ದಾಸ ಸಾಹಿತ್ಯವನ್ನು ಪ್ರಸನ್ನಗೊಳಿಸಿದ ದಾಸ ಶ್ರೇಷ್ಠ ಶ್ರೀ ಪ್ರಸನ್ನ ವೆಂಕಟದಾಸರು- ಮುರಳಿಧರ ಕುಲಕರ್ಣಿ
ದಾಸ ಸಾಹಿತ್ಯವನ್ನು ಪ್ರಸನ್ನಗೊಳಿಸಿದ ದಾಸ ಶ್ರೇಷ್ಠ ಶ್ರೀ ಪ್ರಸನ್ನ ವೆಂಕಟದಾಸರು- ಮುರಳಿಧರ ಕುಲಕರ್ಣಿ
ರಾಯಚೂರು,ಸೆ.27-ಹರಿದಾಸ ಪರಂಪರೆಯಲ್ಲಿ ವಿಜಯದಾಸರು ಗೋಪಾಲ ದಾಸರು, ಹಳೆವನ ಕಟ್ಟಿ ಗಿರಿಯಮ್ಮ, ಶ್ರೀ ಜಗನ್ನಾಥದಾಸರ ಸಮಕಾಲಿನ ಹರಿದಾಸರಾಗಿರುವ ಶ್ರೀ ಪ್ರಸನ್ನ ವೆಂಕಟದಾಸರು ದಾಸ ಸಾಹಿತ್ಯವನ್ನು ಹರಿನಾಮ ಸಂಕೀರ್ತನೆಗಳ ಮುಖಾಂತರಪ್ರಸನ್ನ ಗೊಳಿಸಿದ ಹರಿದಾಸ ಶ್ರೇಷ್ಠರು ಎಂದು ಶ್ರುತಿ ಸಾಹಿತ್ಯ ಮೇಳದ ಅದ್ಯಕ್ಷ ಮುರಳಿಧರ ಕುಲಕರ್ಣಿ ಅವರು ಹೇಳಿದರು.
ಅವರು ಇಂದು ಸಂಜೆ ಜವಾಹರ ನಗರದ ಬಯಲು ಆಂಜನೇಯ ದೇವಸ್ಥಾನದಲ್ಲಿ ಶ್ರೀ ಪ್ರಸನ್ನ ವೆಂಕಟದಾಸರ ಆರಾಧನೆಯ ಪ್ರಯುಕ್ತ ಹಮ್ಮಿಕೊಂಡ ಜ್ಞಾನ ಯಜ್ಞ ಕಾರ್ಯಕ್ರಮದಲ್ಲಿ ಮಾತನಾಡಿದರು. ಅವರು ಮುಂದುವರೆದು ಮಾತನಾಡುತ್ತಾ , ಶ್ರೀಪ್ರಸನ್ನ ವೆಂಕಟ ದಾಸರ ಜೀವನ ಚರಿತ್ರೆಯು ಅತಿ ವಿಸ್ಮಯದಿಂದ ಕೂಡಿದೆ. ಹೇಗೆಂದರೆ ಸಣ್ಣ ವಯಸ್ಸಿನಲ್ಲೇ ತಂದೆ ತಾಯಿಗಳನ್ನು ಕಳೆದುಕೊಂಡು ಅಣ್ಣನ ಮನೆಯಲ್ಲಿ ಆಶ್ರಯ ವಿದ್ದಾಗ ಅಣ್ಣನ ಹೆಂಡತಿ ಅತ್ತಿಗೆಯು ಅವಮಾನಕರ ರೀತಿಯಾಗಿ ಇವರನ್ನು ನಡೆಸಿಕೊಳ್ಳುತ್ತಿದ್ದಳು,
ಹಗಲು ರಾತ್ರಿ ಎನ್ನದೆ ದುಡಿಸಿಕೊಂಡು ಸರಿಯಾಗಿ ಊಟವನ್ನು ಸಹ ಕೊಡುತ್ತಿರಲಿಲ್ಲ.
ಒಂದು ದಿನ ದನಗಳನ್ನು ಕಾಯಿಸಿಕೊಂಡು ಉರಿಬಿಸಿಲಿನಲ್ಲಿ ಮನೆಗೆ ಬಂದಾಗ ಮಜ್ಜಿಗೆ ಕಡಿಯುತ್ತಿದ್ದ ಅತ್ತಿಗೆ ಯನ್ನುನೋಡಿ ಸ್ವಲ್ಪ ಮಜ್ಜಿಗೆಯನ್ನು ಕೊಡಿ ಎಂದು ಅಂಗಲಾಚಿದಾಗ ಅತ್ತಿಗೆಯ ಚುಚ್ಚು ಮಾತುಗಳನ್ನು ಆಡಿ ಅವಮಾನಗೊಳಿಸಿದಳು. ಅಂದೆ ಅವರ ಮನಸ್ಸು ಪರಿವರ್ತನೆ ಗೊಂಡು ಮನೆ ಬಿಟ್ಟು ಹೋಗಿ ತಿರುಪತಿಯಲ್ಲಿ ಶ್ರೀ ವೆಂಕಟೇಶನ ಸೇವೆಯನ್ನು ಮಾಡಿ ಶ್ರೀನಿವಾಸನ ದಯದಿಂದ ಅಪರೋಕ್ಷ ಜ್ಞಾನಿಗಳಾಗಿ ಶ್ರೀ ಪ್ರಸನ್ನ ವೆಂಕಟ ದಾಸರಾದರು.
ಇವರು ಹರಿದಾಸ ಸಾಹಿತ್ಯಕ್ಕೆ ಅದ್ವಿತೀಯವಾದ ಕೊಡುಗೆಗಳನ್ನು ನೀಡಿ,ಸಾವಿರಾರು ಸಂಕೀರ್ತನೆಗಳನ್ನು ರಚಿಸಿದ್ದಾರೆ ನಮಗೆ ಲಭ್ಯವಾಗಿರುವುದು ಕೇವಲ 604 ನೂರಾರು ಉಗಭೋಗಗಳು, ಸುಳಾದಿಗಳು, ಕೋಲಾಟದ ಪದಗಳು, ಸಂಪ್ರದಾಯದ ಪದಗಳನು ರಚಿಸಿದ್ದಾರೆ, ಇವುಗಳ ಜೊತೆಗೆ ದಶಮಸ್ಕಂದ ಭಾಗವತ ಪೂರ್ವಾರ್ಧದಲ್ಲಿ ಬರುವ 67 ಕೃತಿಗಳನ್ನು ಕನ್ನಡಕ್ಕೆ ಕನ್ನಡಿಯಂತೆ ಅನುವಾದಿಸಿದ್ದಾರೆ.
ನಾರದರು ಕೊರವಂಜಿ ವೇಷ ಹಾಕಿದ ಚರಿತ್ರೆ, ಬೇಡ ಮುಕ್ತಾ ವಲಿ, ಲಕ್ಷ್ಮಿ ದೇವಿ, ಪ್ರಾಣದೇವರು, ಮೇಲಿನ ಕೃತಿಗಳು, ಸತ್ಯಭಾಮ ವಿಲಾಸ,ನಾರಾಯಣ ಪುಂಜರ, ಗಂಗಾ ವರ್ಣನೆ, ಸೃಷ್ಟಿ ಪ್ರಕರಣ, ಶ್ರೀ ಕೃಷ್ಣ ಚರಿತೆ ಮುಂತಾದ ಅನೇಕ ಇವರು ರಚಿಸಿದ ಈ ಎಲ್ಲ ಕೃತಿಗಳು ಕನ್ನಡ ಸಾಹಿತ್ಯವನ್ನು ಹಾಗೂ ದಾಸ ಸಾಹಿತ್ಯವನ್ನು ಶ್ರೀಮಂತ ಗೊಳಿಸಿವೆ ಎಂದು ಎಂದು ಹೇಳಿದರು.
ಕಾರ್ಯಕ್ರಮವನ್ನು ದೀಪ ಬೆಳಗಿಸಿಸುವ ಮೂಲಕ ಜವಾಹರ ನಗರ ಬಯಲು ಆಂಜನೇಯ ದೇವಸ್ಥಾನದ ಅರ್ಚಕರಾದ ಶ್ರೀ ಶ್ರೀಧರಾಚಾರ್ಯ ಮುಂಗ್ಲಿ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸುರೇಶ್ ಕಲ್ಲೂರ್, ವೇಣುಗೋಪಾಲ್ ವರಪ್ಪ, ರಾಕೇಶ್ ಕುಲಕರ್ಣಿ ದಾಸವಾಣಿಯನ್ನು ನಡೆಸಿಕೊಟ್ಟರು.
ಹರಿದಾಸ ಬೌದ್ಧಿಕ ಮಂಟಪದ ಮುಖ್ಯಸ್ಥರಾದಶ್ರೀ ಸುರೇಶ್ ಕುಲಕರ್ಣಿ, ಶ್ರೀ ಸುರೇಶ್ ಕಲ್ಲೂರ್,ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು. ಕಾರ್ಯಕ್ರಮದಲ್ಲಿ ಕೊಪ್ಪರೇಶ್ ದೇಸಾಯಿ, ಮೃತ್ಯುಂಜಯ ಕೊಲ್ಲೂರ್, ಪ್ರಶಾಂತ್ ಜೋಶಿ ಅವರು ಉಪಸ್ಥಿತರಿದ್ದರು.
Comments
Post a Comment