ಕೋಟೆ ಕೊತ್ತಲಗಳು ಅಭಿವೃದ್ಧಿ ಮರೀಚಿಕೆ : ಪ್ರವಾಸೋದ್ಯಮ ಉತ್ತೇಜನಕ್ಕೆ ಜಿಲ್ಲೆಯಲ್ಲಿ ಅನೇಕ ತಾಣಗಳು ಲಭ್ಯ.
ಕೋಟೆ ಕೊತ್ತಲಗಳು ಅಭಿವೃದ್ಧಿ ಮರೀಚಿಕೆ : ಪ್ರವಾಸೋದ್ಯಮ ಉತ್ತೇಜನಕ್ಕೆ ಜಿಲ್ಲೆಯಲ್ಲಿ ಅನೇಕ ತಾಣಗಳು ಲಭ್ಯ. ರಾಯಚೂರು,ಸೆ.30- ನಮ್ಮ ಜಿಲ್ಲೆ ಕೋಟೆ ಕೊತ್ತಲಗಳ ನಾಡಾಗಿದೆ ಇಲ್ಲಿ ಅನೇಕ ಅರಸರು ಆಳ್ವಿಕೆ ನಡೆಸಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ಅನೇಕ ಪಳಿಯುಳಿಕೆಗಳು ಇನ್ನೂ ನೋಡಲು ಸಿಗುತ್ತವೆ ಆದರೆ ಅವುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಪ್ರಾಚ್ಯವಸ್ತು ಇಲಾಖೆ, ಪ್ರವಾಸೋದ್ಯಮ ಇಲಾಖೆ ಮುಂದಾಗಬೇಕಿದೆ.
ಜಿಲ್ಲೆಯಲ್ಲಿ ಅನೇಕ ಸಾಮ್ರಾಜ್ಯಗಳು ಆಡಳಿತ ನಡೆಸಿವೆ. ವಿಜಯನಗರ, ಕಾಕತೀಯ, ಬಹಮನಿ,ಮುಂತಾದ ಸಾಮ್ರಾಜ್ಯಗಳು ಇಲ್ಲಿ ನೆಲೆ ನಿಂತಿದ್ದವು ಮಸ್ಕಿಯಲ್ಲಿ ಅಶೋಕ ಶಿಲಾ ಶಾಸನಗಳು ಇವೆ, ಮಲಿಯಾಬಾದ್ ನಲ್ಲಿ ವಿಜಯನಗರ ಸಾಮ್ರಾಜ್ಯದ ಕುರುಹುಗಳು ಲಭಿಸಿವೆ ರಾಯಚೂರು ಕೋಟೆಯನ್ನು ಕಾಕತೀಯ ರಾಣಿ ರುದ್ರಮ್ಮ ದೇವಿ ನಿರ್ಮಿಸಿದ್ದಳು ಎಂಬ ಐತಿಹ್ಯವಿದೆ.
ನಂತರ ಬಿಜಾಪುರ ಆದಿಲ್ ಶಾಹಿಗಳು ರಾಯಚೂರು ಕೋಟೆ ವಶಪಡಿಸಿಕೊಂಡರು ಎಂಬುದಾಗಿ ತಿಳಿದುಬರುತ್ತದೆ. ನಗರದಲ್ಲಿ ಇಂದಿಗೂ ಕೆಲ ದ್ವಾರ ಬಾಗಿಲುಗಳಾದ ನವರಂಗ ದರವಾಜಾ, ಕಾಟೆ ದರವಾಜಾ, ಅಂದ್ರೂನ ಕಿಲ್ಲಾ, ಬೆಹರೂನ ಕಿಲ್ಲಾ, ಪೇಟ್ಲಾ ಬುರ್ಜ್, ಕಲ್ಲಾನೆ, ಮುಂತಾದವುಗಳು ಇಲ್ಲಿನ ಇತಿಹಾಸಕ್ಕೆ ಸಾಕ್ಷಿಯಾಗಿವೆ. ಐತಿಹಾಸಿಕ ಮಾವಿನ ಕೆರೆ ಭೂಗಳ್ಳರಿಂದ ಒತ್ತುವರಿಯಾಗಿ ಕಲುಷಿತ ನೀರಿನ ಸಂಗ್ರಹದಿಂದ ತನ್ನ ನೈಜ ಸ್ವರೂಪ ಕಳೆದುಕೊಂಡಿದೆ ಕೆಲ ವರ್ಷಗಳ ಹಿಂದೆ ಮಾವಿನಕೆರೆಯಲ್ಲಿ ವಾಯುವಿಹಾರ , ಕಿರು ದೋಣಿ ವಿಹಾರ ಸೌಕರ್ಯ ಕಲ್ಪಿಸಲಾಗಿತ್ತು ಅನಂತರ ಅದು ಸ್ಥಗಿತಗೊಂಡಿತು.
ನಗರದ ಹೃದಯ ಭಾಗದಲ್ಲಿರುವ ಕಲ್ಲಾನೆ ನಗರದ ಇತಿಹಾಸವನ್ನು ಸಾರುವ ಪ್ರತೀಕವಾಗಿದ್ದು ಅದರ ಸೌಂದರೀಕರಣಕ್ಕೆ ದಶಕಗಳಿಂದ ಕೂಗು ಕೇಳಿ ಬರುತ್ತಿದ್ದರು ಜಿಡ್ಡುಗಟ್ಟಿರುವ ವ್ಯವಸ್ಥೆ ಕಾರಣ ಅದು ಸಾಕಾರವಾಗಿಲ್ಲ. ಕೋಟೆಗಳ ರಕ್ಷಣೆ ಮಾಡಿ ಪ್ರೇಕ್ಷಣೀಯ ತಾಣಗಳು ಅಭಿವೃದ್ಧಿ ಗೊಳಿಸಿದರೆ ಸರ್ಕಾರಕ್ಕೆ ಆದಾಯವು ಬರುತ್ತದೆ ಜೊತೆಗೆ ಜಿಲ್ಲೆಯ ಹೆಸರು ಮುನ್ನೆಲೆಗೆ ಬರುತ್ತದೆ. ದೋಆಬ್ ಪ್ರದೇಶವೆಂದರೆ ಎರೆಡು ನದಿಗಳು ನಾಡು ಇಂತಹ ಪ್ರಾಕೃತಿಕ ಸಂಪತ್ತಿನ ಜಿಲ್ಲೆ ತನ್ನ ಸೊಬಗನ್ನು ಹೆಚ್ಚಿಸಿಕಳ್ಳಬೇಕೆಂದರೆ ಇಲ್ಲಿರುವ ಐತಿಹಾಸಿಕ ಕುರುಹುಗಳನ್ನು ರಕ್ಷಿಸಬೇಕಾದ ಜವಾಬ್ದಾರಿ ಸರ್ಕಾರದ್ದಾಗುತ್ತದೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ಕೋಟೆಗಳ ಅಭಿವೃದ್ಧಿ ಬಗ್ಗೆ ಉಲ್ಲೇಖಿಸಲಾಗಿದ್ದು ಅದು ಕಾರ್ಯಗತವಾಗಬೇಕೆನ್ನುವುದು ಇತಿಹಾಸ ಪ್ರೀಯರ ಒತ್ತಾಯವಾಗಿದೆ.
Comments
Post a Comment