ವೀರ್ ಸಾವರ್ಕರ್ ಗಣೇಶ ಭವ್ಯ ಮೆರವಣಿಗೆ: ಕಣ್ಣು ಕೋರೈಸುವ ಕಿವಿಗಡಚಿಕ್ಕುವ ಸಂಗೀತ, ಕುಣಿತದಲ್ಲಿ ಮೈಮರೆತ ಯುವಕರು.

 


ವೀರ್ ಸಾವರ್ಕರ್ ಗಣೇಶ ಭವ್ಯ ಮೆರವಣಿಗೆ:                              ಕಣ್ಣು ಕೋರೈಸುವ ಕಿವಿಗಡಚಿಕ್ಕುವ ಸಂಗೀತ, ಕುಣಿತದಲ್ಲಿ ಮೈಮರೆತ ಯುವಕರು.                              ರಾಯಚೂರು,ಸೆ.23- ವೀರ್ ಸಾವರ್ಕರ್ ಗಣೇಶ ವಿಸರ್ಜನೆ ಜಿಲ್ಲೆಯಲ್ಲಿಯೆ ಭವ್ಯತೆಗೆ ನಾಂದಿ ಹಾಡುತ್ತಿದೆ.                                                     ಈ ವರ್ಷವು 17 ನೇ ವರ್ಷದ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಕಣ್ಣು ಕೋರೈಸುವ ದೀಪ, ಕಿವಿಗಡಚಿಕ್ಕುವ ಸಂಗೀತದಲ್ಲಿ ಯುವಕರು ಕುಣಿದು ಕುಪ್ಪಳಿಸಿದರು.   

       ಸಹಸ್ರಾರು ಯುವಕರು ಮೆರವಣಿಗೆ ವೀಕ್ಷಿಸಲು ತಂಡೋಪ ತಂಡವಾಗಿ ಆಗಮಿಸಿದ್ದರು. ಮಹಿಳೆಯರು, ಮಕ್ಕಳು ಸಹ ಮೆರವಣಿಗೆಗೆ ಸಾಕ್ಷಿಯಾದರು.                         ದಶ ದಿಕ್ಕುಗಳಿಗೆ ಹರಡುತ್ತಿದ ಕಣ್ಣು ಕೋರೈಸುವ ಬೆಳಕು, ಸಂಚಲನ ಮೂಡಿಸುವ ಸಂಗೀತದಲ್ಲಿ ಯುವಕರು ಮೈರೆತರು.                             ನಗರದ ಪ್ರಮುಖ ರಸ್ತೆಗಳ ಮೂಲಕ ಹಾದು ಹೋಗುವ
 
ಮೆರವಣಿಗೆ ಮಾವಿನ ಕೆರೆ ಬಳಿಯ ಖಾಸ ಬಾವಿಯಲ್ಲಿ ವಿಸರ್ಜನೆಯಾಗುತ್ತದೆ. ಭಾರಿ ಪೊಲೀ‌ಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ