ನವ ಬೃಂದಾವನ ಗಡ್ಡೆ: ಉಚ್ಛ ನ್ಯಾಯಾಲಯದಿಂದ ರಾಯರ ಮಠದ ಅರ್ಜಿ ಪುರಸ್ಕೃತ.

 


ನವ ಬೃಂದಾವನ ಗಡ್ಡೆ: ಉಚ್ಛ ನ್ಯಾಯಾಲಯದಿಂದ  ರಾಯರ ಮಠದ ಅರ್ಜಿ ಪುರಸ್ಕೃತ.            ರಾಯಚೂರು,ಸೆ.23-  ನವಬೃಂದಾವನ ಗಡ್ಡೆಯಲ್ಲಿ ಶ್ರೀ ಜಯತೀರ್ಥರ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲು ರಾಯರ ಮಠಕ್ಕೆ ಅವಕಾಶವನ್ನು ನೀಡಿ ಉಚ್ಛ ನ್ಯಾಯಾಲಯದ ದ್ವಿ ಸದಸ್ಯ ಪೀಠ ಆದೇಶಿಸಿದೆ.   

                                              ಕೆಲ ದಿನಗಳ ಹಿಂದೆ ಉತ್ತರಾದಿ ಮಠ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ್ದ ಉಚ್ಛ ನ್ಯಾಯಾಲಯ ಏಕ ಸದಸ್ಯ ಪೀಠವು ರಾಯರ ಮಠವು ನವ ಬೃಂದಾವನ ಗಡ್ಡೆಯಲ್ಲಿ ಶ್ರೀ ಜಯತೀರ್ಥರ ಪೂಜಾ ವಿಧಿ ವಿಧಾನ ಮುಂತಾದವುಗಳನ್ನು ಮಾಡದಂತೆ ಆದೇಶಿಸಿತ್ತು ತರುವಾಯ ರಾಯರ ಮಠವು ಈ ಆದೇಶ ಪ್ರಶ್ನಿಸಿ ಉಚ್ಛ ನ್ಯಾಯಾಲಯದ ದ್ವಿ ಸದಸ್ಯ ಪೀಠದ ಮುಂದೆ ಅರ್ಜಿ ಸಲ್ಲಿಸಿದ್ದನ್ನು ಪುರಸ್ಕರಿಸಿ ರಾಯರ ಮಠಕ್ಕೆ ಪೂಜಾ ವಿಧಿ ವಿಧಾನಕ್ಕೆ ಅವಕಾಶ ನೀಡಿದೆ ಎಂದು ಶ್ರೀ ಮಠ ತಿಳಿಸಿದೆ.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ