ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ದಂಧೆಗಳ ಕಡಿವಾಣಕ್ಕೆ ಸಂಸದ ರಾಜಾ ಅಮರೇಶ್ವರ ನಾಯಕರಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮೌಖಿಕ ಮಾಹಿತಿ ಹಾಗೂ ಮನವಿ ಪತ್ರ
ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ದಂಧೆಗಳ ಕಡಿವಾಣಕ್ಕೆ ಸಂಸದ ರಾಜಾ ಅಮರೇಶ್ವರ ನಾಯಕರಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮೌಖಿಕ ಮಾಹಿತಿ ಹಾಗೂ ಮನವಿ ಪತ್ರ
ರಾಯಚೂರು,ಅ.22-ಜಿಲ್ಲೆಯಲ್ಲಿ ಯಥೇಚ್ಛವಾಗಿ ಪಂಚ ಅಕ್ರಮಗಳು ನಿರಂತರವಾಗಿ ನಡೆಯುತ್ತಿದ್ದು ಇದರಿಂದ ಅಮಾಯಕ ಬಡ ಕೂಲಿ ಕಾರ್ಮಿಕರು, ರೈತರು ಹಾಗೂ ಇತರೆ ಸಾರ್ವಜನಿಕರು ನಿತ್ಯ ಬಲಿಯಾಗುತ್ತಿದ್ದು ಅವುಗಳನ್ನು ತಡೆಹಿಡಿಯಲು ಸೂಕ್ತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅವಶ್ಯಕತೆ ಇದೆಯೆoದು ರಾಯಚೂರು ಸಂಸದರಾದ ಶ್ರೀ ರಾಜಾ ಅಮರೇಶ್ವರ ನಾಯಕರವರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ್.ಆರ್. ಪಾಟೀಲ್ ಅವರಿಗೆ ನಿನ್ನೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯ ನಂತರ ವೈಯುಕ್ತಿಕವಾಗಿ ಸಚಿವರಿಗೆ ಈ ವಿಷಯಗಳ ಕುರಿತು ಮಾಹಿತಿ ನೀಡಿ ಪತ್ರವನ್ನು ಸಹ ನೀಡಿದರು. ಮಾನ್ಯ ಸಚಿವರಿಗೆ ನೀಡಿದ ಪತ್ರದಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ . ಅಕ್ರಮ ಮರಳು ಸಾಗಾಣಿಕೆ- ಇದು ಬಹಳ ದಿನಗಳಿಂದ ಜಿಲ್ಲೆಯಲ್ಲಿ ನಡೆದಿದ್ದು ವಿಶೇಷವಾಗಿ ದೇವದುರ್ಗ ಮತ್ತು ಮಾನವಿ ತಾಲೂಕು ಗಳಲ್ಲಿ ಅತಿಹೆಚ್ಚಿನ ಅಕ್ರಮ ಸಾಗಾಣಿಕೆ ಆಗುತ್ತಿದ್ದು ತಡೆಯಲು ಹೋದ ಅನೇಕ ಸರ್ಕಾರಿ ನೌಕರರು,ಕಾರ್ಮಿಕರು, ಅಮಾಯಕ ಜನರು ಬಲಿಯಾಗಿರುತ್ತಾರೆ. ಈ ಅಕ್ರಮ ಮರಳು ಸಾಗಣಿಕೆಯಿಂದ ಜಿಲ್ಲೆಗೆ ರಾಜಧನ ಬರುತ್ತಿಲ್ಲ ಮತ್ತು ರಸ್ತೆಗಳು, ಪರಿಸರ ಹಾಳಾಗುತ್ತಿದೆ ಎಂದು ತಿಳಿಸಿದರು. ಅಕ್ರಮ ಆಹಾರ ಧಾನ್ಯಗಳ ಸರಬರಾಜು- ಜಿಲ್ಲೆಯಲ್ಲಿ ಬಡ ಜನರಿಗೆ ನೀಡಬೇಕಾದ ಆಹಾರಧಾನ್ಯಗಳು ಅಕ್ರಮ ಸಾಗಾಣಿಕೆ ಎಗ್ಗಿಲ್ಲದೆ ನಡೆಯುತ್ತಿದ್ದು, ಕೇಂದ್ರ ಸರ್ಕಾರದ ಗರೀಬ್ ಕಲ್ಯಾಣ ಆಹಾರ ಧಾನ್ಯಗಳು, ರಾಜ್ಯ ಸರ್ಕಾರದಿಂದ ನೀಡುವ ಆಹಾರ ಧಾನ್ಯಗಳ ಅಕ್ರಮ ಸಾಗಾಣಿಕೆಯ ಜಾಲ ಬಹಳ ದೂರದವರೆಗೆ ಹಬ್ಬಿದ್ದು ಬಡ ಜನರಿಗೆ ನೀಡಬೇಕಾದ ಆಹಾರ ಧಾನ್ಯಗಳು ಇತರ ರಾಜ್ಯಗಳಿಗೆ ಸರಬರಾಜು ಆಗುತ್ತಿವೆ ಇದರಿಂದ ಜಿಲ್ಲೆಯ ಬಡ ಜನರಿಗೆ ಅನ್ಯಾಯವಾಗುತ್ತಿದೆ ಎಂದು ತಿಳಿಸಿರವರು. ಅಕ್ರಮ ಹಾರುಬೂದಿ ಸಾಗಾಣಿಕೆ:ಜಿಲ್ಲೆಯ ಶಕ್ತಿನಗರದಲ್ಲಿರುವ ಆರ್ ಟಿ ಪಿ ಎಸ್ ನಿಂದ ಸರಬರಾಜು ಆಗುತ್ತಿರುವ ಹಾರುಬೂದಿಯ ಸಾಗಾಣಿಕೆ ಸಹ ಅಕ್ರಮವಾಗಿ ನಡೆಯುತ್ತಿದೆ. ಪ್ರತಿನಿತ್ಯ ಸಾವಿರಾರು ಹಾರುಬೂದಿ ಟ್ಯಾಂಕರ್ ಗಳು ರಾಜ್ಯದ ಕೆಲವು ಜಿಲ್ಲೆಗಳಿಗೆ ಅಲ್ಲದೆ ಇತರೆ ರಾಜ್ಯಗಳಿಗೆ ಅಕ್ರಮವಾಗಿ ಸರಬರಾಜು ಆಗುತ್ತಿದೆ ಪ್ರತಿನಿತ್ಯ ಹೆಚ್ಚಿನ ಭಾರವಾದ ಟ್ಯಾಂಕರ್ ಗಳು ಕಿರಿದಾದ ಮತ್ತು ಸಿಥಿಲಾವಸ್ಥೆಯಲ್ಲಿರುವ ಕೃಷ್ಣ ಬ್ರಿಡ್ಜ್ರ ರಸ್ತೆ ಮೂಲಕ ಹೋಗುತ್ತಿರುವುದರಿಂದ ಸಂಪೂರ್ಣ ರಸ್ತೆ, ಬ್ರಿಡ್ಜ್ ಹಾಳಾಗುತ್ತಿದ್ದು, ದುರಸ್ತಿ ಮಾಡಿಸಿದರೂ ಸಹ ವ್ಯರ್ಥವಾಗುತ್ತಿದೆ ಮತ್ತು ಪ್ರತಿನಿತ್ಯ ಆಹಾರ ಧಾನ್ಯಗಳ ಸರಬರಾಜು ವಾಹನಗಳಿಗೆ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ ಮತ್ತು ಅಲ್ಲಿನ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಅಕ್ರಮ ಮಧ್ಯ ಸಾಗಾಣಿಕೆ: ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿ ಕಲಬೆರಿಕೆ ಅಕ್ರಮ ಮಧ್ಯವು ಬಡ ಕುಟುಂಬಗಳ ಮನೆ ಮನೆಗೆ ಸಾಗಾಣಿಕೆ ಆಗುತ್ತಿದ್ದು ಇದರಿಂದ ಬಡವರು,ಕೂಲಿ ಕಾರ್ಮಿಕರು ಆಸ್ಪತ್ರೆ ಪಾಲಾಗುತ್ತಿತ್ತು ಅಮಾಯಕ ಜೀವಗಳು ಬಲಿಯಾಗುತ್ತಿರುವವು. ಮಧ್ಯದ ಜೊತೆಗೆ ಗಾಂಜಾ ಸಹ ಅಕ್ರಮವಾಗಿ ಸರಬರಾಜಾದಗುತ್ತಿದ್ದು ಇತ್ತೀಚೆಗೆ ಚಾಕಲೇಟ್ ಗಳಲ್ಲಿ ಅಕ್ರಮ ಗಾಂಜಾ ಅಳವಡಿಸಿ ಮಾರಾಟವಾಗುತ್ತಿರುವುದು ಕಳವಳಕಾರಿಯಾಗಿದೆ. ಇದರಿಂದ ಹಳ್ಳಿಗಳಲ್ಲಿ ಅಶಾಂತಿ ಹೆಚ್ಚಾಗುತ್ತಿದ್ದು ಇದನ್ನು ಶೀಘ್ರವಾಗಿ ತಡೆಹಿಡುವುದು ಅವಶ್ಯಕವಾಗಿದೆ ಎಂದು ತಿಳಿಸಿದರು. ಅಕ್ರಮ ಜೂಜಾಟ ಅಡ್ಡೆಗಳು: ಜಿಲ್ಲೆಯಲ್ಲಿ ಎಲ್ಲಾ ತಾಲೂಕುಗಳ ಹಲವಾರು ಸ್ಥಳಗಳಲ್ಲಿ ಯಥೇಚ್ಛವಾಗಿ ಅಕ್ರಮ ಜೂಜಾಟ /ಇಸ್ಪೀಟ್ /ಮಟ್ಕಾ ಹಡ್ಡೆಗಳು ಹೆಚ್ಚಾಗಿದ್ದು ಇದರಿಂದ ಅಮಾಯಕ ಬಡ ಜನರು ಬಲಿಯಾಗುತ್ತಿದ್ದಾರೆ ಕೆಲ ದಂಧೆ ಕೋರದಿಂದ ನಡೆಯುವ ಈ ಅಕ್ರಮಗಳು ತಡೆದು ಮುಗ್ಧ ಜನರ ಸುಗಮ ಜೀವನಕ್ಕೆ ಆಸರೆಯಾಗುವುದು ಅವಶ್ಯವಾಗಿದೆ ಎಂದು ತಿಳಿಸಿರುವರು. ಈ ಪಂಚ ಅಕ್ರಮಗಳನ್ನು ತಡೆಯಲು ಮಾನ್ಯ ಸಚಿವರು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆಯನ್ನು ಕರೆದು ಕಟ್ಟುನಿಟ್ಟಿನ ಕ್ರಮ ಗಳನ್ನು ಕೈಗೊಂಡು ಯುದ್ಧೋಪಾದಿಯಲ್ಲಿ ಅಕ್ರಮಗಳನ್ನು ತಡೆಯಲು ಸೂಚನೆ ನೀಡಬೇಕೆಂದು ತಿಳಿಸಿರುವರು. ಮುಂದಿನ ದಿನಗಳಲ್ಲಿ ಈ ಅಕ್ರಮಗಳು ಕಡಿಮೆ ಆಗದಿದ್ದ ಪಕ್ಷದಲ್ಲಿ ಈ ಗಂಭೀರ ವಿಷಯಗಳನ್ನು ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳವರಿಗೆ ಮಾನ್ಯ ರಾಜ್ಯ ಗೃಹ ಸಚಿವರ ಗಮನಕ್ಕೆ ತರಬೇಕಾಗುತ್ತದೆ ಎಂದು ಆದಷ್ಟು ತೀವ್ರ ಜಿಲ್ಲೆಯಲ್ಲಿ ನಡೆಯುತ್ತಿರುವ ಈ ಪಂಚ ಅಕ್ರಮಗಳ ತಡೆಗೆ ಸೂಕ್ತ ಕ್ರಮ ಕೈಗೊಳ್ಳಲು ಪತ್ರದಲ್ಲಿ ತಿಳಿಸಿದ್ದಾರೆ.
Comments
Post a Comment