ಎಕೆಬಿಎಂಎಸ್ ನಿಂದ ಶತ ಕೋಟಿ ಶ್ರೀ ರಾಮನಾಮ ಜಪ ಯಜ್ಞ : ಸರ್ವರು ಜಪ ಯಜ್ಞದಲ್ಲಿ ಪಾಲ್ಗೊಳ್ಳಿ- ಶ್ರೀ ಸುಬುಧೇಂದ್ರ ತೀರ್ಥ ಶ್ರೀಗಳು
ಎಕೆಬಿಎಂಎಸ್ ನಿಂದ ಶತ ಕೋಟಿ ಶ್ರೀ ರಾಮನಾಮ ಜಪ ಯಜ್ಞ : ಸರ್ವರು ಜಪ ಯಜ್ಞದಲ್ಲಿ ಪಾಲ್ಗೊಳ್ಳಿ- ಶ್ರೀ ಸುಬುಧೇಂದ್ರ ತೀರ್ಥ ಶ್ರೀಗಳು ರಾಯಚೂರು,ಅ.19- ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಹಮ್ಮಿಕೊಳ್ಳಲಾದ ಶ್ರೀ ರಾಮನಾಮ ಜಪ ಯಜ್ಞ, ಶತ ಕೋಟಿ ರಾಮ ತಾರಕ ಮಂತ್ರ ಜಪ ಹಾಗೂ ಶ್ರೀ ರಾಮ ತಾರಕ ಮಹಾಯಜ್ಞ ಕಾರ್ಯಕ್ರಮ ಇದೇ ಅ.24 ರಂದು ವಿಜಯ ದಶಮಿ ಶುಭ ಸಂದರ್ಭದಲ್ಲಿ ಪ್ರಾರಂಭ ಗೊಂಡು ಅಯೋಧ್ಯ ಶ್ರೀ ರಾಮ ಮಂದಿರ ಪುನಃ ಪ್ರತಿಷ್ಠಾಪನೆ ದಿನ ಪೂರ್ಣ ಗೊಳಿಸುವ ಕಾರ್ಯ ಕ್ಕೆ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಶ್ರೀ ಸುಬುಧೇಂದ್ರತೀರ್ಥ ತೀರ್ಥ ಶ್ರೀ ಪಾದಂಗಳವರ ಆಶೀರ್ವಾದ ಅನುಗ್ರಹ ವನ್ನು ಶ್ರೀ ರಾಯರ ಸನ್ನಿದಿ ಮಂತ್ರಾಲಯ ದಲ್ಲಿ ಪಡೆದು ಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಶ್ರೀ ಗಳು ಮಾತಾಡಿ ಭಾರತ ದೇಶದ ಹಿಂದೂಗಳ ಸುಮಾರು ವರ್ಷದ ಕನಸು ಶ್ರೀ ರಾಮ ಮಂದಿರ ನಿರ್ಮಾಣ ನಿರ್ವಿಘ್ಞ ವಾಗಿ ನೆರವೇರಲಿದ್ದು ಸಕಲ ಹಿಂದೂ ಶ್ರೀ ರಾಮ ಭಕ್ತ ರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಕರ್ನಾಟಕ ರಾಜ್ಯ ವತಿಯಿಂದ ಆಯೋಜಿಸಲಾಗಿರುವ ಈ ಶ್ರೀ ರಾಮ ನಾಮ ಜಪ ಯಜ್ಞ ದಲ್ಲಿ ಪಾಲ್ಗೊಂಡು ಶ್ರೀ ರಾಮದೇವರ ಕೃಪೆಗೆ ಪಾತ್ರ ರಾಗಲು ಆಶೀರ್ವಾದ ಮಾಡಿದರು . ಈ ಸಂದರ್ಭದಲ್ಲಿ ಮಹಾ ಯಜ್ಞ ಕಾರ್ಯಕ್ರಮ ದ ಪ್ರಧಾನ ಸಂಚಾಲಕರಾದ ಶ್ರೀ ರಾಘವೇಂದ್ರ ಭಟ್,ಮಹಾಸಭಾದ ಉಪಾಧ್ಯಕ್ಷರಾದ ಡಾ. ಆನಂದತೀರ್ಥ ಫಡ್ನೀಸ್, ಮಹಾಸಭೆ ಯ ರಾಜ್ಯ ಯುವ ಘಟಕ ಉಪಾಧ್ಯಕ್ಷರಾದ ಹನುಮೇಶ ಸರಾಫ್, ರಾಯಚೂರು ಜಿಲ್ಲೆ ಸಂಚಾಲಕರಾದ ಡಿ.ಕೆ.ಮುರಳೀಧರ, ವಿನೋದ್ ಕಕ್ಕೇರಿ ಮತ್ತಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
Comments
Post a Comment