ನಗರದಲ್ಲಿ ವರ್ಷಕ್ಕೊಮ್ಮೆ ಮಾತ್ರ ಕೆಲವು ಗಂಟೆಗಳ ಕಾಲ ಅರಳುವ ಬ್ರಹ್ಮ ಕಮಲ


ನಗರದಲ್ಲಿ ವರ್ಷಕ್ಕೊಮ್ಮೆ ಮಾತ್ರ ಕೆಲವು ಗಂಟೆಗಳ ಕಾಲ ಅರಳುವ  ಬ್ರಹ್ಮ ಕಮಲ


ರಾಯಚೂರು,ಸೆ.28- ವರ್ಷಕ್ಕೊಮ್ಮೆ ಮಾತ್ರ ಕೆಲವು ಗಂಟೆಗಳ ಕಾಲ ಅರಳುವ ಬ್ರಹ್ಮಕಮಲ ರಾಯಚೂರಿನ ಶ್ರೀರಾಮನಗರ ಕಾಲೋನಿಯ ನ್ಯಾಯವಾದಿ ಅಯ್ಯನಗೌಡ ಗೊಲದಿನ್ನಿ ಮನೆಯ ಅಂಗಳದಲ್ಲಿ ಅರಳಿದೆ.                               ಮೂರು ತಿಂಗಳ ಕೆಳಗೆ ನೆಟ್ಟಿದ್ದ ಗಿಡದಲ್ಲಿ ಬಿಟ್ಟಿದ್ದ ಹೂ ಇಂದು ರಾತ್ರಿ ಅರಳಿದೆ. ಅಪರೂಪಕ್ಕೆ ಹೂಬಿಡುವ ಗಿಡದಲ್ಲಿ ಬ್ರಹ್ಮಕಮಲ ಅರಳಿರುವ ಹಿನ್ನಲೆ ಗೌರಮ್ಮ ಮತ್ತು ಅಯ್ಯನಗೌಡ ದಂಪತಿ ಬ್ರಹ್ಮಕಮಲಕ್ಕೆ ಪೂಜೆಯನ್ನ ಸಲ್ಲಿಸಿದ್ದಾರೆ. 


 ಬ್ರಹ್ಮಕಮಲಕ್ಕೆ  ಪುರಾಣದಲ್ಲಿ ವಿಶೇಷ ಮಹತ್ವ ತಿಳಿಸಲಾಗಿದೆ ಆದ್ದರಿಂದಲೇ ಈ ಹೂವಿಗೆ ವಿಶೇಷ ಮಹತ್ವವಿದೆ. ಹಿಮಾಲಯದ ಕೆಲವು ಭಾಗಗಳಲ್ಲಿ ಹೆಚ್ಚಾಗಿ ಕಂಡುಬರುವ ಬ್ರಹ್ಮ ಕಮಲ ಹೂವು ,ಇದು ಅರಳುವುದನ್ನು ನೋಡಿದವರಿಗೆ ಇಷ್ಟಾರ್ಥಗಳು ಈಡೇರುತ್ತವೆ ಅನ್ನೊ ಪ್ರತೀತಿ ಇರುವುದರಿಂದ ಬ್ರಹ್ಮ ಕಮಲಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತದೆ.

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಪ್ರಕಾಶ್ ದೇಸಾಯಿ ಚನ್ನಪ್ಪನಹಳ್ಳಿ ನಿಧನ.

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್