ನಾಳೆ ನಗರದಲ್ಲಿ ಮಾದಿಗ ದಂಡೋರಾ ರಾಜ್ಯ ಕಾರ್ಯಕಾರಣಿ ಸಭೆ: ಒಳ ಮೀಸಲಾತಿ ವರ್ಗಿಕರಣ ಜಾರಿ ಮಾಡಲೇಬೇಕು- ನರಸಪ್ಪ.
ನಾಳೆ ನಗರದಲ್ಲಿ ಮಾದಿಗ ದಂಡೋರಾ ರಾಜ್ಯ ಕಾರ್ಯಕಾರಣಿ ಸಭೆ: ಒಳ ಮೀಸಲಾತಿ ವರ್ಗಿಕರಣ ಜಾರಿ ಮಾಡಲೇಬೇಕು- ನರಸಪ್ಪ. ರಾಯಚೂರು,ಸೆ.27- ಮಾದಿಗ ದಂಡೋರಾ ರಾಜ್ಯ ಸಮಿತಿ ಕಾರ್ಯಕಾರಿಣಿ ಸಭೆ ನಾಳೆ ನಗರದಲ್ಲಿ ನಡೆಯಲಿದೆ ಎಂದು ಮಾದಿಗ ದಂಡೋರಾ ರಾಜ್ಯಾಧ್ಯಕ್ಷ ಬಿ.ನರಸಪ್ಪ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅಂದು ಬೆಳಿಗ್ಗೆ 11ಗಂಟೆಗೆ ಸ್ಟೇಷನ್ ರಸ್ತೆಯ ಸಂತೋಷಿ ಸರೋವರ್ ಸಭಾಂಗಣದಲ್ಲಿ ನಮ್ಮ ರಾಷ್ಟ್ರೀಯ ನಾಯಕರಾದ ಮಂದಕೃಷ್ಣ ಮಾದಿಗ ಉಪಸ್ಥಿತಿಯಲ್ಲಿ ಸಭೆ ನಡೆಯಲಿದ್ದು ಸಭೆಯಲ್ಲಿ ರಾಜ್ಯಾಧ್ಯಕ್ಷ ನರಸಪ್ಪ ದಂಡೋರ ,ಜಿಲ್ಲಾಧ್ಯಕ್ಷ ಮಾನಪ್ಪ ಮೇಸ್ತ್ರೀ ಸೇರಿದಂತೆ ವಿವಿಧ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಆಗಮಿಸಲಿದ್ದಾರೆಂದು.
ಈ ಹಿಂದಿನ ರಾಜ್ಯ ಬಿಜೆಪಿ ಸರ್ಕಾರ ಒಳ ಮೀಸಲಾತಿ ವರ್ಗಿಕರಣ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸಿದ್ದೇವೆ ಆದರೆ ಕೇಂದ್ರ ಸರ್ಕಾರ ಒಳ ಮೀಸಲಾತಿ ವರ್ಗಿಕರಣ ಜಾರಿ ಮಾಡದೆ ಮೀನಾಮೇಷ ಮಾಡುತ್ತಿದೆ ಲೋಕಸಭಾ ಅಧಿವೇಶನದಲ್ಲಿ ಜಾರಿ ಮಾಡಬೇಕಿತ್ತು ಮಾಡಿಲ್ಲ ಮುಂಬರುವ ಅಧಿವೇಶನದಲ್ಲಿ ಮಾಡಬೇಕು ಕೇವಲ ಭರವಸೆ ನೀಡಿದರೆ ನಮ್ಮ ಸಮುದಾಯದ ಮತದಾರರು ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು. ನಮ್ಮ ಸಮುದಾಯದ ಜನರು ಯಾವುದೆ ಪಕ್ಷದ ಗುಲಾಮರಲ್ಲವೆಂದರು. ಮಂದಕೃಷ್ಣ ರವರು ಅಕ್ಟೋಬರ್ 4 ರಿಂದ ತೆಲಂಗಾಣದ ಆಲಂಪೂರ್ ನಿಂದ ಪಾದ ಯಾತ್ರೆ ಹಮ್ಮಿಕೊಂಡಿದ್ದು ನವೆಂಬರ 4 ರಂದು ಹೈದರಾಬಾದ್ ನಲ್ಲಿ ಸುಮಾರು 25 ಲಕ್ಷ ಜನರೊಂದಿಗೆ ಮಾದಿಗರ ವಿಶ್ವರೂಪಂ ಸಮಾವೇಶ ಹಮ್ಮಿಕೊಂಡಿದ್ದು ಜಿಲ್ಲೆಯಿಂದ ಸಹಸ್ರಾರು ಜನರು ಪಾಲ್ಗೊಳ್ಳುವಂತೆ ಅವರು ನಾಳೆಯ ಸಭೆಯಲ್ಲಿ ಕರೆ ನೀಡಲಿದ್ದಾರೆಂದು. ಈ ಸಂದರ್ಭದಲ್ಲಿ ಸುರೇಶ್ ದುಗನೂರು, ರಂಜಿತ್, ಧುಳ್ಳಯ್ಯ, ಜಕ್ರಪ್ಪ, ಗ್ಯಾರಿಕೇಶ, ಇತರರು ಇದ್ದರು.
Comments
Post a Comment