ಉಪ್ಪಾರವಾಡಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ 52 ನೇ ನವರಾತ್ರಿ ಉತ್ಸವ: ಉಚ್ಛಾಯ ಮಹೋತ್ಸವ
ಉಪ್ಪಾರವಾಡಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ 52 ನೇ ನವರಾತ್ರಿ ಉತ್ಸವ: ಉಚ್ಛಾಯ ಮಹೋತ್ಸವ
ರಾಯಚೂರು, ಅ.21- ನಗರದ ಉಪ್ಪಾರವಾಡಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ 52ನೇ ನವರಾತ್ರಿ ಉತ್ಸವದ ಅಂಗವಾಗಿ ಆಂಜನೇಯ ವಾಹನೋತ್ಸವ ಹಾಗೂ ಉಚ್ಛಾಯ ಮಹೋತ್ಸವ ಜರುಗಿತು.
7ನೇ ದಿನವಾದ ಶನಿವಾರ ದಂದು ಬೆಳಗ್ಗೆ 5:30ಕ್ಕೆ ಸುಪ್ರಭಾತ ಸೇವೆ, 7:30ಕ್ಕೆ ಸಂಕಲ್ಪ ಸೇವೆ, 8: 30ಕ್ಕೆ ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ ಹಾಗೂ 9 ಗಂಟೆಗೆ ದೇವರಿಗೆ ಮಹಾಮಂಗಳಾರತಿ ಹಾಗೂ 11:00 ಗಂಟೆಗೆ ಪವಮಾನ ಹೋಮ ಜರುಗಿತು.
ಸಂಜೆ 6:30ಕ್ಕೆ ಪಲ್ಲಕ್ಕಿಯಲ್ಲಿ ಆಂಜನೇಯ ವಾಹನೋತ್ಸವ ನಂತರ 7:30ಕ್ಕೆ ಉಚ್ಛಾಯವನ್ನು ದೇವಸ್ಥಾನದಿಂದ ಗೀತಾ ಮಂದಿರದ ವರೆಗೆ ಹೋಗಿ ಪುನಃ ದೇವಸ್ಥಾನಕ್ಕೆ ಮರಳಲಾಯಿತು. ನಂತರ ಸಂಗೀತ ಸೇವೆ, ಅಂಬಾಭವಾನಿ ತಂಡದವರಿಂದ ನರ್ತನ ಸೇವೆ ಹಾಗೂ ಭಗವಂತನಿಗೆ ಮಹಾಮಂಗಳಾರತಿ ಆದ ನಂತರ ಪ್ರಸಾದವನ್ನು ವಿತರಿಸಲಾಯಿತು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಕಲ ಭಕ್ತಾದಿಗಳು ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾದರು.
Comments
Post a Comment