ಅ.28 ರಂದು ಕಲ್ಮಲಾ ಶ್ರೀ ಲಕ್ಷ್ಮಿವೆಂಕಟೇಶ್ವರ ರಥೋತ್ಸವ
ಅ.28 ರಂದು ಕಲ್ಮಲಾ ಶ್ರೀ ಲಕ್ಷ್ಮಿವೆಂಕಟೇಶ್ವರ ರಥೋತ್ಸವ
ರಾಯಚೂರು,ಅ.27- ಶ್ರೀ ನರಹರಿ ತೀರ್ಥರಿಂದ ಪ್ರತಿಷ್ಠಾಪಿತವಾದ ಮೊದಲಕಲ್ ಶೇಷ ದಾಸರಿಂದ ಪುನ: ಪ್ರತಿಷ್ಠಾಪಿತ ಶ್ರೀ ಭೂ ಸಮೇತ ಶ್ರೀ ಲಕ್ಷ್ಮಿವೆಂಕಟೇಶ್ವರ ದೇವಸ್ಥಾನ ಕಲ್ಮಲಾದಲ್ಲಿ ಅ.28 ರಂದು ಬೆಳಿಗ್ಗೆ 10 ಗಂಟೆಗೆ ರಥೋತ್ಸವ ಅದಕ್ಕೂ ಮುಂಚೆ ಪಂಡಿತ್ ಶ್ರೀಹರಿ ಆಚಾರ್ ಪೂಜಾರ್ ಮಾದನೂರು ಇವರಿಂದ ಪ್ರವಚನ ನಂತರ ಪಂಡಿತ್ ಮುಕುಂದಾಚಾರ್ ಜೋಶಿ ಇವರಿಂದ ವೆಂಕಟೇಶ ಮಹಾತ್ಮೆ ಮಂಗಳ ಮಹೋತ್ಸವ ಗ್ರಹಣದ ಪ್ರಯುಕ್ತ ಸರಿಯಾದ ಸಮಯಕ್ಕೆ ರಥೋತ್ಸವ ಜರುಗಲಿದ್ದು ಭಕ್ತಾದಿಗಳು ಆಗಮಿಸಿ ತನು ಮನದಿಂದ ಸೇವೆ ಗೈದುಶ್ರೀ ವೆಂಕಟೇಶ್ವರ ಕೃಪೆಗೆ ಪಾತ್ರರಾಗ ಬೇಕೆಂದು ಅರ್ಚಕರಾದ ಕೊಪ್ರೇಶ ಆಚಾರ ಜೋಷಿ , ವೆಂಕಟೇಶ್ ಆಚಾರ ಜೋಷಿ ಕಲಮಲಾ ರವರು ಕೋರಿದ್ದಾರೆ.
Comments
Post a Comment