ದಲಿತರಿಗೆ ಪ್ರತ್ಯೇಕ ಚುನಾಯಿತ ಹಕ್ಕು ನೀಡದೆ ವಂಚನೆ- ಕೋರೆನಲ್

 


ದಲಿತರಿಗೆ ಪ್ರತ್ಯೇಕ ಚುನಾಯಿತ ಹಕ್ಕು ನೀಡದೆ  ವಂಚನೆ- ಕೋರೆನಲ್


ರಾಯಚೂರು,ಸೆ.24- ದಲಿತರಿಗೆ ಪ್ರತ್ಯೇಕ ಚುನಾಯಿತ ಹಕ್ಕಿಗಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಾಡಿದ ಹೋರಾಟಕ್ಕೆ ಪ್ರತಿಫಲ ದೊರಕದಂತೆ, ಮಹಾತ್ಮಗಾಂಧಿ ಅವರು ಪೂನಾದ ಯರವಾಡ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಕುಳಿತುಕೊಳ್ಳುವ ಮೂಲಕ ದಲಿತರ ಸ್ವಾತಂತ್ರ್ಯ ರಾಜಕೀಯ ಹಕ್ಕನ್ನು ಕಸಿದುಕೊಂಡರು ಎಂದು ದಲಿತ ಸಾಹಿತ್ಯ ಪರಿಷತಿನ ಕೋರೆನಲ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.


ನಗರದ ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯಾಲಯದಲ್ಲಿ ಭಾನುವಾರ ದಲಿತ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ, 'ಪೂನಾ ಒಪ್ಪಂದ'ದ ಉಪನ್ಯಾಸ ಕಾರ್ಯಕ್ರಮ ಮತ್ತು ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಹಾಗೂ ತಾಲೂಕು ಘಟಕಗಳ ರಚನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.


ದೇಶದಲ್ಲಿ ಏಕಸ್ವಾಮ್ಯದ ಪಾರುಪತ್ಯವನ್ನು ಜಾರಿಗೊಳಿಸುವ ಹುನ್ನಾರ ನಡೆದಿದ್ದು, ಇದರಿಂದ ಬಹುಸಂಖ್ಯಾತರ ಅಸ್ಮಿತೆ ಮತ್ತು ಅಸ್ತಿತ್ವವೇ ನಶಿಸಿಹೋಗುತ್ತದೆ. ಭಾರತ ವಿವಿಧತೆಯನ್ನು ಹೊಂದಿದ ದೇಶವಾಗಿದೆ ಅದನ್ನು ಮುಂದಿನ ತಲೆಮಾರುಗಳಿಗೆ ಉಳಿಸಿ-ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.


ಭಾರತದಲ್ಲಿ  ವೈಚಾರಿಕ   ಸಂಘರ್ಷ ನಡೆದುಕೊಂಡು ಬರುತ್ತಿದ್ದು, ನಿರ್ದಿಷ್ಟವಾದದಿಂದ ದೇಶದ ಬಹುತ್ವಕ್ಕೆ ಅಪಾಯವಿದೆ ಎಂದು ಕಳವಳ ವ್ಯಕ್ತಪಡಿಸಿದರು.


ಸಭೆಯಲ್ಲಿ ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರಿಗೂಳಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ತಾಯರಾಜ್ ಮರ್ಚೆಟ್ಹಾಳ್, ಡಾ.ಹುಸೇನಪ್ಪ ಅಮರಾಪೂರ, ಅರಣು ಕುಮಾರ್, ರಾಮಣ್ಣ, ಈರಪ್ಪ ಕೊಂಬಿನ, ಯಂಕಪ್ಪ ಪಿರಂಗಿ, ಶರಣಪ್ಪ ಬಲ್ಲಟಗಿ,ವೀರೇಶ್ ಕಣ್ಣಾರಿ,ಭೀಮಣ್ಣ ಉಡುಮಗಲ್, ವೆಂಕಟೇಶ್ ಚಂದ್ರಬಂಡಾ, ಸಿದ್ದಪ್ಪ, ಶಿವರಾಜ್ ಸುರೇಶ್, ಮೂರ್ತಿ, ಮಾರಪ್ಪ, ಶಾಂತಪ್ಪ ಪಿತಗಲ್, ತಿಮ್ಮಪ್ಪ, ಡಾ.ಬಸವರಾಜ್, ಆರ್ ಕೆ.ಈರಣ್ಣ, ಪಾರ್ಥಾ ಸಿರವಾರ, ಮೌನೇಶ ಶಾಖಾಪುರ, ನರಶಿಂಹ ಸೇರಿದಂತೆ ಇತರರು ಉಪಸ್ಥಿತರಿದ್ದರು.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ