ಪಿ.ಎಂ ಸ್ವನಿಧಿ ಮತ್ತು ಪಿ.ಎಂ ವಿಶ್ವಕರ್ಮ ಯೋಜನೆಗಳ ಅನುಷ್ಠಾನ ಕುರಿತು ಮಾಜಿ ಸಚಿವ ಎಸ್.ಎ.ರಾಮದಾಸ್ ಅವರ ನೇತೃತ್ವದಲ್ಲಿ ಸಭೆ.
ಪಿ.ಎಂ ಸ್ವನಿಧಿ ಮತ್ತು ಪಿ.ಎಂ ವಿಶ್ವಕರ್ಮ ಯೋಜನೆಗಳ ಅನುಷ್ಠಾನ ಕುರಿತು ಮಾಜಿ ಸಚಿವ ಎಸ್.ಎ.ರಾಮದಾಸ್ ಅವರ ನೇತೃತ್ವದಲ್ಲಿ ಸಭೆ.
ರಾಯಚೂರು,ಅ.28- ಪಿ.ಎಂ ಸ್ವನಿಧಿ ಮತ್ತು ಪಿ.ಎಂ ವಿಶ್ವಕರ್ಮ ಯೋಜನೆಗಳ ಅನುಷ್ಠಾನ ಕುರಿತು ಮಾಜಿ ಸಚಿವರು ಹಾಗೂ ಸದರಿ ಯೋಜನೆಗಳ ಅನುಷ್ಠಾನದ ರಾಜ್ಯ ಉಸ್ತುವಾರಿಗಳಾದ ಶ್ರೀ ಎಸ್.ಎ. ರಾಮದಾಸ್ ರವರು ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಜಿಲ್ಲಾಮಟ್ಟದ ಅವಲೋಕನ ಸಭೆಯನ್ನು ನಡೆಸಿ ಅಧಿಕಾರಿಗಳ ಜೊತೆಗೆ ಮಾಹಿತಿ ತಗೊಂಡು ಮುಂದಿನ ಕಾರ್ಯಯೋಜನೆಗಳ ಬಗ್ಗೆ ವಿಸ್ತೃತವಾದ ಸಭೆಯನ್ನು ಮಾಡಿ ಪಿ.ಎಂ.ಸ್ವಾನಿಧಿ ಯಿಂದ ಸಮೃದ್ಧಿಯವರಿಗೆ ಈ ಏಳು ಯೋಜನೆಗಳು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಲು ಹೇಳಿದರು.
ನಂತರ ಪಕ್ಷದ ಕಾರ್ಯಕರ್ತರ ಜೊತೆಗೆ ಈ ಯೋಜನೆಗಳ ಮಾಹಿತಿ ಉಪಯೋಗ,ಪ್ರಚಾರ, ಸಾರ್ವಜನಿಕರಿಗೆ ಯಾವ ರೀತಿಯಲ್ಲಿ ಈ ಯೋಜನೆಗಳನ್ನು ತಲುಪಿಸಬೇಕು ಎಂಬ ಮಾಹಿತಿ ತಿಳಿಸಿದರು.
ಇದೆ ಸಂದರ್ಭದಲ್ಲಿ ರಾಯಚೂರು ನಗದ ಗೋಶಾಲೆ ರಸ್ತೆಯಲ್ಲಿ ಕಟಿಗೆ ಪೀಠೋಪಕರಣದ ಕೆಲಸ ಮಾಡುವ ಕಾರ್ಖಾನೆಗೆ ಬೇಟಿ ನೀಡಿ ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಎನ್.ಶಂಕ್ರಪ್ಪ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಂಕರ್ ರೆಡ್ಡಿ,ಜಿಲ್ಲಾ ಉಪಾಧ್ಯಕ್ಷರಾದ ಕೆ.ಎಂ.ಪಾಟೀಲ್, ರಾಜಕುಮಾರ, ಡಿ, ಶರಣಪ್ಪಗೌಡ ನಕ್ಕುಂದಿ, ಯೈ.ಗೋಪಲ ರೆಡ್ಡಿ, ಬಿ.ಗೋವಿಂದ, ಶಂಕರ್ ಗೌಡ, ಜಂಬಣ್ಣ ಮಂದಕಲ್, ಅನಿಫ್, ವೆಂಕಟೇಶ, ವಿ.ಪಿ.ರೆಡ್ಡಿ, ಗುರುಗೌಡ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.
Comments
Post a Comment