ಅ.28 ರಂದು ಯಶವಂತಪುರ ಬೀದರ್ ನಡುವೆ ವಿಶೇಷ ರೈಲು
ಅ.28 ರಂದು ಯಶವಂತಪುರ ಬೀದರ್ ನಡುವೆ ವಿಶೇಷ ರೈಲು ರಾಯಚೂರು,ಅ. 27- ಪ್ರಯಾಣಿಕರ ಒತ್ತಡ ಕಡಮೆ ಮಾಡಲು ಯಶವಂತಪುರ ಬೀದರ ನಡುವೆ ದಿ. 28 ರಂದು ವಿಶೇಷ ರೈಲು 06523 ಓಡಿಸಲಾಗುತ್ತಿದೆ ಎಂದು ರೈಲ್ವೆ ಬೋರ್ಡ್ ಸದಸ್ಯರಾದ ಬಾಬುರಾವ್ ತಿಳಿಸಿದ್ದಾರೆ. ಈ ರೈಲು ಅಂದು ರಾತ್ರಿ 11.15.ಗೆ ಯಶವಂತಪುರ ಬಿಟ್ಟು ದಿ. 29 ರಂದು ಮಧ್ಯಾಹ್ನ 1 ಗಂಟಗೆ ಬೀದರ ತಲುಪುತ್ತದೆ. ಈ ರೈಲು ಧರ್ಮಾವರಂ, ಗುಂತಕಲ್, ಮಂತ್ರಾಲಯಂ ಮೂಲಕ ರಾಯಚೂರಿಗೆ ದಿ. 29 ರಂದು ಬೆಳಿಗ್ಗೆ 7.35 ಕ್ಕೆ ಬರುತ್ತದ ನಂತರ ವಾಡಿ ಕಲ್ಬುರ್ಗಿ ಮೂಲಕ ಬೀದರ್ ಗೆ ತೆರಳುತ್ತದೆ ಪ್ರಯಾಣಿಕರು ಇದರ ಲಾಭ ಪಡೆಯಲು ಕೋರಿದ್ದಾರೆ.
Comments
Post a Comment