ಯರಮರಸ್‌ನಲ್ಲಿ ಶೀಘ್ರ ಹೊಸ ರೈಲ್ವೆ ಗೂಡ್ಸ್‌ ಶೆಡ್‌ ನಿರ್ಮಾಣ – ಬಾಬುರಾವ್

 


ಯರಮರಸ್‌ನಲ್ಲಿ ಶೀಘ್ರ ಹೊಸ ರೈಲ್ವೆ ಗೂಡ್ಸ್‌ ಶೆಡ್‌ ನಿರ್ಮಾಣ – ಬಾಬುರಾವ್

ರಾಯಚೂರು,ಸೆ.25- ನಗರದ ಹೃದಯಭಾಗದಲ್ಲಿರುವ ಕೇಂದ್ರ ರೈಲ್ವೆ ನಿಲ್ದಾಣದ ಸುಮಾರು ನೂರು ವರ್ಷಗಳ ಬ್ರಿಟಿಷ್‌ ಕಾಲದ ರೈಲ್ವೆ ಗೂಡ್ಸ್‌ ಶೆಡ್‌ ನಿಂದ ರಾಯಚೂರು ನಗರದ ಮಧ್ಯದ ಸ್ಟೇಷನ್‌ ರಸ್ತೆ ಮೂಲಕ ಓಡಾಡುತ್ತಿರುವ ಸರಕು ಸಾಗಣೆ ವಾಹನಗಳ ಸಂಚಾರ ದಟ್ಟಣೆಯಿಂದಾಗಿ ಸಾರ್ವಜನಿಕರಿಗೆ ಅತೀವ ತೊಂದರೆ ಹಾಗೂ  ಹಲವಾರು ಪ್ರಾಣಗಳು (ಕಳೆದ ವರ್ಷದ ಪೊಲೀಸ್‌ ಇಲಾಖೆ ಮಾಹಿತಿಯಂತೆ ಇಲ್ಲಿಯವರೆಗೆ ಸುಮಾರು ೧೪ಜನ) ಬಲಿಯಾಗಿರುವ ವಿಷಯವನ್ನು ತೀವ್ರವಾಗಿ ಗಮನಕ್ಕೆ ತೆಗೆದುಕೊಂಡು  ರಾಜಾ ಅಮರೇಶ್ವರ ನಾಯಕ, ಮಾನ್ಯ ಲೋಕಸಭಾ ಸದಸ್ಯರು ರಾಯಚೂರು ಇವರು ಕಳೆದ ವರ್ಷದಿಂದ ಸದರಿ ಗೂಡ್ಸ್‌ ಶೆಡ್‌ನ್ನು ಯರಮರಸ್‌ಗೆ ಸ್ಥಳಾಂತರಿಸಿ ಅಪಘಾತಗಳಿಂದ ಪಾರು ಮಾಡುವ ಬಗ್ಗೆ ಪ್ರಸ್ತಾವನೆಯ ಕುರಿತು  ಕೇಂದ್ರ ರೈಲ್ವೆ ಸಚಿವರಿಗೆ ಹಾಗೂ ಜನರಲ್‌ ಮ್ಯಾನೇಜರ್‌, ಸೌತ್‌ ಸೆಂಟ್ರಲ್‌ ರೈಲ್ವೆ, ಸಿಕಿಂದ್ರಾಬಾದ್‌ ಇವರಿಗೆ ಪತ್ರ ಬರೆಯಲಾಗಿತ್ತು. 


 ಅದರಂತೆ ರೈಲ್ವೆ ಬೋರ್ಡ್‌ ಸದಸ್ಯರಾದ  ಬಾಬುರಾವ್‌ರವರು ಸಹ ಕಳೆದ ವರ್ಷ ಸಿಕಿಂದ್ರಾಬಾದ್‌ನಲ್ಲಿ ನಡೆದ  ಸಭೆಯಲ್ಲಿ ರಾಯಚೂರು ರೈಲ್ವೆ ನಿಲ್ದಾಣವು ಅತ್ಯಂತ ಹಳೆಯ ನಿಲ್ದಾಣವಾಗಿದ್ದು, ಚೆನ್ನೈನಿಂದ-ಮುಂಬಯಿ ರೈಲು ಮಾರ್ಗದಲ್ಲಿ ಅತಿ ಹೆಚ್ಚು ಪ್ರಯಾಣಿಕರು ರಾಯಚೂರು  ಮೂಲಕ ದೇಶದ ಅನೇಕ ನಗರಗಳಿಗೆ ಪ್ರವಾಸ ಹಾಗೂ ವ್ಯವಹಾರಕ್ಕಾಗಿ ಸಂಚರಿಸುತ್ತಾರೆ ಹಾಗೂ ಏಷ್ಯಾದಲ್ಲಿಯೇ ಅತೀ ಹೆಚ್ಚು ಹತ್ತಿ ವ್ಯವಹಾರ, ಭತ್ತ ಇತರೆ ಕೃಷಿ ಉತ್ಪನ್ನಗಳ ಸರಕು ಸಾಗಣೆಯು ರೈಲುಗಳ ಮೂಲಕ ಹೊರ ರಾಜ್ಯಗಳಿಗೆ ಹೋಗುತ್ತವೆ. ಅದರಂತೆ ಗುಜರಾತ್‌, ಉತ್ತರಪ್ರದೇಶ್‌, ನ್ಯೂದೆಹಲಿ, ಗೋವಾ 
ಹಾಗೂ ಇನ್ನೂ ಅನೇಕ ಹೊರ ರಾಜ್ಯಗಳಿಂದಲೂ ರಸಗೊಬ್ಬರ ಸೇರಿದಂತೆ ನಾನಾ ರೀತಿಯ ಬಳಕೆ ಸಾಮಾಗ್ರಿಗಳು ನಗರಕ್ಕೆ ಆಮದು ಮಾಡಿಕೊಳ್ಳುವುದರಿಂದ ಮತ್ತು ರಾಷ್ಟ್ರೀಯ ಹೆದ್ದಾರಿ ೧೬೭ ನಗರದಲ್ಲಿ ಹಾದು ಹೋಗುತ್ತಿರುವ ಕಾರಣ ಸಾರಿಗೆ ಸಂಚಾರ ಹೆಚ್ಚಾಗಿರುವುದರಿಂದ ಅಪಘಾತಗಳು ಈಡಾಗಿ, ಹಲವಾರು ಪ್ರಾಣಗಳು ಬಲಿಯಾಗಿದ್ದು, ಕಾರಣ ಕೂಡಲೇ ರಾಯಚೂರು ಕೇಂದ್ರ ರೈಲ್ವೆ ನಿಲ್ದಾಣದಿಂದ ಗೂಡ್ಸ್‌ಶೆಡ್‌ನ್ನು ಯರಮರಸ್‌ ರೈಲ್ವೆ ನಿಲ್ದಾಣಕ್ಕೆ ಸ್ಥಳಾಂತರಿಸಲು ಪ್ರಸ್ತಾವನೆ ಸಲ್ಲಿಸಲು ಕೋರಲಾಗಿತ್ತು.   ಅದರಂತೆ ಸದರಿ ಗೂಡ್ಸ್‌ಶೆಡ್‌ ಸ್ಥಳಾಂತರದ ಕುರಿತ ಪ್ರಸ್ತಾವನೆಯ ಕಡತ ಕೇಂದ್ರ ರೈಲ್ವೆ ಬೋರ್ಡ್‌ನಿಂದ ಮಂಜೂರಾತಿ ಆಗಿದ್ದು, ಪ್ರಸ್ತುತ ಸುಮಾರು ರೂ.೨೦.೦೦ ಕೋಟಿ ಮೇಲ್ಪಟ್ಟ ಯೋಜನೆಯ ನೀಲಿ ನಕ್ಷೆಯ ಟೆಕ್ನಿಕಲ್‌ ಅಪ್ರೂವ್‌ಗಾಗಿ ರಾಯಚೂರು ರೈಲ್ವೆ ನಿಲ್ದಾಣದ ವಿಭಾಗೀಯ ಸಹಾಯಕ ಅಭಿಯಂತರರು ಇವರಿಂದ ಡಿವಿಜನಲ್‌ ರೈಲ್ವೆ ಮ್ಯಾನೇಜರ್‌, ಗುಂತಕಲ್‌ ಇವರಿಗೆ ಅನುಮೋದನೆಗಾಗಿ ಕಳುಹಿಸಲಾಗಿರುತ್ತದೆ.

ಈ ಪ್ರಸ್ತಾವನೆಯು ದಕ್ಷಿಣ ಮಧ್ಯ ರೈಲ್ವೆ ವಲಯ ಕಚೇರಿಯ ಮೂಲಕ ಕೇಂದ್ರ ರೈಲ್ವೆ ಮಂಡಳಿಯಿಂದ ಇನ್ನು ಸುಮಾರು ೦೬-೦೮ ತಿಂಗಳ ಒಳಗಾಗಿ ಪ್ರಸ್ತಾವನೆಯು ಅನುಮೋದನೆಗೊಂಡು ಅನುದಾನವನ್ನು ಬಿಡುಗಡೆ ಮಾಡಿದ ತಕ್ಷಣ ನಗರದ ಗೂಡ್ಸ್‌ಶೆಡ್‌ನ್ನು, ಯರಮರಸ್‌ ಹೊಸ ಗೂಡ್ಸ್‌ ಶೆಡ್‌ಗೆ ಸ್ಥಳಾಂತರಗೊಳ್ಳುತ್ತದೆ ಎಂದು 
ರೈಲ್ವೆ ಬೋರ್ಡ್‌ ಸದಸ್ಯರು ಹಾಗೂ ಮಾಜಿ ಎಪಿಎಂಸಿ ಉಪಾಧ್ಯಕ್ಷರಾದ ಬಾಬು ರಾವ್ ತಿಳಿಸಿದ್ದಾರೆ. 

Comments

Popular posts from this blog

ಒಪೆಕ್ ಆಸ್ಪತ್ರೆಗೆ ಸತ್ಯ ಸಾಯಿ ಫೌಂಡೇಶನ್ ತಂಡ ಭೇಟಿ: ಉನ್ನತ ವೈದ್ಯಕೀಯ ಸೇವೆಗಾಗಿ ಸರ್ಕಾರದೊಂದಿಗೆ ಚರ್ಚೆ

ಮಾ.12 ರಂದು ಕಲ್ಬುರ್ಗಿ - ಬೆಂಗಳೂರು ನಡುವೆ ವಂದೇ ಭಾರತ ರೈಲು ಸಂಚಾರ- ಬಾಬುರಾವ್

ತರಕಾರಿ ಮಾರಾಟಗಾರರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಂಬಾಜಿರಾವ್ ಒತ್ತಾಯ