ದಾಸ ಸಾಹಿತ್ಯ ಅಧ್ಯಯನ ಪೀಠ ಸ್ಥಾಪಿನೆ ಮನವಿ ಸಲ್ಲಿಕೆ : ನಾಳೆ ಪೂರ್ವಭಾವಿ ಸಭೆ

 


ದಾಸ ಸಾಹಿತ್ಯ ಅಧ್ಯಯನ ಪೀಠ ಸ್ಥಾಪಿನೆ ಮನವಿ ಸಲ್ಲಿಕೆ :             ನಾಳೆ ಪೂರ್ವಭಾವಿ ಸಭೆ                               ರಾಯಚೂರು,ಸೆ.30- ವಿಶ್ವವಿದ್ಯಾಲಯ ರಾಯಚೂರಿನಲ್ಲಿ ದಾಸ ಸಾಹಿತ್ಯ ಅಧ್ಯಯನ ಪೀಠವನ್ನು ಸ್ಥಾಪಿಸುವಂತೆ ಕುರಿತಾಗಿ ಮನವಿ ಪತ್ರ ಸಲ್ಲಿಸುವ ಬಗ್ಗೆ ಚರ್ಚಿಸಲುಪೂರ್ವಭಾವಿ ಸಭೆ ಕರೆಯಲಾಗಿದೆ.

 ರಾಯಚೂರು ಹರಿದಾಸರ ತೊಟ್ಟಿಲು,ಈ ಒಂದು ಪುಣ್ಯ ಕ್ಷೇತ್ರದಲ್ಲಿ ನೂರಾರು ಹರಿದಾಸರು, ಕಾಲಲ್ಲಿ ಗೆಜ್ಜೆಯನ್ನು ಕಟ್ಟಿ, ಕೈಯಲ್ಲಿ ತಂಬೂರಿಯನ್ನು ಹಿಡಿದು, ಮಧುಕರ ವೃತ್ತಿಯನ್ನು ಮಾಡುತ್ತ, ಸಾವಿರಾರು ಮೌಲ್ಯಯುಕ್ತ ಹರಿನಾಮ ಸಂಕೀರ್ತನೆಗಳನ್ನು ಹಾಡಿ ಈ ಪ್ರದೇಶವನ್ನು ಪಾವನಗೊಳಿಸಿದ್ದಾರೆ.

    ಪ್ರಾತಸ್ಮರಣೀಯರ ಹರಿದಾಸರ ಅಧ್ಯಯನಕ್ಕಾಗಿ ರಾಯಚೂರು ವಿಶ್ವವಿದ್ಯಾಲಯ ರಾಯಚೂರಿನಲ್ಲಿ,*ಹರಿದಾಸ ಅಧ್ಯಯನ ಪೀಠ ಸ್ಥಾಪಿಸುವಂತೆ* ಹರಿದಾಸ ಬಂಧುಗಳ ಒತ್ತಾಸೆಯಾಗಿದೆ,

 ಈ ನಿಟ್ಟಿನಲ್ಲಿ ದಿನಾಂಕ 01-09-23 ಸಂಜೆ 6 ಗಂಟೆಗೆ ಕರ್ನಾಟಕ ಸಂಘ ಸಭಾಂಗಣ ರಾಯಚೂರಿನಲ್ಲಿ ಡಾ.ಜಯ ಲಕ್ಷ್ಮಿ ಮಂಗಳಮೂರ್ತಿ ದಾಸ ಸಾಹಿತ್ಯ ವಿದ್ವಾಂಸರು, ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಇವರ ಅಧ್ಯಕ್ಷತೆಯಲ್ಲಿ ಮನವಿ ಪತ್ರ ಸಲ್ಲಿಸುವ ಕುರಿತಾಗಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ.

  ದಯವಿಟ್ಟು ಈ ಸಭೆಗೆ ಎಲ್ಲಾ ಹರಿದಾಸ ಬಂಧುಗಳು ,ಸಂಘ ಸಂಸ್ಥೆಗಳ ಪದಾಧಿಕಾರಿಗಳು,ಭಜನಾ ಮಂಡಳಿಗಳ ಮಾತೆಯರು, ಸಮಾನಮನಸ್ಕ ಬಂಧುಗಳು ಇದರಲ್ಲಿ ಭಾಗವಹಿಸುವಂತೆ    ಶ್ರುತಿ ಸಾಹಿತ್ಯ ಮೇಳ ರಾಯಚೂರು ,ಅಖಿಲ ಕರ್ನಾಟಕ ದಾಸೋತಸವ ಸಮಿತಿ ರಾಯಚೂರು, ಹರಿದಾಸ ಬೌದ್ಧಿಕ ಮಂಟಪ ರಾಯಚೂರು, ದಾಸ ಸಾಹಿತ್ಯ ಅಧ್ಯಯನ ಕೇಂದ್ರ ರಾಯಚೂರು ಮನವಿ ಮಾಡಿದೆ.



Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ