ಲೋಕಸಭಾ ಚುನಾವಣೆ ವೇಳೆಗೆ ಗ್ಯಾರಂಟಿಗಳ ವಾರಂಟಿ ಮುಗಿಯುತ್ತದೆ- ಯತ್ನಾಳ್.
ಲೋಕಸಭಾ ಚುನಾವಣೆ ವೇಳೆಗೆ ಗ್ಯಾರಂಟಿಗಳ ವಾರಂಟಿ ಮುಗಿಯುತ್ತದೆ- ಯತ್ನಾಳ್. ರಾಯಚೂರು,ಸೆ.23- ಲೋಕಸಭಾ ಚುನಾವಣೆ ವೇಳೆಗೆ ಕಾಂಗ್ರೆಸ್ ನೀಡಿರುವ ಐದು ಗ್ಯಾರಂಟಿಗಳ ವಾರಂಟಿ ಮುಗಿಯುತ್ತದೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯವಾಡಿದರು. ಅವರಿಂದು ನಗರದ ವೀರ ಸಾವರ್ಕರ್ ಯೂಥ್ ಅಸೋಸಿಯೇಷನ್ ವತಿಯಿಂದ ಪ್ರತಿಷ್ಟಾಪಿಸಿದ್ದ ಗಣೇಶ ಮೂರ್ತಿಯ ವಿಸರ್ಜನೆ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸ ನೀಡಿದರು. ಕಾಂಗ್ರೆಸ್ ಪಕ್ಷ ಹುಸಿ ಭರವಸೆಗಳಾದ ಐದು ಗ್ಯಾರಂಟಿಗಳಿಂದ ಗೆದ್ದಿದೆ ಮುಂಬರುವ ಲೋಕಸಭಾ ಚುನಾವಣೆಗೆ ಅವುಗಳ ವಾರಂಟಿ ಅವಧಿ ಮುಗಿಯುತ್ತದೆ ಎಂದು ವ್ಯಂಗ್ಯವಾಡಿದರು. ಅಪ್ರತಿಮ ದೇಶ ಭಕ್ತರಾದ ವೀರ ಸಾವರ್ಕರ್ ಹೆಸರಿನ ಯುವಕ ಮಂಡಳಿ ವಿಜೃಂಭಣೆಯಿಂದ 17 ವರ್ಷದಿಂದ ಗಣೇಶ ಕೊಡಿಸುತ್ತಿದೆ ವೀರ ಸಾವರ್ಕರ್ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನು ಜೈಲಿನಲ್ಲಿ ಕಳೆದರು ಕಾಲಾ ಪಾನಿ ಘನಘೋರ ಶಿಕ್ಷೆ ಅನುಭವಿಸಿದರು ಅವರ ಕಾಲಿನ ಧೊಳಿಗೂ ಸಮಾನವಾಗಿದೆ ಕೆಲ ಕಾಂಗ್ರೆಸ್ ವ್ಯಕ್ತಿಗಳು ಅವರು ಬಗ್ಗೆ ಲಘುವಾಗಿ ಮಾತನಾಡುತ್ತಾರೆ ಅದು ಅಕ್ಷಮ್ಯವೆಂದರು.
ದೇಶಕ್ಕೆ ಸ್ವಾತಂತ್ರ್ಯ ದೊರೆತ ಹೊಸದರಲ್ಲಿ ಸುಭಾಶಚಂದ್ರಬೋಸ್, ಸರ್ದಾರ್ ವಲ್ಲಭಭಾಯ್ ಪಟೇಲರು ಈ ದೇಶದ ಪ್ರಧಾನಿಯಾಗಬೇಕಿತ್ತು ಬದಲಾಗಿ ಯಾರೋ ಆದರು ಎಂದು ವಾಗ್ದಾಳಿ ನಡೆಸಿದರು. ನಮ್ಮ ದೇಶವು ಸನಾತನ ಸಂಸ್ಕೃತಿಯ ದೇಶ ಅದರ ವಿರುಧ್ಧವೆ ಕೆಲವರು ಮಾತನಾಡುತ್ತಾರೆ ತಮಿಳು ನಾಡಿನಲ್ಲಿ ಮುಂದಿನ ದಿನಗಳಲ್ಲಿ ಅಣ್ಣಾ ಮಲೈ ನೇತೃತ್ವದಲ್ಲಿ ಪಕ್ಷ ಬೇರೂರಲಿದೆ ಎಂದರು. ಸನಾತನ ದ್ವೇಷಿಗಳನ್ನು ಮಠಾಧೀಶರು ದೂರವಿಡಬೇಕು ಸನಾತನ ಉಳಿದರೆ ಕಾವಿ ಉಳಿಯುತ್ತದೆ ಎಂದರು. ನಮ್ಮ ದೇಶ ಹಿಂದುಗಳ ದೇಶ ಇಲ್ಲಿ ಗಣೇಶ ಚತುರ್ಥಿಗೆ ಅನುಮತಿ ಪಡೆಯಬೇಕಿದೆ ನಾವೇಕೆ ನಮ್ಮ ನೆಲದಲ್ಲಿ ಗಣೇಶನನ್ನು ಕೂಡಿಸಲು ಅನುಮತಿ ಪಡೆಯಬೇಕು ಯಾವುದೆ ಪರವಾನಿಗೆ ಬೇಕಿಲ್ಲವೆಂದರು. ಕಾಂಗ್ರೆಸ್ ಸರ್ಕಾರ ಇಲ್ಲ ಸಲ್ಲದ ಷರತ್ತು ವಿಧಿಸಿದೆ ನಾವು ಅದಕ್ಕೆ ಜಗ್ಗುವುದಿಲ್ಲ ವೆಂದ ಅವರು ಡಿಜೆ ಬಳಕೆ ಮಾಡುವುದು ತಪ್ಪೆಂದರೆ ಉಳಿದೆಡೆ ಇರುವ ಧ್ವನಿ ವರ್ಧಕವನ್ನು ಬಂದ್ ಮಾಡಿ ಎಂದರು.
ಹೈದರಾಬಾದ್ ನಲ್ಲಿ ಓವೈಸಿ ಸಹೋದರ ಹೇಳುತ್ತಾನೆ ದೇಶದಲ್ಲಿ 15 ನಿಮಿಷ ಪೊಲೀಸರನ್ನು ತೆರವು ಮಾಡಿ ನಮ್ಮ ಶಕ್ತಿ ಏನೆಂದು ತೋರಿಸುತ್ತೇನೆ ಎನ್ನುತ್ತಾನೆ ಆತನಿಗೆ ಗೊತ್ತಿಲ ಕಾಣುತ್ತೆ ಈ ದೇಶದ ಮೇಲೆ ಹತ್ತಾರು ಬಾರಿ ದಂಡೆತ್ತಿ ಬಂದ ಘೋರಿ ,ಗಜನಿಗಳಿಗೆ ಏನು ಮಾಡಲು ಆಗಿಲ್ಲ ಓವೈಸಿ ಸಹೋದರ ಯಾವ ಲೆಕ್ಕ ವೆಂದರು. ಮೋದಿಯವರು ಗಣೇಶ ಚತುರ್ಥಿ ದಿನ ನೂತನ ಸಂಸತ್ತು ಪ್ರವೇಶಿಸಿದರು ಗಣೇಶನ ಮೂಲಕವೇ ಭಾರತ ಸ್ವಾತಂತ್ರ್ಯ ಗೊಂಡಿದೆ ಎಂದರು. ಅಂಬೇಡ್ಕರ್ ರವರು ಸನಾತನ ಪರವಾಗಿದ್ದರು ಅವರು ದೇಶದ ಉಳಿವು ಸನಾತನ ಮತ್ತು ಸಮಾನತೆಯಿಂದ ಸಂವಿಧಾನ ಉಳಿಯುತ್ತದೆ ಎಂದಿದ್ದರು ಅವರು ತ್ರಿಕಾಲ ಜ್ಞಾನಿಗಳಿದ್ದಂತೆ ಎಂದರು. ಓಲೈಕೆ ರಾಜಕಾರಣ ಕಾಂಗ್ರೆಸ್ ಮಾಡುತ್ತಿದೆ ಬೇರೆ ಕೆಲಸಕ್ಕೆ ಸಾವಿರಾರು ಕೋಟಿ ರೂಪಾಯಿ ವಿನಿಯೋಗಿಸುವ ಸರ್ಕಾರ ಈ ಬಾರಿ ಸರಳ ದಸರಾ ಮಾಡಲು ಯೋಚಿಸಿದೆ, ಹಂಪಿ ಉತ್ಸವವು ಸಹ ಮಾಡುತ್ತಿಲ್ಲ ಇದು ನ್ಯಾಯವೆ ಎಂದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಮೆ ಕಮಲ ಅರಳುತ್ತದೆ ಮೋದಿ ಆಡಳಿತದಿಂದ ಭಯೋತ್ಪಾದನೆ ಮುಕ್ತ ಭಾರತ ಸಾಧ್ಯವೆಂದ ಅವರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡದಂತೆ ಪೊಲೀಸರು ಯಾವುದೆ ಮುಲಾಜಿಗೆ ಒಳಗಾಗಿದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದರು. ಈ ಸಂದರ್ಭದಲ್ಲಿ ಸೋಮವಾರ ಪೇಟೆ ಹೀರೆಮಠದ ಶ್ರೀ ಗಳಾದ ಶ್ರೀ ಅಭಿನವ ರಾಚೋಟಿವೀರ ಶಿವಾಚಾರ್ಯ ಶ್ರೀ ಗಳು, ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಶಂಕ್ರಪ್ಪ, ನಗರಸಭೆ ಮಾಜಿ ಅಧ್ಯಕ್ಷೆ ಲಲಿತಾ ಕಡಗೋಲ, ವೈ.ಗೋಪಾಲರೆಡ್ಡಿ, ಶಶಿರಾಜ್ ಮಸ್ಕಿ ಇನ್ನಿತರರು ಇದ್ದರು.
Comments
Post a Comment