ಬಿಜೆಪಿ ಗ್ರಾಮೀಣ ಮಂಡಲದಿಂದ ನನ್ನ ಮಣ್ಣು ನನ್ನ ದೇಶ ಅಭಿಯಾನ
ಬಿಜೆಪಿ ಗ್ರಾಮೀಣ ಮಂಡಲದಿಂದ ನನ್ನ ಮಣ್ಣು ನನ್ನ ದೇಶ ಅಭಿಯಾನ ರಾಯಚೂರು,ಅ.21- ಭಾರತೀಯ ಜನತಾ ಪಾರ್ಟಿ ರಾಯಚೂರು ಗ್ರಾಮೀಣ ಮಂಡಲ ವತಿಯಿಂದ ದೆಹಲಿಯ ಕರ್ತವ್ಯ ಪಥದಲ್ಲಿ ನಿರ್ಮಾಣವಾಗುತ್ತಿರುವ ಅಮೃತ ವಾಟಿಕಾ ವನಕ್ಕಾಗಿ ನನ್ನ ಮಣ್ಣು ನನ್ನ ದೇಶ ಅಭಿಯಾನಕ್ಕೆ ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಪವಿತ್ರ ಪುಣ್ಯ ಕ್ಷೇತ್ರಗಳಿಂದ ಮಣ್ಣು ಸಂಗ್ರಹಿಸಿ ಜಿಲ್ಲಾ ಕಛೇರಿಯಲ್ಲಿ ಜಿಲ್ಲಾ ಅಧ್ಯಕ್ಷರಾದ ರಮಾನಂದ ಯಾದವ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರ ರೆಡ್ಡಿ ಯವರಿಗೆ ಗ್ರಾಮೀಣ ಮಂಡಲ ಅಧ್ಯಕ್ಷರಾದ ಶಂಕರಗೌಡ ಮಿರ್ಜಾಪುರ, ಸಂಚಾಲಕರಾದ ಶಾಂತಕುಮಾರ ಉಪ್ರಾಳ ರವರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ನರಸಿಂಹ ನಾಯಕ ಹಂಚಿನಾಳ ,ನಾಗೇಶ ನಾಯಕ ದುಗನೂರ್ ,ವೆಂಕಟೇಶ ನಾಯಕ ಮಟಮಾರಿ ,ನರಸಿಂಹ ನಾಯಕ ಗುಂಜಳ್ಳಿ ಉಪಸ್ತಿತರಿದ್ದರು.
Comments
Post a Comment