ಸಾರ್ವಜನಿಕ ಗಣೇಶೋತ್ಸವ ವಿಸರ್ಜನೆ: ಪ್ರತಿಷ್ಠಾಪಿತ ಸ್ಥಳದಿಂದ ಒಂದೊಂದೆ ಗಣೇಶ ಆಗಮನ.
ಸಾರ್ವಜನಿಕ ಗಣೇಶೋತ್ಸವ ವಿಸರ್ಜನೆ: ಪ್ರತಿಷ್ಠಾಪಿತ ಸ್ಥಳದಿಂದ ಒಂದೊಂದೆ ಗಣೇಶ ಆಗಮನ ರಾಯಚೂರು,ಸೆ.27- ನಗರದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಸಾರ್ವಜನಿಕ ಗಣೇಶೋತ್ಸವ ಒಂಬತ್ತನೆ ದಿನದ ವಿಸರ್ಜನಾ ಮೆರವಣಿಗೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ನಗರದಲ್ಲಿ ಪ್ರತಿಷ್ಟಾಪಿಸಲ್ಪಟ್ಟ ಗಣೇಶ ಮೂರ್ತಿಗಳು ಪ್ರತಿಷ್ಠಾಪಿಸಿದ್ದ ಸ್ಥಳದಿಂದ ಒಂದೊಂದಾಗಿ ಆಗಮಿಸುತ್ತಿದ್ದು ವಿಸರ್ಜನಾ ಮೆರವಣಿಗೆಗೆ ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ ತೀನ್ ಕಂದೀಲ್ , ಮೌಳೇಶ್ವರ ವೃತ್ತದಲ್ಲಿ ಗಜಾನನ ಸಮೀತಿಗಳಿಂದ ಗಣೇಶ ಮಂಡಳಿಗಳಿಗೆ ಗೌರವ ಸಮರ್ಪಣೆ ನಡೆಯಲಿದೆ. ತೀನ್ ಕಂದೀಲ್ ಬಳಿ ಮಾಜಿ ಶಾಸಕ ಸೈಯದ್ ಯಾಸಿನ್ ಆಗಮಿಸಿ ಗಣೇಶ ವಿಸರ್ಜನಾ ಮೆರವಣಿಗೆಗೆ ಸಾಕ್ಷಿಯಾದರು.
ಡಿಜೆ ಸಂಗೀತದಲ್ಲಿ ಕಣ್ಣು ಕೋರೈಸುವ ವಿದ್ಯುತ್ ಬೆಳಕಿನಲ್ಲಿ ಯುವಕರು ಹೆಜ್ಜೆ ಹಾಕಿದರು ವಿಸರ್ಜನಾ ಮೆರವಣಿಗೆ ಪ್ರಮುಖ ರಸ್ತೆಗಳ ಮುಖಾಂತರ ಸಾಗಿ ಮಾವಿನ ಕೆರೆ ಬಳಿ ಖಾಸಬಾವಿಯಲ್ಲಿ ಬೆಳಿಗ್ಗೆ ಗಣೇಶ ಮೂರ್ತಿಗಳು ವಿಸರ್ಜನೆಗೊಳ್ಳಲಿವೆ. ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಬಂದೋ ಬಸ್ತ್ ಕಲ್ಪಿಸಲಾಗಿದೆ.
Comments
Post a Comment