ಬೆಂಬಲಿಸಿ ಕರವೇಯಿಂದ ಕಂದುಗಡ್ಡೆ ಮಾರೆಮ್ಮದೇವಿಗೆ ಪೂಜೆ ಸಲ್ಲಿಸಿ ವಿನೂತನ ಪ್ರತಿಭಟನೆ ರಾಯಚೂರು,ಸೆ.29- ಕಾವೇರಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ "ಕರ್ನಾಟಕ ಬಂದ್" ಗೆ ಬೆಂಬಲಿಸಿ ರಾಯಚೂರಿನ ಗ್ರಾಮ ದೇವತೆಯಾದ ಕಂದುಗಡ್ಡೆ ಮಾರೆಮ್ಮದೇವಿಗೆ ಪೂಜೆ ಸಲ್ಲಿಸುವ ಮೂಲಕ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಾಣ) ವಿನೂತನ ಪ್ರತಿಭಟನೆ ನಡೆಸಿತು.
ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ತಮಿಳುನಾಡಿನ ಪರವಾಗಿ ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತು ಸರ್ವೋಚ್ಚ ನ್ಯಾಯಾಲಯವು, ಸೆಪ್ಟೆಂಬರ್ ೨೮ ರಿಂದ ಅಕ್ಟೋಬರ್ ೧೫ ರವರೆಗೆ ಪ್ರತಿನಿತ್ಯ ಮೂರು ಸಾವಿರಕ್ಯೂಸೆಕ್ ನೀರನ್ನು ಹರಿಸಲು ನಿರ್ದೇಶಿಸಿರುವದರಿಂದ, ಕರ್ನಾಟಕ ನೇಗಿಲ ಯೋಗಿಗೆ ಮರಣ ಶಾಸನ ಬರೆದಹಾಗೆ ಆಗಿದೆ. ಕಾವೇರಿ ನದಿ ನೀರು ನಿಯಂತ್ರಣ ಸಮಿತಿಗೆ ರಾಯಚೂರಿನ ಗ್ರಾಮದೇವತೆಯಾದ ಕಂದುಗಡ್ಡೆ ಮಾರೆಮ್ಮದೇವಿಯು ಒಳ್ಳೆಯ ಬುದ್ಧಿಕೊಟ್ಟು ಕಾವೇರಿ ಉಳಿಸಿ, ಕನ್ನಡಿಗರನ್ನು ಉಳಿಸಿ, ರೈತರನ್ನ ಉಳಿಸಿ ಎಂದು ತಾಯಿಗೆಪೂಜೆ ಸಲ್ಲಿಸಿ ಕರ್ನಾಟಕ ಜನರ ಹಿತ ಕಾಪಾಡಲೆಂದು ಬೇಡಿಕೊಳ್ಳುತ್ತಾ ಕರ್ನಾಟಕ ಬಂದ್‌ನ್ನು ಬೆಂಬಲಿಸಿ ವಿನೂತನವಾಗಿ ಪ್ರತಿಭಟಿಸಲಾಯಿತು.
ಮಳೆಯ ಅಭಾವದಿಂದ ಕಾವೇರಿ ನದಿಯ ನಾಲ್ಕು ಜಲಾಶಯಗಳಲ್ಲಿ, ನೀರಿನ ಒಳಹರಿವು ಕಡಿಮೆಯಾಗಿದ್ದು,೩೦೦೦ ಕ್ಯೂಸೆಕ್ ನೀರನ್ನು ಹರಿಸಿದರೆ, ನಮ್ಮ ರಾಜ್ಯದ ರೈತರಿಗೆ ಮತ್ತು ಕುಡಿಯುವ ನೀರಿಗೆ ಬಹುದೊಡ್ಡ ಗಂಡಾಂತರವಾಗಲಿದೆ. ಆದ್ದರಿಂದ ಕಾವೇರಿ ನದಿ ನೀರು ನಿಯಂತ್ರಣ ಸಮಿತಿಗೆ ಕರ್ನಾಟಕ ಮತ್ತು ತಮಿಳುನಾಡಿನ
ತಜ್ಞರನ್ನು ಹೊರತುಪಡಿಸಿ ಬೇರೆ ರಾಜ್ಯದ ನೀರಾವರಿ ತಜ್ಞರನ್ನು ನೇಮಿಸಬೇಕು.
ಈ ವಿಷಯದಲ್ಲಿ ಪ್ರಧಾನಮಂತ್ರಿಯವರು ಮಧ್ಯಸ್ಥಿಕೆ ವಹಿಸಬೇಕು. ಈಗಿರುವ ಕಾವೇರಿ ನೀರು ಹಂಚಿಕೆ
ಪ್ರಾಧಿಕಾರ ಆದೇಶ ರದ್ದು ಮಾಡಿದರೆ, ಕನ್ನಡಿಗರ ತಲೆಯ ಮೇಲೆ ಚಪ್ಪಡಿ ಎಳೆದಿದ್ದನ್ನು ತಡೆದಂತಾಗುತ್ತದೆ.
ಪ್ರಧಾನಿಯವರು ವಿಶೇಷ ತಜ್ಞರನ್ನು ನೇಮಿಸಿ ಕಾವೇರಿ ಜಲಾಶಯಗಳ ವಸ್ತು ಸ್ಥಿತಿ ಅರಿತು ಕರ್ನಾಟಕದ ಜನತೆಗೆ
ನ್ಯಾಯ ಒದಗಿಸಿ ಕೊಡಬೇಕೆಂದು ಇಂದಿನ "ಕರ್ನಾಟಕ ಬಂದ್" ವೇಳೆ ಆಕ್ರೋಶ ದಿಂದ ವಿನಂತಿಸಿಕೊಂಡರು . ಬಂದ್ ಗೆ ಕರ್ನಾಟಕ ರಣಧೀರಪಡೆ, ಜಿಲ್ಲಾಧ್ಯಕ್ಷರಾದ ರಮೇಶ,ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ವೆಂಕಟಗಿರಿ ಸಾಗರ ಬೆಂಬಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಾಣ)ರಾಜ್ಯ ಸಂಘಟನಾ ಕಾರ್ಯದರ್ಶಿ ಮತ್ತು ರಾಯಚೂರು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಅಶೋಕಕುಮಾರ ಸಿ.ಕೆ. ಜೈನ್,ಮಲ್ಲಿಕಾರ್ಜುನ, ಸಂಗಮೇಶ, ಕಿಶನ್‌ರಾವ್, ಆಸೀಫ್,ಅಜೀಜ್, ನಾಗರಾಜ, ಸುದರ್ಶನ್, ವೀರನಗೌಡ,ಮಲ್ಲಿಕಾರ್ಜುನತಾತ, ನರಸಿಂಹಲು, ಸಂಜಯ್ ವೈಷ್ಣವ ಬನದಯ್ಯ ಸ್ವಾಮಿ, ಮೌನೇಶ್, ದಿನೇಶ ಚೌಧರಿ, ಆಕಾಶ ,ಭೀಮೇಶ, ನರಸಿಂಹಲು, ವೀರೇಶ ಏಗನೂರು ಇತರರು ಇದ್ದರು.
Comments
Post a Comment